ರಸ್ತೆ ಬದಿ ಕಾಣುವ ಮೈಲುಗಲ್ಲುಗಳ ಬಗ್ಗೆ ಈ ರೋಚಕ ಸತ್ಯಗಳು ನಿಮಗೆ ಖಂಡಿತ ತಿಳಿದಿರುವುದಿಲ್ಲ

Written by Soma Shekar

Published on:

---Join Our Channel---

ಸಾಮಾನ್ಯವಾಗಿ ನಾವು ರಸ್ತೆ ಮೂಲಕ ಸಂಚಾರ ಹೊರಟಾಗ ರಸ್ತೆಯ ಪಕ್ಕದಲ್ಲಿ ನಾವು ಹೊರಟಿರುವ ಸ್ಥಳ ಅಥವಾ ಆ ಹಾದಿಯಲ್ಲಿ ಬರುವ ಪ್ರಮುಖ ನಗರ ಅಥವಾ ಪಟ್ಟಣಗಳು ಅಥವಾ ಗ್ರಾಮಗಳು ಎಷ್ಟು ದೂರದಲ್ಲಿದೆ ಎಂದು ತಿಳಿಸುವ ಕಿಲೋಮೀಟರ್ ಗಳನ್ನು ನಮೂದು ಮಾಡಿರುವ ಮೈಲುಗಲ್ಲುಗಳನ್ನು ನೋಡಿರುತ್ತೇವೆ. ಅವುಗಳ ಮೇಲೆ ಮುಂದಿನ ಗ್ರಾಮ ಅಥವಾ ಪಟ್ಟಣದ ಹೆಸರು, ಆ ಪ್ರದೇಶ ಇನ್ನು ಎಷ್ಟು ದೂರದಲ್ಲಿದೆ ಎನ್ನುವ ಮಾಹಿತಿಯನ್ನು ಕಿಲೋಮೀಟರ್ ನಲ್ಲಿ ಬರೆದಿರುವುದನ್ನು ನಾವು ನೋಡಬಹುದು. ಆದರೆ ಒಮ್ಮೆ ನಾವು ಸರಿಯಾಗಿ ಗಮನಿಸಿ ನೋಡಿದಾಗ ಮೈಲುಗಲ್ಲುಗಳ ಮೇಲೆ ಹಾಕಲಾಗಿರುವ ಬಣ್ಣ ಒಂದೇ ಆಗಿರುವುದಿಲ್ಲ.

ಮೈಲುಗಲ್ಲುಗಳು ಬೇರೆ ಬೇರೆ ಬಣ್ಣಗಳಲ್ಲಿ ಇರುವುದನ್ನು ನಾವು ಗಮನಿಸಬಹುದು. ಹೀಗೆ ಮೈಲುಗಲ್ಲುಗಳ ಮೇಲೆ ಕೇವಲ ಆಕರ್ಷಣೆಯ ದೃಷ್ಟಿಯಿಂದ ಹೀಗೆ ಬೇರೆ ಬೇರೆ ಬಣ್ಣಗಳನ್ನು ಹಾಕುವುದಿಲ್ಲ. ಅಲ್ಲದೇ ನಾವು ಸಹಾ ಏಕೆ ಹೀಗೆ ಬೇರೆ ಬೇರೆ ಬಣ್ಣಗಳನ್ನು ಹಾಕಿದ್ದಾರೆಂದು ಯೋಚನೆ ಮಾಡುವುದಿಲ್ಲ. ಆದರೆ ಇಲ್ಲಿ ಅದಕ್ಕೆ ಖಂಡಿತ ಕಾರಣವಿದೆ. ಆ ಕಾರಣ ಅಥವಾ ವಿವಿಧ ಬಣ್ಣಗಳ ಅರ್ಥವೇನು ಎಂದು ನಾವಿಂದು ತಿಳಿಯೋಣ. ಮೈಲುಗಲ್ಲಿನ ಮೇಲೆ ಕಾಣುವ ಬಣ್ಣದ ಅನುಸಾರವಾಗಿ ಅದಕ್ಕೆ ನಿರ್ದಿಷ್ಟವಾದ ಅರ್ಥವನ್ನು ನೀಡಲಾಗಿದೆ.

