ರಾಖಿ ಸಾವಂತ್ ಗೆ ಸಿಕ್ಕ ಮೈಸೂರಿನ ಹೊಸ ಬಾಯ್ ಫ್ರೆಂಡ್: ಆತನ ಕುಟುಂಬಕ್ಕೆ ರಾಖಿ ಬಟ್ಟೆನೇ ಸಮಸ್ಯೆ!!

Entertainment Featured-Articles Movies News

ಬಾಲಿವುಡ್‌ ನ ಡ್ರಾಮಾ ಕ್ವೀನ್ ಖ್ಯಾತಿಯ ನಟಿ ರಾಖಿ ಸಾವಂತ್ ಬಿಗ್ ಬಾಸ್ ನಂತರ ತಮ್ಮ ಪತಿಯಿಂದ ದೂರವಾಗಿದ್ದಾರೆ. ರಾಖಿಯು ಪತಿ ರಿತೇಶ್ ನಿಂದ ದೂರವಾದ ಮೇಲೆ ಕೆಲವು ದಿನಗಳ ಕಾಲ ಡಿಪ್ರೆಶನ್ ನಲ್ಲಿ ಇದ್ದೆ ಎಂದು ಹೇಳಿದ್ದಾರೆ. ಈಹ ರಾಖಿಗೆ ಹೊಸ ಬಾಯ್ ಫ್ರೆಂಡ್ ಸಿಕ್ಕಾಗಿದೆ. ರಾಖಿಯ ಹೊಸ ಬಾಯ್ ಫ್ರೆಂಡ್ ಹೆಸರು ಆದಿಲ್ ಖಾನ್. ಇವರು ಮೈಸೂರಿನವರು ಎಂದು ರಾಖಿ ಹೇಳಿದ್ದಾರೆ. ಇನ್ನು ಕೆಲವು ದಿನಗಳ ಹಿಂದೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ರಾಖಿ ಸಾವಂತ್ ದುಬಾರಿ ಕಾರಿನ ಒಡತಿಯಾಗಿದ್ದು, ಸಹಜವಾಗಿಯೇ ಎಲ್ಲರಲ್ಲೂ ಅನುಮಾನ ಮೂಡಿತ್ತು.

ರಾಖಿ ಬಳಿ ಇಷ್ಟೊಂದು ದುಬಾರಿ ಕಾರು ಎಲ್ಲಿಂದ ಬಂತು ಎಂದು ಪ್ರಶ್ನೆ ಮಾಡಿದರು. ಈಗ ಎಲ್ಲಾ ಅನುಮಾನಗಳಿಗೂ ಉತ್ತರವನ್ನು ನೀಡಿರುವ ನಟಿ ರಾಖಿ ಸಾವಂತ್ ತನಗೆ ಹೊಸ ದುಬಾರಿ ಕಾರನ್ನು ಆದಿಲ್ ಖಾನ್ ಉಡುಗೊರೆಯಾಗಿ ನೀಡಿದ್ದಾರೆ ಎನ್ನುವ ಮಾತನ್ನು ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೊಸ ಬಾಯ್ ಫ್ರೆಂಡ್ ಜೊತೆಗಿನ ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡಿ ಕೊಂಡಿದ್ದಾರೆ. ರಿತೇಶ್ ಜೊತೆಗೆ ಬ್ರೇಕಪ್ ನ ನಂತರ ಆದಿಲ್ ಖಾನ್ ಪರಿಚಯವಾಯಿತು.

ಪರಿಚಯವಾದ ಒಂದು ತಿಂಗಳಿನಲ್ಲಿ ಆದಿಲ್ ತನಗೆ ಪ್ರೇಮ ನಿವೇದನೆ ಮಾಡಿಕೊಂಡರು ಎಂದು ರಾಖಿ ಹೇಳಿದ್ದಾರೆ. ನನಗಿಂತ ಆರು ವರ್ಷ ಕಿರಿಯನಾದ ಆದಿಲ್ ತಮಗೆ ಮಲೈಕ ಅರೋರ, ಅರ್ಜುನ್ ಕಪೂರ್, ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಸ್ ಉದಾಹರಣೆಯನ್ನು ನೀಡಿದರು. ಇದೆಲ್ಲಾ ಕೇಳಿದ ಮೇಲೆ ನನಗೂ ಅವರ ಮೇಲೆ ಪ್ರೇಮ ಹುಟ್ಟಿದೆ. ಆದಿಲ್ ನನ್ನನ್ನು ಭೇಟಿಯಾಗಲು ಮುಂಬೈಗೆ ಬಂದಿದ್ದರು.

ನನ್ನನ್ನು ಮೈಸೂರಿಗೆ ಕರೆದಿದ್ದರು. ನನಗೆ ದುಬಾರಿ ಉಡುಗೊರೆಯನ್ನು ಕೊಟ್ಟಿದ್ದಾರೆ. ನಾನು ಮೈಸೂರಿಗೆ ಬಂದಾಗ ಹೋಟೆಲಿನಲ್ಲಿ ಉಳಿದುಕೊಂಡಿದ್ದೆ. ಶೋಗಳಲ್ಲಿ ಬ್ಯುಸಿನೆಸ್ ಪಾರ್ಟನರ್ ಆಗಿದ್ದ ಶೈಲೆ ಅವರ ಸಹೋದರ ಆದಿಲ್. ಶೈಲೆ ಅವರಿಂದ ಆದಿಲ್ ನನ್ನ ನಂಬರ್ ತೆಗೆದುಕೊಂಡರು. ಮನರಂಜನಾ ಕ್ಷೇತ್ರದಲ್ಲಿ ಇರುವ ನನ್ನ ಆದಿಲ್ ಸಂಬಂಧದ ಬಗ್ಗೆ ಅವರ ಕುಟುಂಬಕ್ಕೆ ಅಸಮಾಧಾನ ಇದೆ. ಅವರಿಗೆ ನಾನು ಧರಿಸುವ ವಸ್ತ್ರಗಳು ಇಷ್ಟವಾಗುವುದಿಲ್ಲ.

ಅಗತ್ಯ ಬಿದ್ದರೆ ನಾನು ನನ್ನ ಉಡುಗೆಯ ವಿನ್ಯಾಸವನ್ನು ಬದಲಾಯಿಸಿಕೊಳ್ಳಲು ಸಿದ್ಧವಾಗಿದ್ದೇನೆ. ಆದಿಲ್ ಈ ವಿಚಾರವಾಗಿ ನನಗೆ ಯಾವುದೇ ಬಲವಂತ ಮಾಡಿಲ್ಲ. ಆದರೆ ಆತ ಎಲ್ಲಾ ಕಡೆಯಿಂದಲೂ ಹಿಂದೆ ಅನುಭವಿಸುತ್ತಿದ್ದಾನೆ. ಬಹಳ ಕಷ್ಟದಿಂದ ನನಗೆ ಪ್ರೀತಿ ಸಿಕ್ಕಿದೆ. ಆತನ ಕುಟುಂಬ ನನ್ನನ್ನು ಒಪ್ಪಿಕೊಳ್ಳುವಂತೆ ಆಗಲಿ ಎಂದು ರಾಖಿ ಹೇಳಿಕೊಂಡಿದ್ದಾರೆ. ಅಲ್ಲದೇ ಇಂದಿನ ಹುಡುಗಿಯರೆಲ್ಲಾ ನಾನು ಧರಿಸುವಂತಹ ಬಟ್ಟೆಗಳನ್ನು ತೊಡುತ್ತಾರೆ ಎಂದಿದ್ದಾರೆ.

Leave a Reply

Your email address will not be published. Required fields are marked *