ರಸ್ತೆಯಲ್ಲೇ ರಣಹದ್ದುಗಳ ಗಂಭೀರ ಸಭೆ: ವೈರಲ್ ವೀಡಿಯೋ ಸೆಳೆದಿದೆ ನೆಟ್ಟಿಗರ ಗಮನ!!

Entertainment Featured-Articles News Viral Video

ಸಾಮಾಜಿಕ ಜಾಲತಾಣಗಳಲ್ಲಿ ದಿನವೊಂದಕ್ಕೆ ಅಪರೂಪ ಎನಿಸುವ ಅನೇಕ ವೀಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅದರಲ್ಲೂ ಪ್ರಾಣಿ ಪಕ್ಷಿಗಳಿಗೆ ಸಂಬಂಧಿಸಿದ ಹಲವು ವೈವಿದ್ಯಮಯ ವೀಡಿಯೋಗಳು ವೈರಲ್ ಆದಾಗಲೆಲ್ಲಾ ಜನ‌ರ ದೃಷ್ಟಿಯನ್ನು ಆ ವೀಡಿಯೋಗಳು ಸೆಳೆಯುತ್ತವೆ. ಈಗಲೂ ಅಂತಹುದೇ ಒಂದು ವೀಡಿಯೋ ಭರ್ಜರಿಯಾಗಿ ವೈರಲ್ ಆಗುತ್ತಿದೆ.‌ ವೀಡಿಯೋ ನೋಡಿದ ಜನರು ಸಹಾ ಇದು ನಿಜಕ್ಕೂ ಒಂದು ಅಪರೂಪವಾದ ದೃಶ್ಯವೆಂದು ಮೆಚ್ಚುಗೆಗಳನ್ನು ನೀಡುತ್ತಾ, ವೀಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ರಣಹದ್ದುಗಳು ಇತ್ತೀಚಿನ ದಿನಗಳಲ್ಲಿ ತೀರಾ ಅಪರೂಪವಾದ ಪಕ್ಷಿಯಾಗಿದೆ. ತೀಕ್ಷ್ಣ ದೃಷ್ಟಿ, ದೊಡ್ಡ ಗಾತ್ರ, ಬಲವಾದ ಕೊಕ್ಕು ಹೊಂದಿರುವ ಇವು ಸತ್ತ ಪ್ರಾಣಿಗಳ ಮಾಂಸವನ್ನು ಕುಕ್ಕಿ ತಿನ್ನುತ್ತವೆ. ರಣ ಹದ್ದುಗಳನ್ನು ಇತ್ತೀಚಿನ ವರ್ಷಗಳಲ್ಲಿ ಕೇವಲ ವೀಡಿಯೋಗಳಲ್ಲಿ ಮಾತ್ರವೇ ನೋಡಲು ಸಿಗುತ್ತಿವೆ. ರಣ ಹದ್ದುಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಇದೆ. ವರದಿಗಳ ಪ್ರಕಾರ ಭಾರತ ಮತ್ತು ನೆರೆಯ ರಾಷ್ಟ್ರಗಳಲ್ಲೇ 90% ರಣಹದ್ದುಗಳ ಸಂಖ್ಯೆ ಕ್ಷೀಣಿಸಿದೆ ಎನ್ನಲಾಗಿದೆ.

ವರ್ಷಗಳ ಹಿಂದೆ ರಣಹದ್ದುಗಳು ಎಂದರೆ ಒಂದು ರೀತಿಯ ಭ ಯ ದ ಭಾವನೆ ಇರುತ್ತಿತ್ತು ಜನರಲ್ಲಿ. ಆದರೆ ಇಂದು ರಣಹದ್ದುಗಳು ದೂರದೂರದವರೆಗೆ ಎಲ್ಲೂ ಕೂಡಾ ಕಾಣುವುದಿಲ್ಲ. ಆದರೆ ಈಗ ವೈರಲ್ ವೀಡಿಯೋದಲ್ಲಿ ರಣಹದ್ದುಗಳ ಒಂದು ಇಡೀ ಗುಂಪೊಂದು ಕ್ಯಾಮೆರಾದಲ್ಲಿ ಸೆರೆಯಾಗಿವೆ. ರಣಹದ್ದುಗಳು ಹೀಗೆ ಗುಂಪು ಸೇರಿರುವುದನ್ನು ನೋಡಿದರೆ, ಬಹುಶಃ ಅವೆಲ್ಲವೂ ಸೇರಿ ಯಾವುದೋ ಗಹನವಾದ ವಿಷಯದ ಕುರಿತಾಗಿ ಚರ್ಚೆಯನ್ನು ನಡೆಸಲು ಬಂದಿರುವಂತೆ ಕಾಣುತ್ತಿರುವುದು ವಿಶೇಷ.

ಈ ಸುಂದರವಾದ ಹಾಗೂ ಅಪರೂಪ ಎನಿಸುವ ವೀಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ವೀಡಿಯೋದ ಶೀರ್ಷಿಕೆಯಲ್ಲಿ ಅವರು, “ಖಂಡಿತ ಯಾವುದೋ ಗಂಭೀರವಾದ ವಿಷಯವನ್ನು ಚರ್ಚಿಸಲು ತುರ್ತು ಸಭೆಯನ್ನು ಕರೆದಿರುವ ಹಾಗಿದೆ” ಎಂದು ಬರೆದುಕೊಂಡಿದ್ದಾರೆ. ವೀಡಿಯೋದಲ್ಲಿ ಎಲ್ಲಾ ರಣಹದ್ದುಗಳು ಒಂದಕ್ಕೊಂದು ಹತ್ತಿರ ಬಂದು, ಗುಂಪಾಗಿ ಏನೋ ಚರ್ಚೆ ಮಾಡುವಂತೆ ಕಾಣುತ್ತದೆ.‌

ಈ ವೀಡಿಯೋವನ್ನು ಈಗಾಗಲೇ 76 ಸಾವಿರಕ್ಕೂ ಅಧಿಕ ಜನರು ವೀಕ್ಷಣೆಯನ್ನು ಮಾಡಿದ್ದಾರೆ. ಇನ್ನು 3 ಸಾವಿರಕ್ಕೂ ಅಧಿಕ ಮಂದಿ ವೀಡಿಯೋಗೆ ಲೈಕುಗಳನ್ನು ನೀಡಿದ್ದಾರೆ. ನೂರಾರು ಜನರು ವೀಡಿಯೋ ನೋಡಿ ಮೆಚ್ಚಿ ಇದಕ್ಕೆ ಕಾಮೆಂಟ್ ಗಳನ್ನು ಸಹಾ ಮಾಡಿದ್ದಾರೆ. ನೆಟ್ಟಿಗರು ವೈವಿದ್ಯಮಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ನೆಟ್ಟಿಗರೊಬ್ಬರು ಬಹುಶಃ ಉಕ್ರೇನ್ ಮತ್ತು ರಷ್ಯಾ ನಡುವಿನ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಿರಬಹುದು ಎಂದರೆ, ಮತ್ತೊಬ್ಬರು ಲಂಚ್ ಗೆ ಹೋಗೋ ಪ್ಲಾನ್ ಮಾಡ್ತಾ ಇರಬೇಕು ಎಂದಿದ್ದಾರೆ.

Leave a Reply

Your email address will not be published.