ರಾಕೆಟ್ ವೇಗದಲ್ಲಿ ಏರುತ್ತಿದೆ ಟಾಲಿವುಡ್ ನಟರ ಸಂಭಾವನೆ: ಶಾಕಿಂಗ್ ಎನ್ನುವಂತಿದೆ ನಟರ ಸಂಭಾವನೆ

Written by Soma Shekar

Published on:

---Join Our Channel---

ಇತ್ತೀಚಿನ ದಿನಗಳಲ್ಲಿ ಟಾಲಿವುಡ್ ಸಿನಿಮಾ ಹೀರೋ ಗಳ ಸಿನಿಮಾಗಳಿಗಿಂತ ಅವರ ಸಂಭಾವನೆಯ ವಿಷಯ ಸಖತ್ ಸದ್ದು ಮಾಡುತ್ತಿದೆ. ಅಲ್ಲದೇ ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಏರುತ್ತಿರುವ ಹಾಗೆಯೇ ಟಾಲಿವುಡ್ ನಟರ ಸಂಭಾವನೆಯ ಮೊತ್ತ ಕೂಡಾ ಏರುತ್ತಿದೆ. ಬಾಹುಬಲಿ ಸಿನಿಮಾಗಳ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಸ್ಟಾರ್ ಎನಿಸಿಕೊಂಡಿರುವ ನಟ ಪ್ರಭಾಸ್ ಪ್ರಸ್ತುತ ಟಾಲಿವುಡ್ ನಟರಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನಿಸಿಕೊಂಡಿದ್ದು, ಪ್ರಭಾಸ್ ಸಂಭಾವನೆ ನಿಜಕ್ಕೂ ಶಾ ಕಿಂ ಗ್ ಎನ್ನಲಾಗಿತ್ತಿದೆ.

ಟಾಲಿವುಡ್ ಚಿತ್ರ ಸೀಮೆಯಿಂದ ಇತ್ತೀಚಿಗೆ ಕೇಳಿ ಬಂದಿರುವ ಸುದ್ದಿಯೊಂದರ ಪ್ರಕಾರ ಒಂದು ಸಿನಿಮಾಕ್ಕಾಗಿ ಪ್ರಭಾಸ್ ಪಡೆದಿರುವ ಸಂಭಾವನೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ, ಹೌದು ನಟ ಪ್ರಭಾಸ್ ಬರೋಬ್ಬರಿ 100 ಕೋಟಿಗಳ ಸಂಭಾವನೆ ಕೇಳುತ್ತಾರೆನ್ನಲಾಗಿದೆ. ಇನ್ನು ಪ್ರಭಾಸ್ ನಟನೆಯ ರಾಧೇ ಶ್ಯಾಮ್ ಬಿಡುಗಡೆಗೆ ಸಜ್ಜಾಗುತ್ತಿದೆ. ಅಲ್ಲದೇ ಸಲಾರ್, ಆದಿಪುರುಷ್ ಚಿತ್ರೀಕರಣದ ಹಂತದಲ್ಲಿದೆ. ಇದಲ್ಲದೇ ಈ ವರ್ಷವೇ ಇನ್ನೂ ಎರಡು ಹೊಸ ಪ್ರಾಜೆಕ್ಟ್ ಗಳನ್ನು ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

ಅಲ್ಲದೇ ಅರ್ಜುನ್ ರೆಡ್ಡಿ ಸಿನಿಮಾ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ರ ಹೊಸ ಸಿನಿಮಾಕ್ಕೆ ಪ್ರಭಾಸ್ 150 ಕೋಟಿ ರೂ.ಗಳ ಬೇಡಿಕೆಯನ್ನು ಇಟ್ಟಿದ್ದಾರೆ ಎನ್ನಲಾಗಿದೆ. ಪ್ರಭಾಸ್ ಬೇಡಿಕೆಗೆ ಸಿನಿಮಾ ನಿರ್ಮಾಪಕರು ಸಹಾ ಓಕೆ ಎಂದಿದ್ದಾರೆ ಎನ್ನುವ ಸುದ್ದಿ ಕೂಡಾ ಕೇಳಿ ಬಂದಿದೆ. ಇನ್ನು ಸಂಭಾವನೆ ವಿಷಯದಲ್ಲಿ ನಟ ರಾಮ್ ಚರಣ್ ತೇಜಾ ಕೂಡಾ ಒಂದು ಹೆಜ್ಜೆ ಮುಂದೆ ಇಟ್ಟಿದ್ದು ಆರ್ ಆರ್ ಆರ್ ಸಿನಿಮಾ ನಂತರ ತಮ್ಮ ಸಂಭಾವನೆಯನ್ನು ಏರಿಸಿಕೊಂಡಿದ್ದಾರ ಎನ್ನುವ ವಿಷಯ ಹೊರಗೆ ಬಂದಿದೆ.

ರಾಮ್ ಚರಣ್ ತೇಜಾ ಆರ್ ಆರ್ ಆರ್ ಸಿನಿಮಾ ನಂತರ ‘ಆರ್ ಸಿ 15’ ಸಿನಿಮಾ ಮಾಡುತ್ತಿದ್ದು, ನಿರ್ದೇಶಕ ಶಂಕರ್ ಅವರ ನಿರ್ದೇಶನದಲ್ಲಿ ಬಾರೀ ಬಜೆಟ್ ನೊಂದಿಗೆ ಸಿನಿಮಾ ನಿರ್ಮಾಣವಾಗಲಿದೆ ಎನ್ನಲಾಗಿದ್ದು, ಈ ಹೊಸ ಸಿನಿಮಾಕ್ಕೆ ರಾಮ್ ಚರಣ್ ತೇಜಾ ಅವರು ಬರೋಬ್ಬರಿ 80 ಕೋಟಿ ಸಂಭಾವನೆಯ ಬೇಡಿಕೆಯನ್ನು ಇಟ್ಟಿದ್ದಾರೆ ಎನ್ನಲಾಗಿದೆ. ದಿಲ್ ರಾಜು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ಸಿನಿಮಾ ಇರಲಿದೆ ಎನ್ನಲಾಗಿದೆ.

Leave a Comment