ರಶ್ಮಿಕಾ ಸಾಮಿ ಸಾಮಿ ಹಾಡಿಗೆ ಅಮೆರಿಕಾದ ಬೀದಿಯಲ್ಲಿ ಭರ್ಜರಿಯಾಗಿ ಕುಣಿದ ಯುವಕ!!
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿ, ನಿರ್ದೇಶಕ ಸುಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದ ಪುಷ್ಪ ಸಿನಿಮಾ ಕ್ರೇಜ್ ಇನ್ನು ಕೂಡಾ ಕಡಿಮೆಯಾಗಿಲ್ಲ. ಪುಷ್ಪ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಿಡುಗಡೆಗೊಂಡು ಭರ್ಜರಿ ಗೆಲುವನ್ನು ಪಡೆದುಕೊಂಡಿದೆ. ರಕ್ತಚಂದನದ ಕಳ್ಳ ಸಾಗಾಣಿಕೆಯ ಕಥಾ ಹಂದರವನ್ನು ಹೊಂದಿರುವ ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್ ಅವರ ಅಭಿನಯವು ಬಹಳಷ್ಟು ಜನರ ಮನಸ್ಸನ್ನು ಗೆದ್ದಿದೆ. ಈ ಸಿನಿಮಾದ ಹಾಡುಗಳು ಪ್ರೇಕ್ಷಕರ ಮನಸ್ಸನ್ನು ವಿಶೇಷವಾಗಿ ಆಕರ್ಷಿಸಿದೆ. ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ನೀಡಿರುವ ಹಿನ್ನೆಲೆ ಸಂಗೀತವು ಸಂಗೀತಪ್ರಿಯರ ಮನಸ್ಸಿಗೆ ಮುದವನ್ನು ನೀಡಿದ.
ಇದೇ ಸಿನಿಮಾದ ಶ್ರೀವಲ್ಲಿ ಹಾಡಿನಲ್ಲಿ ನಟ ಅಲ್ಲು ಅರ್ಜುನ್ ಅವರ ಹುಕ್ ಸ್ಟೆಪ್ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಸೋಶಿಯಲ್ ಮೀಡಿಯಾ ಗಳಲ್ಲಿ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಕೂಡಾ ಈ ಸ್ಟೆಪ್ ಹಾಕುವ ಮೂಲಕ ಜನರ ಗಮನವನ್ನು ಸೆಳೆದಿದ್ದರು. ಇನ್ನು ಈ ಸಿನಿಮಾದಲ್ಲಿ ನಾಯಕಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಹೆಜ್ಜೆ ಹಾಕಿದ ಸಾಮಿ ಸಾಮಿ ಹಾಡು ಸಹಾ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದ್ದು ಸುಳ್ಳಲ್ಲ.
ಈ ಹಾಡಿಗೂ ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ಜನ ಅಭಿಮಾನಿಗಳು ಮಾತ್ರವಲ್ಲದೇ ಸಿನಿಮಾ ತಾರೆಯರು ಸ್ಟೆಪ್ಪು ಗಳನ್ನು ಹಾಕುವ ಮೂಲಕ ವಿಡಿಯೋಗಳನ್ನು ಹಂಚಿಕೊಂಡಿದ್ದು ಈ ವಿಡಿಯೋಗಳು ವೈರಲ್ ಆಗಿದೆ. ಈಗ ಮತ್ತೊಮ್ಮೆ ಇದೇ ಹಾಡಿನ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಹಾಡಿನ ವಿಶೇಷವೆಂದರೆ ಇದರಲ್ಲಿ ಒಬ್ಬ ಯುವಕ ಯುವತಿಯರ ರೀತಿಯಲ್ಲಿ ಸ್ಕರ್ಟ್ ಧರಿಸಿಕೊಂಡು ಸಾಮಿ ಸಾಮಿ ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾನೆ.
ಸಾಮಿ ಸಾಮಿ ಹಾಡಿಗೆ ಹೆಜ್ಜೆ ಹಾಕಿರುವ ಈತನ ಹೆಸರು ಜೈನಿಲ್ ಮೆಹತಾ ಎನ್ನಲಾಗಿದ್ದು, ಈತನೊಬ್ಬ ಕೋರಿಯೋಗ್ರಾಫರ್ ಎನ್ನಲಾಗಿದೆ. ಹುಡುಗಿಯರಂತೆ ವಸ್ತ್ರವನ್ನು ಧರಿಸಿಕೊಂಡು, ಅಮೆರಿಕದ ಬೀದಿಗಳಲ್ಲಿ ಡ್ಯಾನ್ಸ್ ಮಾಡುತ್ತಾನೆ ಎಂದು ಹೇಳಲಾಗಿದೆ. ಈಗ ಸಾಮಿ ಸಾಮಿ ಹಾಡಿಗೆ ಭರ್ಜರಿ ಸ್ಟೆಪ್ಪು ಗಳನ್ನು ಹಾಕಿ ಈತ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋವನ್ನು ಈಗಾಗಲೇ ಮೂರು ಲಕ್ಷಕ್ಕಿಂತಲೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.
ಈತನ ಡ್ಯಾನ್ಸ್ ವಿಡಿಯೋ ನೋಡಿದ ಕೆಲವರು ಅದನ್ನು ಮೆಚ್ಚಿಕೊಂಡು ಕಾಮೆಂಟ್ ಗಳನ್ನು ಮಾಡಿದರೆ, ಇನ್ನು ಕೆಲವರು ಹುಡುಗಿಯರ ಹಾಗೆಯೇ ಬಟ್ಟೆ ಹಾಕಿಕೊಂಡು ಏಕೆ ಡ್ಯಾನ್ಸ್ ಮಾಡಬೇಕು. ಅದರ ಬದಲಾಗಿ ಹುಡುಗರಂತೆಯೇ ವಸ್ತ್ರವನ್ನು ಧರಿಸಿ ಡ್ಯಾನ್ಸ್ ಮಾಡಿದರೆ ಏನಾಗುತ್ತದೆ? ಎಂದು ಪ್ರಶ್ನೆ ಮಾಡಿದ್ದಾರೆ. ವಿಷಯ ಏನೇ ಆದರೂ ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಸಧ್ಯಕ್ಕೆ ಈ ಯುವಕನ ಡ್ಯಾನ್ಸ್ ವಿಡಿಯೋ ಭರ್ಜರಿಯಾಗಿ ವೈರಲ್ ಆಗುತ್ತಿದೆ.