ಸಾಮಾನ್ಯವಾಗಿ ಮೈಲುಗಲ್ಲುಗಳು ಎರಡು ಬಣ್ಣದಲ್ಲಿ ಕಾಣುತ್ತದೆ. ಅರ್ಧಕ್ಕೆ ಬಿಳಿಯ ಬಣ್ಣ ಹಾಕಿರುತ್ತಾರೆ, ಕಲ್ಲಿನ ಮೇಲ್ಬಾಗದಲ್ಲಿ ಬೇರೆಯ ಬಣ್ಣವನ್ನು ಹಾಕಲಾಗುತ್ತದೆ. ಬಿಳಿಯ ಬಣ್ಣ ಮೈಲುಗಲ್ಲುಗಳ ಮೇಲೆ ಸಾಮಾನ್ಯವಾಗಿ ಕಾಣುವ ಬಣ್ಣ ಎನ್ನುವುದು ಎಲ್ಲರಿಗೂ ತಿಳಿದಿರುವಂತಹ ವಿಷಯವಾಗಿದೆ. ಆದರೆ ಆದರೆ ಮೇಲ್ಭಾಗದಲ್ಲಿ ಬಿಳಿಯ ಬಣ್ಣಕ್ಕೆ ಕಾಂಬಿನೇಷನ್ ಆಗಿ ಬಳಸುವ ಬಣ್ಣ ಮಾತ್ರ ಬದಲಾಗಿರುತ್ತದೆ, ಬಿಳಿಯ ಬಣ್ಣದ ಜೊತೆಗೆ ಕಾಣಿಸಿಕೊಳ್ಳುವ ಇತರೆ ಬಣ್ಣಗಳಿಗೆ ಅವುಗಳದ್ದೇ ಆದ ವಿಶೇಷ ಅರ್ಥವಿದೆ.

ನೀವು ಸಂಚರಿಸುತ್ತಿರುವ ರಸ್ತೆಯಲ್ಲಿ ನಿಮಗೆ ಕಾಣುವ ಮೈಲುಗಲ್ಲುಗಳ ಮೇಲೆ ನಿಮಗೆ ಹಳದಿ ಬಣ್ಣ ಕಂಡರೆ ನೀವು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಥವಾ ನ್ಯಾಷನಲ್ ಹೈವೇ ಯಲ್ಲಿ ಸಂಚಾರ ಮಾಡುತ್ತಿದ್ದೇವೆ ಎನ್ನುವ ಅರ್ಥವನ್ನು ಇದು ನೀಡುತ್ತದೆ. ಒಂದು ವೇಳೆ ಅದು ಹಸಿರು ಬಣ್ಣದಲ್ಲಿ ಇದ್ದರೆ, ನೀವು ರಾಜ್ಯ ಹೆದ್ದಾರಿ ಅಥವಾ ಸ್ಟೇಟ್ ಹೈವೇ ಮೇಲೆ ಸಂಚಾರ ಮಾಡುತ್ತಿರುವಿರಿ ಎನ್ನುವ ಅರ್ಥ ನೀಡುತ್ತದೆ.

ಒಂದು ವೇಳೆ ಮೈಲುಗಲ್ಲು ಕಪ್ಪು, ಬಿಳಿ ಅಥವಾ ನೀಲಿ ಬಣ್ಣದಲ್ಲಿ ಇದೆ ಎಂದರೆ ನೀವು ಯಾವುದೋ ಒಂದು ನಗರ ಅಥವಾ ಜಿಲ್ಲೆಯೊಳಗೆ ಪ್ರವೇಶ ಮಾಡಿರುವಿರಿ ಎನ್ನುವ ಅರ್ಥವನ್ನು ನೀಡುತ್ತದೆ. ಈ ಮೈಲುಗಲ್ಲುಗಳು ಆ ನಗರದ ಪರಿವೀಕ್ಷಣೆಯಲ್ಲಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ವೇಳೆ ಮೈಲುಗಲ್ಲುಗಳು ಕೆಂಪು ಬಣ್ಣವನ್ನು ಹೊಂದಿದ್ದರೆ, ನೀವು ಗ್ರಾಮೀಣ ರಸ್ತೆಗಳಲ್ಲಿ ಸಂಚಾರ ಮಾಡುತ್ತಿರುವಿರಿ ಎನ್ನುವ ಅರ್ಥವನ್ನು ನೀಡುತ್ತದೆ.

ಈ ರಸ್ತೆಗಳು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಅಡಿಯಲ್ಲಿ ನಿರ್ಮಾಣ ಆಗಿರುತ್ತವೆ. ಹೀಗೆ ರಸ್ತೆಯಲ್ಲಿ ಕಾಣುವ ಮೈಲುಗಲ್ಲುಗಳ ಮೇಲೆ ಹಾಕಲಾಗಿರುವ ಬಣ್ಣದ ಆಧಾರದಲ್ಲಿ ಅವು ಏನನ್ನು ಅರ್ಥೈಸುತ್ತವೆ ಎನ್ನುವ ವಿಚಾರವನ್ನು ನಾವು ತಿಳಿದುಕೊಳ್ಳಬಹುದಾಗಿದೆ. ಈ ಮಾಹಿತಿ ಬಹಳಷ್ಟು ಜನರಿಗೆ ಇನ್ನು ಮುಂದೆ ಮೈಲುಗಲ್ಲುಗಳನ್ನು ನೋಡುವ ವಿಧಾನದಲ್ಲಿ ಬದಲಾವಣೆಯನ್ನು ತರಲಿದೆ ಎಂದು ಹೇಳಬಹುದು.

Leave a Comment