ರಷ್ಯಾ-ಉಕ್ರೇನ್ ಯುದ್ಧದ ನಡುವೆ ಅರಳಿದ ಕೇರಳ ಯುವಕ ವಿಘ್ನೇಶ್ ನ ವಿಭಿನ್ನ ಪ್ರೇಮ ಕಹಾನಿ

Entertainment Featured-Articles News

ರಷ್ಯಾ ಮತ್ತು ಉಕ್ರೇನ್ ನಡುವೆ ಕಳೆದ 16 ದಿನಗಳಿಂದಲೂ ಭೀ ಕ ರವಾದ ಸ ಮ ರ ನಡೆಯುತ್ತಿದ್ದು ಅನೇಕ ಜನರ ಸಂಕಷ್ಟಕ್ಕೆ ಇದು ಕಾರಣವಾಗಿದೆ. ಯು ದ್ಧ ಯಾವಾಗ ಕೊನೆಯಾಗಲಿದೆ ಎಂದು ನಿರೀಕ್ಷಿಸುತ್ತಿರುವ ಜನ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಇವೆಲ್ಲವುಗಳ ನಡುವೆ ವಿಜ್ಞೇಶ್ ಎನ್ನುವ ಯುವಕನ ಕಥೆ ಮಾತ್ರ ವಿಭಿನ್ನವಾಗಿದೆ. ಉಕ್ರೇನ್ ನಲ್ಲಿ ಪರಿಸ್ಥಿತಿ ಹದಗೆಟ್ಟ ಕೂಡಲೇ ವಿದೇಶಗಳಿಂದ ಉಕ್ರೇನ್ ಗೆ ಬಂದಿದ್ದಂತಹ ಪ್ರವಾಸಿಗಳು, ವಿದ್ಯಾರ್ಥಿಗಳು ಹಾಗೂ ಇನ್ನಿತರ ಉದ್ಯೋಗಿಗಳು ದೇಶವನ್ನು ತೊರೆದು ತಮ್ಮ ಮಾತೃಭೂಮಿಯನ್ನು ಶೀಘ್ರವಾಗಿ ಸೇರಬೇಕೆನ್ನುವ ತವಕದಲ್ಲಿ ಉಕ್ರೇನ್ ತೊರೆಯುತ್ತಿದ್ದಾರೆ.

ಉಕ್ರೇನ್ ತೊರೆಯುತ್ತಿರುವ ಬಹುತೇಕ ಜನರಲ್ಲಿ ತಮ್ಮ ಮುಂದಿನ ದಿನಗಳಲ್ಲಿ ಯಾವೆಲ್ಲ ಸಮಸ್ಯೆಗಳು ಎದುರಾಗಲಿವೆ ಎನ್ನುವ ಚಿಂತೆಯು ಕಾಡುತ್ತಿರುವಾಗಲೇ, ವಿಘ್ನೇಶ್ ಹೆಸರಿನ ಯುವಕ ಮಾತ್ರ ತನ್ನ ಹೊಸ ಜೀವನದ ಬಗ್ಗೆ ಕನಸುಗಳನ್ನು ಹೆಣೆಯುತ್ತಿದ್ದ. ಏಕೆಂದರೆ ಉಕ್ರೇನ್ ತೊರೆದು ಭಾರತವನ್ನು ತಲುಪುವ ನಡುವೆಯೇ ಆತನಿಗೆ ಪ್ರೇಮಾಂಕುರವಾಗಿದೆ. ವಿಘ್ನೇಶ್ ಪ್ರೇಮಪಾಶದಲ್ಲಿ ಸಿಲುಕಿದ್ದಾನೆ. ವಿಜ್ಞೇಶ್ ಉಕ್ರೇನಿನ ಇವಾನೋ ಫ್ರಿಸ್ಕ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ.

