ರಹಸ್ಯಗಳ ಆಗರ ಈ ಮಂದಿರದ ಜ್ವಾಲೆ: ಸ್ವತಃ ಮೊಘಲ್ ಅರಸನೇ ದೇವಿಗೆ ಅರ್ಪಿಸಿದ್ದ ಬಂಗಾರ!!

Entertainment Featured-Articles News

ಹಿಮಾಚಲ ಪ್ರದೇಶದ ಸುಪ್ರಸಿದ್ಧ ಜ್ವಾಲಾ ದೇವಿ ಮಂದಿರವು 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ‌. ಶಕ್ತಿ ದೇವತೆಗೆ ಸಮರ್ಪಿತವಾಗಿರುವ ಈ ಮಂದಿರುವು ಕಾಂಗ್ಡಾ ಜಿಲ್ಲೆಯ ಕಲೀಘಡ್ ಬೆಟ್ಟದ ಮೇಲೆ ಸ್ಥಾಪಿತವಾಗಿದೆ. ಈ ಸ್ಥಾನದಲ್ಲಿ ದೇವಿ ಸತಿಯ ದೇಹದ ಭಾಗಗಳಲ್ಲಿ ಆಕೆಯ ನಾಲಗೆ ಬಿತ್ತು ಎನ್ನಲಾಗಿದೆ. ಪುರಾಣ ಕಥೆಗಳ ಪ್ರಕಾರ ಈ ದೇವಾಲಯವನ್ನು ಪಾಂಡವರು ಪತ್ತೆ ಹಚ್ಚಿದ್ದರು ಎಂದು ಹೇಳಲಾಗುತ್ತದೆ. ಈ ಶಕ್ತಿ ಪೀಠದ ಕುರಿತಾಗಿ ಹಲವು ರಹಸ್ಯಮಯ ಎನ್ನುವ ವಿಷಯಗಳು ಕೂಡಾ ಇದರ ಜೊತೆಗೆ ಬೆಸೆದುಕೊಂಡಿದೆ. ಬನ್ನಿ ಅಂತಹ ಕೆಲವು ರೋಚಕ ವಿಚಾರಗಳನ್ನು ನಾವಿಂದು ತಿಳಿಯೋಣ.

ಹಿಮಾಚಲ ಪ್ರದೇಶದ ಈ ಶಕ್ತಿ ಪೀಠದಲ್ಲಿ ಅನೇಕ ವರ್ಷಗಳಿಂದಲೂ 9 ಪ್ರಾಕೃತಿಕ ಜ್ವಾಲೆಗಳು ಉರಿಯುತ್ತಿವೆ. ಈ ಜ್ವಾಲೆಗಳು ಹೇಗೆ ಉರಿಯುತ್ತಿವೆ ಎನ್ನುವುದನ್ನು ಕಂಡು ಹಿಡಿಯಲು ವಿಜ್ಞಾನಿಗಳು ಹಲವು ವರ್ಷಗಳಿಂದಲೂ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. 9 ಕಿಮೀ ಗಳ ವರೆಗೆ ನೆಲವನ್ನು ಅಗೆದರೂ ಸಹಾ ವಿಜ್ಞಾನಿಗಳಿಗೆ ಪ್ರಾಕೃತಿಕ ಅನಿಲ ಹೊರ ಬರುತ್ತಿರುವ ಜಾಗ ಮಾತ್ರ ದೊರೆತಿಲ್ಲ. ಭೂಮಿಯೊಳಗಿಂದ 9 ಜ್ವಾಲೆಗಳು ಹೊರ ಬರುತ್ತಿದ್ದು, ಅವುಗಳ ಮೇಲೆ ದೇಗುಲ ನಿರ್ಮಾಣವಾಗಿದೆ.

ಈ ಒಂಬತ್ತು ಜ್ವಾಲೆಗಳನ್ನು ಚಂಡಿ, ಹಿಂಗಲಾಜ್, ಅನ್ನಪೂರ್ಣ, ಮಹಾಲಕ್ಷ್ಮಿ, ವಿದ್ಯಾ ವಾಸಿನಿ, ಸರಸ್ವತಿ, ಅಂಬಿಕಾ, ಅಂಜಿದೇವಿ ಹಾಗೂ ಮಹಾಕಾಳಿ ಎನ್ನುವ ಹೆಸರುಗಳಿಂದ ಆರಾಧಿಸಲಾಗುತ್ತದೆ. ಜ್ವಾಲಾ ದೇವಿಯ ಮಂದಿರವನ್ನು ಮೊದಲು ರಾಜಾ ಭೂಮಿ ಸಿಂಗ್ ನಿರ್ಮಾಣ ಮಾಡಿದರು ಎನ್ನುವುದು ಇತಿಹಾಸ. ನಂತರ ಮಹಾರಾಜ ರಣಜೀತ್ ಸಿಂಗ್ ಮತ್ತು ರಾಜಾ ಸಂಸಾರ್ ಚಂದ್ 1835 ರಲ್ಲಿ ಈ ಮಂದಿರದ ನಿರ್ಮಾಣ ಕಾರ್ಯವನ್ನು ಪೂರ್ತಿ ಮಾಡಿದರು ಎಂದು ಹೇಳಲಾಗಿದೆ.

ಈ ಮಂದಿರದಲ್ಲಿರುವ ಅಖಂಡ ಜ್ಯೋತಿಗಳನ್ನು ಆರಿಸಲು ಮೊಘಲ್ ದೊರೆಯೊಬ್ಬರು ಸಾಕಷ್ಟು ಪ್ರಯತ್ನವನ್ನು ಪಟ್ಟರೂ ಸಹಾ ಅದು ಸಾಧ್ಯವಾಗಿರಲಿಲ್ಲ. ಅನಂತರ ದೇವಿಯ ಚಮತ್ಕಾರವನ್ನು ಕಂಡು ಬೆರೆಗಾದ ಆ ದೊರೆಯು ದೇವಿಗೆ ಚಿನ್ನದ ಛತ್ರಿಯನ್ನು ಕಾಣಿಕೆಯಾಗಿ ನೀಡಿದನು ಎನ್ನಲಾಗಿದ್ದು, ದೇವಿ ಅದನ್ನು ಸ್ವೀಕರಿಸದ ಕಾರಣ ಅದು ಕೆಳಕ್ಕೆ ಬಿತ್ತು ಎಂದು ಕೂಡಾ ಇಲ್ಲಿನ ಸ್ಥಳ ಪುರಾಣದಲ್ಲಿ ಹೇಳಲಾಗುತ್ತದೆ. ಹೀಗೆ ಹಲವು ಕಥೆಗಳು ಈ ದೇಗುಲದ ರಹಸ್ಯಗಳ ಜೊತೆ ಬೆಸೆದುಕೊಂಡಿದೆ.

Leave a Reply

Your email address will not be published.