ರಾಕಿಂಗ್ ಸ್ಟಾರ್ ಯಶ್ ನಟಿಸಿದ್ದ ‘ಕಿರಾತಕ’ ಸಿನಿಮಾ ನಿರ್ದೇಶಕ ಕೊರೊನಾಗೆ ಬಲಿ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸೂಪರ್ ಹಿಟ್ ಸಿನಿಮಾ ಕಿರಾತಕ ದಂತಹ ಜನ ಮೆಚ್ಚಿದ ಸಿನಿಮಾವನ್ನು ನಿರ್ದೇಶಕ ಮಾಡಿದ್ದ ನಿರ್ದೇಶಕ ಪ್ರದೀಪ್ ರಾಜ್ ಅವರು ನಿಧನರಾಗಿದ್ದಾರೆ. ಪ್ರದೀಪ್ ರಾಜ್ ಅವರು ಕೊರೊನಾ ದಿಂದ ಬಳಲುತ್ತಿದ್ದು, ಹಲವು ದಿನಗಳಿಂದ ಅವರು ಅನಾರೋಗ್ಯದ ಸಮಸ್ಯೆಯಿಂದ ಬಳಲಿದ್ದರು ಎನ್ನಲಾಗಿದೆ. ಪ್ರದೀಪ್ ರಾಜ್ ಅವರು ಗುರುವಾರ ಬೆಳಿಗಿನ ಜಾವ ಮೂರು ಗಂಟೆಯ ಸಮಯದಲ್ಲಿ ಪಾಂಡಿಚೇರಿಯಲ್ಲಿ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಸಹಾ ಸೋಶಿಯಲ್ ಮೀಡಿಯಾ ಮೂಲಕ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಪ್ರದೀಪ್ ರಾಜ್ ಅವರು ಕಳೆದ ಹದಿನೈದು ವರ್ಷಗಳಿಂದ ಮಧುಮೇಹದಿಂದ ಬಾಧಿತರಾಗಿದ್ದರು. ಇತ್ತೀಚಿಗೆ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಅದರಿಂದಲೇ ಅವರು ನಿಧನರಾಗಿದ್ದಾರೆ ಎನ್ನುವ ಮಾಹಿತಿಯನ್ನು ಅವರ ಸಹೋದರನಾದ ಪ್ರಶಾಂತ್ ರಾಜ್ ಅವರು ಮಾದ್ಯಮಗಳಿಗೆ ತಿಳಿಸಿದ್ದಾರೆ. ಮಧುಮೇಹ ದಿಂದ ಬಳಲುತ್ತಿದ್ದ ಪ್ರದೀಪ್ ರಾಜ್ ಅವರು ಆರು ತಿಂಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು. ಅದಾದ ನಂತರ ಅವರಿಗೆ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದವು ಎನ್ನಲಾಗಿದೆ.
ಪ್ರದೀಪ್ ರಾಜ್ ಅವರ ಲಿವರ್ ಗೆ ಹೆಚ್ಚು ಡ್ಯಾ ಮೇ ಜ್ ಆಗಿತ್ತು ಎನ್ನಲಾಗಿದೆ. ಪ್ರದೀಪ್ ರಾಜ್ ಅವರ ನಿರ್ದೇಶನದ ಕಿರಾತಕ 2 ತೆರೆಗೆ ಬರಬೇಕಿತ್ತು. ಪ್ರದೀಪ್ ರಾಜ್ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಸ್ನೇಹಿತರು, ಸಿನಿಮಾ ರಂಗದ ಹಲವು ನಟ, ನಟಿಯರು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ರಾಕಿಂಗ್ ಸ್ಟಾರ್ ಅವರ ವೃತ್ತಿ ಜೀವನದಲ್ಲಿ ಪ್ರದೀಪ್ ರಾಜ್ ಅವರು ನಿರ್ದೇಶನ ಮಾಡಿದ್ದ ಕಿರಾತಕ ಸಿನಿಮಾ ಒಂದು ಬ್ರೇಕ್ ನೀಡಿತ್ತು. ಕಿರಾತಕ ಸಿನಿಮಾ ಯಶಸ್ಸು ಯಶ್ ಅವರಿಗೆ ದೊಡ್ಡ ಸಕ್ಸಸ್ ತಂದು ಕೊಟ್ಟಿತ್ತು.