ಯು ದ್ಧ ಪ್ರಾರಂಭವಾದ ದಿನ ರಾತ್ರಿಯೇ ಹಾಸ್ಟೆಲ್ನಿಂದ ಹೊರ ಬಿದ್ದು ವಿಜ್ಞೇಶ್ ತಮ್ಮ ಸಹಪಾಠಿಗಳೊಂದಿಗೆ ರೊಮೇನಿಯಾದ ಗಡಿಯನ್ನು ಸೇರಿ, ಅನಂತರ ಸ್ವಲ್ಪ ಸಮಯದಲ್ಲೇ ಸೈರೆಟ್ ಗಡಿಯನ್ನು ತಲುಪಿದ್ದಾರೆ. ಅಲ್ಲಿನ ವಾತಾವರಣ ತಂಪಾಗಿದ್ದು, ಹೆಚ್ಚು ಚಳಿ ಇದ್ದುದರಿಂದ ಬೆಚ್ಚಗಿನ ಬಟ್ಟೆಗಳನ್ನು ತರುವ ಸಲುವಾಗಿ ಅವರು ಮತ್ತೆ ವಿಶ್ವವಿದ್ಯಾಲಯಕ್ಕೆ ವಾಪಸಾಗಿದ್ದಾರೆ. ಬೆಚ್ಚಗಿನ ಬಟ್ಟೆ ಗಳನ್ನು ಸಂಗ್ರಹಿಸಿ ಹಲ್ಮೇಯು ಮೂಲಕ ರೊಮೇನಿಯಾದ ಗಡಿಯನ್ನು ದಾಟಿದ್ದಾರೆ.

ನಂತರ ರೈಲಿನಲ್ಲಿ ಬುಕಾರೆಸ್ಟ್ ತಲುಪಿದ ವಿಘ್ನೇಶ್ ಹಾಗೂ ಅನ್ಯ ವಿದ್ಯಾರ್ಥಿಗಳಿಗೆ ಅಲ್ಲಿಂದ ಸುಮಾರು 40 ಕಿಲೋಮೀಟರ್ ದೂರದ ಹಳ್ಳಿಯೊಂದರಲ್ಲಿ ಅಲ್ಲಿನ ಭಾರತೀಯ ಕುಟುಂಬಗಳು ಮತ್ತು ರಾಯಭಾರಿ ಕಚೇರಿಯ ನೆರವಿನಿಂದ ವಸತಿಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಹಳ್ಳಿಯಲ್ಲಿ ವಸತಿ ಹೂಡಿದ್ದ ಸಂದರ್ಭದಲ್ಲಿ ವೀಕ್ನೆಸ್ ಗೆ ಆ ಹಳ್ಳಿಯ ಯುವತಿ ಸಮೋನಾ ಜೊತೆಗೆ ಪ್ರೀತಿ ಹುಟ್ಟಿದೆ. ವಿಜ್ಞೇಶ್ ತಡಮಾಡದೆ ಸಮೊನಾ ಬಳಿ ತನ್ನ ಪ್ರೀತಿಯ ವಿಚಾರವನ್ನು ತಿಳಿಸಿದ್ದಾರೆ.

ವಿಘ್ನೇಶ್ ಆಕೆಯೊಡನೆ ಮದುವೆ ಪ್ರಸ್ತಾವ ಕೂಡಾ ಮಾಡಿದ್ದಾರೆ. ಸಮೊನಾ ಕೆಲವು ದಿನಗಳ ಕಾಲಾವಕಾಶ ಬೇಕೆಂದು, ಈ ಬಗ್ಗೆ ತಾನು ಆಲೋಚಿಸಿ ಹೇಳುವುದಾಗಿ ತಿಳಿಸಿದ್ದಾರೆ. ಆನಂತರ ಮೂರು ದಿನಗಳ ಕಾಲ ಇಬ್ಬರು ಹಳ್ಳಿಯಲ್ಲಿ ಒಟ್ಟಾಗಿ ಓಡಾಡಿದ್ದಾರೆ, ಪ್ರಸ್ತುತ ವಿಜ್ಞೇಶ್ ಕೇರಳದ ತಮ್ಮ ಊರಿಗೆ ವಾಪಸ್ಸು ಬಂದಿದ್ದಾರೆ. ಆದರೆ ಸಮೊನಾ ಉತ್ತರಕ್ಕಾಗಿ ಕಾಯುತ್ತಿದ್ದು, ಆಕೆ ಖಚಿತವಾಗಿ ತನ್ನ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡು ತನ್ನನ್ನು ಮದುವೆಯಾಗುತ್ತಾಳೆ ಎನ್ನುವ ಆಶಾಭಾವವನ್ನು ವ್ಯಕ್ತಪಡಿಸಿ, ಆಕೆಯ ಉತ್ತರದ ನಿರೀಕ್ಷೆಯಲ್ಲಿ ಇದ್ದಾರೆ.

Leave a Reply

Your email address will not be published.