ರಾಕೇಶ್ ನಾನು ಬಳಸಿ ಬಿಸಾಡಿದ……? ಇದೇನು ರಾಕೇಶ್ ಬಗ್ಗೆ ಸೋನು ಹೀಗಾ ಅನ್ನೋದು? ಎಲ್ಲರೂ ಶಾಕ್!

Written by Soma Shekar

Updated on:

---Join Our Channel---

ಬಿಗ್ ಬಾಸ್ ಮನೆಯಲ್ಲಿ ಲವ್ ಸ್ಟೋರಿ ಗಳಿಗೆ ಖಂಡಿತ ಕೊರತೆಯಿಲ್ಲ. ಇಲ್ಲಿ ಕೆಲವೊಂದು ಲವ್ ಸ್ಟೋರಿ ಗಳಿ ಎಷ್ಟು ಬೇಗ ಹುಟ್ಟಿಕೊಳ್ಳುತ್ತದೆಯೋ ಅಷ್ಟೇ ಬೇಗ ಮುಗಿದು ಕೂಡಾ‌ ಹೋಗುತ್ತದೆ. ಆದರೆ ಕೆಲವೊಂದು ಮಾತ್ರ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೂ ಸಹಾ ಮುಂದುವರೆಯುತ್ತೆ. ಆದರೆ ಈಗ ಬಿಗ್ ಬಾಸ್ ಕನ್ನಡ ಓಟಿಟಿಯಲ್ಲಿ ಮಾತ್ರ ಒಂದು ತ್ರಿಕೋನ್ ಪ್ರೇಮ ಕಥೆ ಅಥವಾ ಲವ್ ಟ್ರಯಾಂಗಲ್ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಿದೆ. ಹೌದು, ರಾಕೇಶ್ ಅಡಿಗ ಅವರ ಮೇಲೆ ಸ್ಪೂರ್ತಿ ಗೌಡ ಹಾಗೂ ಸೋನು ಶ್ರೀನಿವಾಸ್ ಗೌಡ ಇಬ್ಬರಿಗೂ ಸಹಾ ಮನಸ್ಸಾದಂತೆ ಕಂಡಿದ್ದು, ಈ ಮೂವರ ನಡುವೆ ನಡೀತಿರೋ ಸನ್ನಿವೇಶ ಗಳು ಕುತೂಹಲ ಮೂಡಿಸಿವೆ.

ರಾಕೇಶ್ ಅಡಿಗ ಮತ್ತು ಸ್ಪೂರ್ತಿ ಗೌಡ ನಡುವೆ ಏನೋ ಇದೆ ಎನ್ನುವ ಅನುಮಾನವಂತೂ ಮೊದಲಿಂದ ಇದ್ದು, ಹಾಗೆ ಬಿಂಬಿಸಲಾಗಿದೆ. ರಾಕೇಶ್ ಅಡಿಗ ಈಗಾಗಲೇ ಸ್ಪೂರ್ತಿ ಬಳಿ, ಕೊನೆ ಪಕ್ಷ ನಾನು ಇಷ್ಟ ಅಂತಾದ್ರು ಹೇಳು ಎಂದು ಕೇಳಿದ್ದಾರೆ. ಇನ್ನು ಸ್ಪೂರ್ತಿ ಗೌಡ ಗುರೂಜಿ ಗಳ ಬಳಿ ತನ್ನ ಹಾಗೂ ರಾಕೇಶ್ ಅವರ ಜಾತಕ ಹೊಂದಾಣಿಕೆಯಾಗುತ್ತಾ ಎನ್ನುವ ಮಾತನ್ನು ಕೇಳಿದ್ರು. ಇದೇ ವೇಳೆ ಇನ್ನೊಂದು ಕಡೆ ಸೋನು ಕೂಡಾ ರಾಕೇಶ್ ಮೇಲೆ ಮನಸ್ಸಾದಂತೆ ವರ್ತಿಸಿದ್ದಾರೆ. ರೂಪೇಶ್ ಬಳಿ ಅವನು ನನ್ನ ಹುಡುಗ ಎಂದು ಹೇಳಿಕೊಂಡಿದ್ದಾರೆ. ರಾಕೇಶ್ ಬಳಿ ಸಹಾ ಪರೋಕ್ಷವಾಗಿ ಈ ವಿಚಾರ ಮಾತನಾಡಿದ್ದಾರೆ.

