ರಾಕಿ ಭಾಯ್ ಗೆ ರಾಖಿ ಕಟ್ಟಿ ಸಂಭ್ರಮಿಸಿದ ಸಹೋದರಿ: ಫೋಟೋ ಶೇರ್ ಮಾಡಿ ಖುಷಿ ಹಂಚಿಕೊಂಡ ರಾಕಿ ಭಾಯ್

0 3

ರಕ್ಷಾ ಬಂಧನ ಹಬ್ಬಕ್ಕೆ ನಮ್ಮ ದೇಶದಲ್ಲಿ ಒಂದು ವಿಶೇಷವಾದ ಮಹತ್ವ ಇದೆ.‌ ಶ್ರಾವಣ ಮಾಸದಲ್ಲಿ ಬರುವ ಈ ವಿಶೇಷವಾದ ಹಬ್ಬವು ಸಹೋದರ ಸಹೋದರಿಯರಿಗೆ ಸಂಭ್ರಮದ ಹಬ್ಬವಾಗಿದೆ. ಇಂದು ಇಡೀ ದೇಶದಾದ್ಯಂತ ಸಹೋದರ ಮತ್ತು ಸಹೋದರಿಯರು ರಕ್ಷಾ ಬಂಧನವನ್ನು ಸಂತೋಷದಿಂದ ಆಚರಿಸುತ್ತಿದ್ದಾರೆ. ರಕ್ಷಾ ಬಂಧನದ ದಿನದಂದು ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುವ ಮೂಲಕ ಸಹೋದರರ ಕ್ಷೇಮವನ್ನು ಕೋರಿದರೆ, ಸಹೋದರರು ತಮ್ಮ ಸಹೋದರಿಯರಿಗೆ ಸದಾ ರಕ್ಷಣೆಯನ್ನು ನೀಡುವ ಭರವಸೆಯನ್ನು ನೀಡುತ್ತಾರೆ. ಅಲ್ಲದೇ ಸಹೋದರಿಯರು ತಮ್ಮ ಸಹೋದರರಿಂದ ಉಡುಗೊರೆಗಳನ್ನು ಸಹಾ ಇಂದು ಪಡೆಯುತ್ತಾರೆ.

ಸೆಲೆಬ್ರಿಟಿಗಳು ಸಹಾ ರಕ್ಷಾ ಬಂಧನವನ್ನು ಬಹಳ ಸಂಭ್ರಮ ಮತ್ತು ಸಡಗರದಿಂದ ಆಚರಿಸುತ್ತಾರೆ. ಇಂದು ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್ ಅವರು ಸಹಾ ತಮ್ಮ ಸಹೋದರಿಯ ಜೊತೆಗೆ ರಕ್ಷಾ ಬಂಧನವನ್ನು ಸಂಭ್ರಮಿಸಿದ್ದಾರೆ. ಇಂದು ಬೆಳಿಗ್ಗೆಯೇ ನಟ ಯಶ್ ಅವರ ಸಹೋದರಿ ನಂದಿನಿ ಅವರು ತಮ್ಮ ಪ್ರೀತಿಯ ಸಹೋದರನಿಗೆ ರಾಖಿಯನ್ನು ಕಟ್ಟಿ ಖುಷಿ ಪಟ್ಟಿದ್ದಾರೆ. ಪ್ರತಿ ವರ್ಷ ದಂತೆ ಈ ವರ್ಷ ಸಹಾ ನಂದಿನಿ ಅವರು ಸಂಭ್ರಮದಿಂದ ರಕ್ಷಾ ಬಂಧನವನ್ನು ಆಚರಿಸಿಕೊಂಡು, ತಮ್ಮ ಸಹೋದರನಿಗೆ ರಾಖಿಯನ್ನು ಕಟ್ಟಿದ್ದಾರೆ.

ಕೆಜಿಎಫ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಸಹೋದರಿಯೊಂದಿಗೆ ರಾಖಿ ಹಬ್ಬವನ್ನು ಸಂಭ್ರಮಿಸಿದ ಸುಂದರವಾದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದು, ಅವರು ಶೇರ್ ಮಾಡಿದ ಫೋಟೋಗಳಿಗೆ ಅಭಿಮಾನಿಗಳಿಂದ ದೊಡ್ಡ ಸಂಖ್ಯೆಯಲ್ಲಿ ಮೆಚ್ಚುಗೆಗಳು ಹರಿದು ಬರುತ್ತಿದೆ. ರಾಖಿ ಭಾಯ್ ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯವನ್ನು ತಿಳಿಸಿದ್ದಾರೆ. ಯಶ್ ಅವರು ಶೇರ್ ಮಾಡಿದ ಫೋಟೋಗಳಿಗೆ ಅನೇಕರು ಕಾಮೆಂಟ್ ಮಾಡಿ ಶುಭ ಹಾರೈಸಿದ್ದಾರೆ.

Leave A Reply

Your email address will not be published.