ರಶ್ಮಿಕಾ ಸಿನಿಮಾಕ್ಕೆ ತಟ್ಟಿದ ಬ್ಯಾನ್ ಬಿಸಿ: ಬಿಡುಗಡೆಗೆ ಮುನ್ನ ಚಿತ್ರ ತಂಡಕ್ಕೆ ಎದುರಾಯ್ತು ಸಂಕಷ್ಟ

Entertainment Featured-Articles Movies News

ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಇದೀಗ ಟಾಲಿವುಡ್ ಮತ್ತು ಬಾಲಿವುಡ್ ಎರಡೂ ಕಡೆ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿಯಾಗಿದ್ದಾರೆ. ದಕ್ಷಿಣದ ಮೂರು ಭಾಷೆಗಳಲ್ಲಿ, ಬಾಲಿವುಡ್ ನಲ್ಲಿ ನಟಿಸಿ ಜನಪ್ರಿಯತೆ ಪಡೆದಿರುವ ರಶ್ಮಿಕಾ ಇದೀಗ ಮಲೆಯಾಳಂ ನ ಸ್ಟಾರ್ ನಟ ದುಲ್ಕರ್ ಸಲ್ಮಾನ್ ನಾಯಕನಾಗಿರುವ ಸೀತಾ ರಾಮಂ ಸಿನಿಮಾದ ಮೂಲಕ ಮಲೆಯಾಳಂ ಗೂ ಎಂಟ್ರಿ ನೀಡಿರುವ ರಶ್ಮಿಕಾ ಇದೀಗ ಪಂಚಭಾಷಾ ತಾರೆಯಾಗಿದ್ದಾರೆ. ಸಾಲು ಸಾಲು ಸ್ಟಾರ್ ಗಳ ಸಿನಿಮಾಗಳಲ್ಲಿ ತೊಡಗಿರುವ ನಟಿ ರಶ್ಮಿಕಾ ಸಖತ್ ಬ್ಯುಸಿ ನಟಿಯಾಗಿದ್ದಾರೆ. ಆದರೆ ಇದೀಗ ರಶ್ಮಿಕಾ ಅಭಿನಯದ ಹೊಸ ಸಿನಿಮಾಕ್ಕೆ ಬ್ಯಾನ್ ಬಿಸಿ ತಟ್ಟಿದ್ದು ಸಖತ್ ಸುದ್ದಿಯಾಗಿದೆ.

ಸೀತಾ ರಾಮಂ ಸಿನಿಮಾ ಟ್ರೈಲರ್ ಬಿಡುಗಡೆಯ ನಂತರ ಸಿಕ್ಕಾಪಟ್ಟೆ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಸಿನಿಮಾ ನಾಳೆ ಅಂದರೆ ಆಗಸ್ಟ್ ಐದರಂದು ಬಿಡುಗಡೆಗೆ ಸಜ್ಜಾಗಿದೆ. ಆದರೆ ಈಗ ಬಿಡುಗಡೆಗೆ ಮುನ್ನವೇ ಸಿನಿಮಾಕ್ಕೆ ಹೊಸದೊಂದು ಸಮಸ್ಯೆ ಎದುರಾಗಿದೆ. ಹೌದು, ಸೀತಾ ರಾಮಂ ಸಿನಿಮಾವನ್ನು ಕೆಲವೊಂದು ದೇಶಗಳಲ್ಲಿ ಬ್ಯಾನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ ಕುವೈತ್,ಓಮನ್, ಸೌದಿ ಅರೇಬಿಯಾ, ಬಹ್ರೇನ್ ಮುಂತಾದ ದೇಶಗಳಲ್ಲಿ ಸೆನ್ಸಾರ್ ಮಂಡಳಿ ಸಿನಿಮಾ ವೀಕ್ಷಣೆಯನ್ನು ಮಾಡಿದ ನಂತರ ಸಿನಿಮಾವನ್ನು ಬ್ಯಾನ್ ಮಾಡಿದೆ ಎಂದು ತಿಳಿದು ಬಂದಿದೆ.‌

ಸಿನಿಮಾದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ವಿಷಯಗಳು ಇವೆ ಎನ್ನುವ ಕಾರಣಕ್ಕೆ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬ್ಯಾನ್ ಹಿನ್ನೆಲೆಯಲ್ಲಿ ಚಿತ್ರತಂಡವು ಮತ್ತೊಮ್ಮೆ ಸೆನ್ಸಾರ್ ಗೆ ಮನವಿಯನ್ನು ಮಾಡಿಕೊಂಡಿದೆ ಎನ್ನಲಾಗಿದೆ. ದುಲ್ಕರ್ ಸಲ್ಮಾನ್ ನಾಯಕನಾಗಿರುವ ಈ ಸಿನಿಮಾವು ಲೆಫ್ಟಿನೆಂಟ್ ರಾಮ್ ಎನ್ನುವ ವ್ಯಕ್ತಿಯ ಜೀವನದ ಒಳನೋಟವನ್ನು ಬಿಂಬಿಸುವ ಕಥಾ ಹಂದರವನ್ನು ಹೊಂದಿದೆ ಎನ್ನಲಾಗಿದೆ. ಕಾಶ್ಮೀರದಲ್ಲಿ ಗಸ್ತು ತಿರುಗುತ್ತಾ ತನಗಾಗಿ ಯಾರಿಲ್ಲ ಎನ್ನುವ ಭಾವನೆಯಲ್ಲಿ ಆತ ಮುಳುಗಿರುವಾಗಲೇ ಆತನಿಗೆ ಆತನ ಹೆಂಡತಿ ಎಂದು ಹೇಳಿಕೊಳ್ಳುವ ಮಹಿಳೆಯಿಂದ ಪತ್ರಗಳು ಬರಲಾರಂಭಿಸುತ್ತದೆ.

ಸೀತಾ ಮಹಾಲಕ್ಷ್ಮಿ ಎನ್ನುವ ಹೆಸರಿನಿಂದ ಪತ್ರಗಳು ಬರಲು ಆರಂಭಿಸಿದ ಮೇಲೆ ಕಥೆಯಲ್ಲಿ ಒಂದು ಟ್ವಿಸ್ಟ್ ಕಾಣ ಸಿಗುತ್ತದೆ ಎನ್ನಲಾಗಿದೆ‌. ಹೀಗೆ ಒಂದು ಅದ್ಭುತವಾದ ಕಥಾ ಹಂದರದೊಂದಿಗೆ ಸಿನಿಮಾ ತೆರೆಗೆ ಬರಲು ಸಜ್ಜಾಗಿರುವಾಗಲೇ ಬ್ಯಾನ್ ಎನ್ನುವ ಭೂ ತ ಕಾಡಿದ್ದು, ಚಿತ್ರ ತಂಡಕ್ಕೆ ಇದೊಂದು ಸಮಸ್ಯೆಯಾಗಿ ಪರಿಣಮಿಸಿದೆ. ಸೀತಾ ರಾಮಂ ಸಿನಿಮಾಕ್ಕಾಗಿ ಬಹಳಷ್ಟು ಜನ ಸಿನಿಮಾ ಅಭಿಮಾನಿಗಳು ಕಾಯುತ್ತಿದ್ದು, ನಾಳೆ ಅವರ ನಿರೀಕ್ಷೆಗಳಿಗೆ ತೆರೆ ಬೀಳಲಿದೆ. ಸಿನಿಮಾ ನೋಡಿದ ನಂತರ ಪ್ರೇಕ್ಷಕರಿಂದ ಹೇಗೆ ಪ್ರತಿಕ್ರಿಯೆ ಸಿಗಲಿದೆ ಎನ್ನುವುದು ನಾಳೆ ತಿಳಿಯಲಿದೆ.

Leave a Reply

Your email address will not be published. Required fields are marked *