ಇವೆಲ್ಲವುಗಳ ನಡುವೆ ಈಗ ಒಂದು ಹೊಸ ವಿಷಯ ಎಲ್ಲರಿಗೂ ಅಚ್ಚರಿಯನ್ನು ಮೂಡಿಸ್ತಾ ಇದೆ. ಅದೇನಂದ್ರೆ, ಬಿಗ್ ಬಾಸ್ ಮನೆಯಲ್ಲಿ ಸ್ಪೂರ್ತಿ ಗೌಡ ಮತ್ತು ಸೋನು ಗೌಡ ಇಬ್ಬರ ನಡುವೆ ಮಾತುಕತೆ ಆರಂಭವಾಗುತ್ತದೆ. ಈ ವೇಳೆ ಅವರ ಮಾತು ನಡೆದಿದ್ದು ರಾಕೇಶ್ ಬಗ್ಗೆ. ಸೋನು ಟಿಶ್ಯೂ ಪೇಪರ್ ಬಗ್ಗೆ ಮಾತಾಡ್ತಾ, ಟಿಶ್ಯೂ ಪೇಪರ್ ನ ಬಳಸಿದ ನಂತರ ಏನ್ಮಾಡ್ತಾರೆ ಅಂತ ಕೇಳಿದ್ದಾರೆ. ಆಗ ಸ್ಪೂರ್ತಿ ಅದಕ್ಕೆ ಉತ್ತರ ನೀಡುತ್ತಾ ಟಿಶ್ಯೂ ಪೇಪರ್ ಬಳಸಿದ ಮೇಲೆ ಬಿಸಾಡ್ತೀವಿ ಅಂತಾರೆ. ಆಗ ಸೋನು ನಾನು ರಾಕೇಶ್ ಅನ್ನೋ ಟಿಶ್ಯೂ ಪೇಪರ್ ಅನ್ನು ಬಳಸಿ ಬಿಸಾಕಿದ್ದೀನಿ ಎಂದಿದ್ದಾರೆ.

ಸೋನು ಗೌಡ ನೀಡಿದ ಈ ಶಾಕಿಂಗ್ ಸ್ಟೇಟ್ ಮೆಂಟ್ ಈಗ ಎಲ್ಲರಿಗೂ ಅಚ್ಚರಿ ಯನ್ನು ಮೂಡಿಸಿದೆ. ಅವರು ಯಾವ ಅರ್ಥದಲ್ಲಿ ರಾಕೇಶ್ ಅಡಿಗ ಅವರನ್ನು ಈ ರೀತಿ ಟಿಶ್ಯೂ ಪೇಪರ್ ಗೆ ಹೋಲಿಕೆ ಮಾಡಿದ್ದಾರೆ ಅನ್ನೋದು ಮಾತ್ರ ಗೊತ್ತಾಗಿಲ್ಲ. ಆದರೆ ಅವರನ್ನು ಆ ರೀತಿ ಹೋಲಿಕೆ ಮಾಡಿ ಮಾತನಾಡಿ ಸಖತ್ ಎಂಜಾಯ್ ಮಾಡಿದ್ದಾರೆ ಸೋನು. ಇನ್ನು ಇವರ ಮೂವರ ನಡುವೆ ಏನ್ ನಡೀತಾ ಇದೆ ಅನ್ನೋದು ಮುಂದಿನ ದಿನಗಳಲ್ಲಿ ಖಂಡಿತ ಗೊತ್ತಾಗುತ್ತದೆ ಅನ್ನೋದ್ರಲ್ಲಿ ಅನುಮಾನ ಇಲ್ಲ.

Leave a Comment