ರೂಪೇಶ್ ಅಲ್ಲ, ರಾಕೇಶ್ ಗೆಲ್ಲಬೇಕಿತ್ತು: ಬಿಗ್ ಬಾಸ್ ಮುಗಿದ ಮೇಲೆ ಹೊರ ಬಿದ್ದ ನೆಟ್ಟಿಗರ ಅಸಮಾಧಾನ

Entertainment Featured-Articles Movies News
30 Views

ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಬಹು ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಒಂಬತ್ತಕ್ಕೆ(Big Boss Kannada) ತೆರೆ ಬಿದ್ದಾಗಿದೆ. ನೂರು ದಿನಗಳ ಯಶಸ್ವಿ ಜರ್ನಿಯ ನಂತರ, ನಟ ರೂಪೇಶ್ ಶೆಟ್ಟಿ ಈ ಸೀಸನ್ ನ ವಿನ್ನರ್ ಆಗಿ ಹೊರ ಹೊಮ್ಮಿದ್ದು, ಬಿಗ್ ಬಾಸ್ ಟ್ರೋಫಿಯನ್ನು ಗೆದ್ದು ಬೀಗಿದ್ದಾರೆ. ವಿನ್ನರ್ ಆದ ರೂಪೇಶ್ ಶೆಟ್ಟಿ(Roopesh Shetty) ಅರವತ್ತು ಲಕ್ಷ ರೂಪಾಯಿ ನಗದು ಬಹುಮಾನದ ಜೊತೆಗೆ ಆಕರ್ಷಕವಾದ ಬಿಗ್ ಬಾಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ. ರೂಪೇಶ್ ಶೆಟ್ಟಿ ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ‌ ಖುಷಿಯನ್ನು ಸಹಾ ಹಂಚಿಕೊಂಡಿದ್ದಾರೆ.

ಈ ಸೀಸನ್ ನಲ್ಲಿ ಟಾಪ್ ಎರಡರ ವರೆಗೆ ಬಂದ ರಾಕೇಶ್ ಅಡಿಗ(Rakesh Adiga) ಅವರು ರನ್ನರ್ ಅಪ್ ಆಗಿದ್ದಾರೆ. ಬಿಗ್ ಬಾಸ್ ಮುಗಿದಾಗಿದೆ, ವಿನ್ನರ್ ಘೋಷಣೆ ಆಗಿದೆ. ಆದರೆ ಈ ವಿಚಾರದಲ್ಲಿ ಈಗ ಅನೇಕರು ಸೋಶಿಯಲ್ ಮೀಡಿಯಾಗಳಲ್ಲಿ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಹೌದು, ಸೋಶಿಯಲ್ ಮೀಡಿಯಾಗಳಲ್ಲಿ ಅನೇಕರು ಈ ಬಾರಿ ಬಿಗ್ ಬಾಸ್ ಟ್ರೋಫಿ ರಾಕೇಶ್ ಅಡಿಗ ಅವರ ಕೈ ಸೇರಬೇಕಾಗಿತ್ತು. ಅವರೇ ಬಿಗ್ ಬಾಸ್ ವಿನ್ನರ್(Big Boss Winner) ಆಗಬೇಕಿತ್ತು ಎಂದು ತಮ್ಮ ಅನಿಸಿಕೆ, ಅಭಿಪ್ರಾಯವನ್ನು ಹಂಚಿಕೊಂಡು, ಬಿಗ್ ಬಾಸ್ ಶೋ ನ ಬಗ್ಗೆ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ.

ಬಿಗ್ ಬಾಸ್ ನ ಪ್ರತಿ ಸೀಸನ್ ಕೊನೆಯಲ್ಲೂ ವಿನ್ನರ್ ಘೋಷಣೆ ಆದ ಮೇಲೆ ಇಂತಹುದೊಂದು ಅಸಮಾಧಾನ ಮತ್ತು ವಿನ್ನರ್ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಲೇ ಬರುತ್ತಿದೆ. ಈಗ ಈ ಸೀಸನ್ ಮುಗಿದ ಮೇಲೆ ಮತ್ತೊಮ್ಮೆ ಅದೇ ನಡೆದಿದ್ದು, ಬಹಳಷ್ಟು ಜನರು ರಾಕೇಶ್ ಅಡಿಗ ವಿನ್ನರ್ ಆಗಬೇಕಿತ್ತು ಎಂದಿದ್ದಾರೆ. ಇನ್ನೂ ಒಂದು ವರ್ಗದ ಜನರು ಈ ಬಾರಿ ರೂಪೇಶ್ ರಾಜಣ್ಣ(Roopesh Rajanna) ವಿನ್ನರ್ ಆಗಬೇಕಿತ್ತು ಎಂದರೆ, ಮತ್ತೆ‌ ಕೆಲವರು ದೀಪಿಕಾ ದಾಸ್(Deepika Das) ಎನ್ನುತ್ತಿದ್ದಾರೆ. ಸದ್ಯಕ್ಕಂತೂ ರಾಕೇಶ್ ಅಡಿಗ ಗೆಲ್ಲಬೇಕಿತ್ತು ಎನ್ನುವವರ ಸಂಖ್ಯೆ ಕೂಡಾ ಕಡಿಮೆಯೇನಿಲ್ಲ.

ರಾಕೇಶ್ ಅಡಿಗ (Rakesh Adiga) ಮತ್ತು ರೂಪೇಶ್ ಶೆಟ್ಟಿ(Roopesh Shetty) ಇಬ್ಬರೂ ಸಹಾ ಓಟಿಟಿ ಬಿಗ್ ಬಾಸ್ ನ ಮೊದಲ ಸೀಸನ್ ನಿಂದ ಟಿವಿ ಬಿಗ್ ಬಾಸ್ ಗೆ ಎಂಟ್ರಿ ನೀಡಿದ್ದರು. ಅಲ್ಲದೇ ರಾಕೇಶ್ ಅಡಿಗ ಅವರ ಅಭಿಮಾನಿಗಳು, ರಾಕೇಶ್ ಅಡಿಗ ರೂಪೇಶ್ ಅವರಿಗೆ ಸರಿ ಸಮನಾಗಿ ಪೈಪೋಟಿ ನೀಡುತ್ತಾ ಬಂದಿದ್ದರು, ಆದರೆ ಅವರಿಗೆ ಟ್ರೋಫಿ ಸಿಗಲಿಲ್ಲ ಎನ್ನುವುದು ಬೇಸರ ಎಂದು ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಓಟಿಟಿಯಿಂದ ಆರಂಭವಾದ ಇವರ ಜರ್ನಿ ಟಿವಿ ಬಿಗ್ ಬಾಸ್ ನಲ್ಲಿ ಫಿನಾಲೆ ವರೆಗೂ ಬಂದಿದ್ದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

Leave a Reply

Your email address will not be published. Required fields are marked *