ರಸ್ತೆ ಬದಿಯಲ್ಲಿ ಕುಳಿತು ಮಧುರ ಕಂಠದಿಂದ ಹಾಡಿದ ಹಿರಿಯ: ಇಂಪಾದ ಧ್ವನಿ ಕೇಳಿ ದಂಗಾದ ನೆಟ್ಟಿಗರು

Entertainment Featured-Articles News Viral Video

ಈ ಜಗತ್ತಿನಲ್ಲಿ ಪ್ರತಿಭಾವಂತರಿಗೆ ಕೊರತೆಯೇನೂ ಇಲ್ಲ. ಆದರೆ ವಿಪರ್ಯಾಸ ಏನೆಂದರೆ ಅನೇಕರಿಗೆ ಅವರ ಪ್ರತಿಭೆಯನ್ನು ಪ್ರದರ್ಶನ ಮಾಡಲು ಸರಿಯಾದ ವೇದಿಕೆಯೊಂದು ಸಿಗುವುದೇ ಇಲ್ಲ. ಆದ್ದರಿಂದಲೇ ಅವರ ಪ್ರತಿಭೆ ಜನರ ಮುಂದೆ ಬರುವುದೇ ಇಲ್ಲ. ಎಲೆ ಮರೆ ಕಾಯಿಯಂತೆ ಉಳಿದು ಬಿಡುತ್ತಾರೆ. ಬೆರಳೆಣಿಕೆಯಷ್ಟು ಜನರಿಗೆ ಮಾತ್ರವೇ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶವು ದೊರೆಯುತ್ತದೆ. ಆದರೆ ಇವೆಲ್ಲವುಗಳ ನಡುವೆ ಒಂದು ಸಂತೋಷದ ವಿಚಾರ ಏನೆಂದರೆ ಒಂದು ಸಾಮಾಜಿಕ ಜಾಲತಾಣಗಳ ಕಾರಣದಿಂದಾಗಿ ಅನೇಕರ ಪ್ರತಿಭೆಯು ಜನರ ಮುಂದೆ ಬರುವುದಕ್ಕೆ ಸಾಧ್ಯವಾಗಿದೆ ಹಾಗೂ ಜನ ಮೆಚ್ಚುಗೆ ಪಡೆಯಲು ಸಾಧ್ಯವಾಗಿದೆ.

ಈಗಾಗಲೇ ಸಾಮಾಜಿಕ ಜಾಲತಾಣಗಳ ಮೂಲಕ ಬಹಳಷ್ಟು ಜನ ಪ್ರತಿಭಾವಂತರು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುತ್ತಾ, ಸಾಕಷ್ಟು ಹೆಸರನ್ನು ಹಾಗೂ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.‌ ಈಗ ಅದೇ ಹಿನ್ನೆಲೆಯಲ್ಲಿ ಹೊಸ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದ್ದು, ರಸ್ತೆಯ ಬದಿಯಲ್ಲಿ ಕುಳಿತಿರುವ ವ್ಯಕ್ತಿಯೊಬ್ಬರು ತನ್ನ ಮಧುರವಾದ ಧ್ವನಿಯಲ್ಲಿ ಹಾಡೊಂದನ್ನು ಹಾಡುವ ಮೂಲಕ ಒಂದು ಹೊಸ ಸಂಚಲನವನ್ನು ಹುಟ್ಟು ಹಾಕಿದ್ದು, ಗಾಯಕನ ದ್ವನಿಯನ್ನು ಕೇಳಿ ಜನ ಅಚ್ಚರಿ ವ್ಯಕ್ತಪಡಿಸುತ್ತಾ ಮೆಚ್ಚುಗೆ ನೀಡುತ್ತಿದ್ದಾರೆ.

ವೀಡಿಯೋದಲ್ಲಿ ನೋಡಿದಾಗ ವಯಸ್ಸಾದ ಹಿರಿಯ ವ್ಯಕ್ತಿಯೊಬ್ಬರು ಹಾಡುತ್ತಿರುವ ಹಾಡನ್ನು ಕೇಳಿದಾಗ ಆ ಧ್ವನಿಗೆ ನೀವು ಕೂಡ ಮಂತ್ರಮುಗ್ಧರಾಗುವಿರಿ. ಒಂದು ಕ್ಷಣ ಎಷ್ಟೊಂದು ಅದ್ಭುತವಾಗಿದೆ ಅವರ ಕಂಠ ಎಂದು ಆಶ್ಚರ್ಯಪಡುವಿರಿ. ಮತ್ತೊಂದು ವಿಶೇಷವೇನೆಂದರೆ ಆ ಹಿರಯರು ಹಾಡನ್ನು ಹಾಡುತ್ತಲೇ ಒಂದು ಕೈಯಲ್ಲಿ ಸಂಗೀತ ವಾದ್ಯವನ್ನು ಸಹಾ ನುಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಅವರ ಅದ್ಭುತ ಪ್ರತಿಭೆಗೆ ಅಪಾರವಾದ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಈ ಸುಂದರವಾದ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ comedynation.ted ಎನ್ನುವ ಹೆಸರಿನ ಖಾತೆಯೊಂದರಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಹಿರಿಯ ವ್ಯಕ್ತಿಯ ಈ ಹಾಡನ್ನು ಕೇಳಿ ನೆಟ್ಟಿಗರು ಮೆಚ್ಚುಗೆಯನ್ನು ಸೂಚಿಸುತ್ತಾ, ಕಾಮೆಂಟ್ ಗಳನ್ನು ಮಾಡಿ ತಮ್ಮ ಅನುಭೂತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿ, ಅದ್ಭುತ ಗಾಯನ ಪ್ರತಿಭೆಯನ್ನು ಹೊಂದಿರುವ ಇವರ ಪ್ರತಿಭೆಯನ್ನು ಗುರುತಿಸಿ ಸರಿಯಾದ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ ಹಿರಿಯರಿಗೆ ಎಷ್ಟು ಹೊಗಳಿಕೆ ನೀಡಿದರೂ ಸಾಲದು ಎನ್ನುವ ಮಾತನ್ನು ಹೇಳಿದ್ದಾರೆ.

Leave a Reply

Your email address will not be published.