ರಶ್ಮಿಕಾ ಮತ್ತು ವಿಜಯ ದೇವರಕೊಂಡ ನಡುವೆ ಅದು ನಡೀತಿತ್ತು!! ಶಾಕಿಂಗ್ ಸತ್ಯ ಬಿಚ್ಚಿಟ್ಟ ಸಾರಾ ಆಲಿ ಖಾನ್

Written by Soma Shekar

Published on:

---Join Our Channel---

ನ್ಯಾಷನಲ್ ಕ್ರಶ್ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್ ನ ಹ್ಯಾಂಡ್ಸಮ್ ಹೀರೋ ವಿಜಯ ದೇವರಕೊಂಡ ನಡುವಿನ ಸ್ನೇಹ, ಆತ್ಮೀಯತೆ ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಅಲ್ಲದೇ ಆಗಾಗ ಇವರ ನಡುವೆ ಬೇರೆ ಏನೋ ಇದೆ ಎನ್ನುವ ಸುದ್ದಿ ಗಾಸಿಪ್ ಗಳಲ್ಲಿ ಹರಿದಾಡಿ ಸದ್ದನ್ನು ಮಾಡಿದ್ದುಂಟು. ಆದ್ರೆ ಈ ಜೋಡಿ ಮಾತ್ರ, ಅರೆ ನಮ್ಮ‌ ಮಧ್ಯೆ ಅಂತದ್ದೇನೂ ಇಲ್ಲ, ನಾವು ಜಸ್ಟ್ ಫ್ರೆಂಡ್ಸ್ ಅಂತಾನೇ ಹೇಳ್ಕೊಂಡು ತಿರುಗಾಡ್ತಾ ಇದ್ರು. ಆದ್ರೆ ಇದ್ದಕ್ಕಿದ್ದ ಹಾಗೆ ಅದೇನಾಯ್ತೋ ಗೊತ್ತಿಲ್ಲ, ಇಬ್ನರು ಈಗ ಎಲ್ಲೂ ಜೊತೆಯಾಗಿ ಕಾಣಿಸಿಕೊಳ್ತಿಲ್ಲ. ವಿಜಯ್ ದೇವರಕೊಂಡ ಬರ್ತಡೇ ಗೆ ರಶ್ಮಿಕಾ ವಿಶ್ ಕೂಡಾ ಮಾಡಿಲ್ಲ.

ಕರಣ್‌ ಜೋಹರ್ ಬರ್ತಡೇ ಪಾರ್ಟಿಯಲ್ಲಿ ಇಬ್ಬರೂ ಅಟೆಂಡ್ ಆಗಿದ್ರು ಸಹಾ ಎಲ್ಲೂ ಜೊತೆಯಾಗಿ ಒಂದು ಫೋಟೋ ಗೂ ಪೋಸ್ ನೀಡಿಲ್ಲ. ಇದೆಲ್ಲಾ ನೋಡಿದ ಅಭಿಮಾನಿಗಳು , ಓ ಇವರ ನಡುವೆ ಎಲ್ಲಾ ಸರಿಯಿಲ್ಲ ಅಂತ ಮಾತಾಡಿಕೊಳ್ತಾ ಇದ್ದಾರೆ. ಆದರೆ ಈಗ ಬಾಲಿವುಡ್ ಯುವ ಸ್ಟಾರ್ ನಟಿ, ಪಟೌಡಿ ವಂಶದ ಕುಡಿ ಸಾರಾ ಆಲಿ ಖಾನ್ ಒಂದು ಕಡೆ ಮಾತನಾಡುತ್ತಾ, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡ್ತಾ ಇದ್ದರು ಎಂದು ಹೇಳೋ ಮೂಲಕ ಬಾಂ ಬ್ ಒಂದನ್ನು ಸಿಡಿಸಿದ್ದಾರೆ. ಸಾರಾ ಮಾತು ಕೇಳಿ ಎಲ್ಲಾ ಶಾ ಕ್ ಆಗಿದ್ದಾರೆ.

ಬಾಲಿವುಡ್ ನ ಜನಪ್ರಿಯ ನಿರ್ಮಾಪಕ, ನಿರೂಪಕ ಕರಣ್ ಜೋಹರ್ ಅವರ ಬಹು ಜನಪ್ರಿಯ ಶೋ ಕಾಫಿ ವಿತ್ ಕರಣ್ ನ ಏಳನೇ ಸೀಸನ್ ಓಟಿಟಿಯಲ್ಲಿ ಆರಂಭವಾಗಿದ್ದು, ಮನರಂಜನೆ ನೀಡ್ತಾ‌ ಇದೆ. ಈ ಶೋ‌ ಗೆ ಇತ್ತೀಚಿಗೆ ಸಾರಾ ಆಲಿ ಖಾನ್ ಮತ್ತು ಜಾನ್ವಿ ಕಪೂರ್ ಸೆಲೆಬ್ರಿಟಿ ಗೆಸ್ಟ್ ಗಳಾಗಿ ಹೋಗಿದ್ದರು. ಈ ವೇಳೆ ರಶ್ಮಿಕಾ ಗೆ ಇನ್ಸ್ಟಾಗ್ರಾಂ ನಲ್ಲಿ ಫಾಲೋಯರ್ಸ್ ಹೆಚ್ಚಾಗಿರೋ ವಿಚಾರವಾಗಿ ಜಾನ್ವಿ ಅವರನ್ನು ಪ್ರಶ್ನೆ ಕೇಳಲಾಗಿತ್ತು. ಜಾನ್ವಿ ಅದರ ಬಗ್ಗೆ ಮಾತಾಡೋ ಮೊದಲೇ ಮಧ್ಯೆ ಪ್ರವೇಶ ಮಾಡಿದ ಸಾರ ಆಸಕ್ತಿಕರ ವಿಚಾರ ಶೇರ್ ಮಾಡಿದ್ದಾರೆ.

ಹೌದು, ಸಾರಾ ಪ್ರತಿಕ್ರಿಯೆ ನೀಡ್ತಾ ರಶ್ಮಿಕಾ ಮತ್ತು ವಿಜಯ ದೇವರಕೊಂಡ ಡೇಟ್ ಮಾಡ್ತಾ ಇದ್ದರು ಎನ್ನುವ ಮೂಲಕ ಇಷ್ಟು ದಿನ ಗಾಸಿಪ್ ಗಾಸಿಪ್ ಅಂತಿದ್ದ ವಿಚಾರದ ಮೇಲಿದ್ದ ಗುಟ್ಟೊಂದನ್ನು ರಟ್ಟು ಮಾಡಿದ್ದಾರೆ. ಸಾರಾ ಮಾತು ಕೇಳಿದ ನೆಟ್ಟಿಗರು ಹಾಗೂ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅಭಿಮಾನಿಗಳು ಸಹಾ ಈಗ ಶಾ ಕ್ ಆಗಿದ್ದಾರೆ. ಹಾಗಾದ್ರೆ ಸಾರಾ ಹೇಳಿದಂತೆ ಇವರ ನಡುವೆ ಡೇಟಿಂಗ್ ನಡಿದಿತ್ತಾ? ಈಗ ಸದ್ಯ ಇಬ್ಬರು ದೂರವಾಗಿದ್ದಾರಾ? ಅನ್ನೋ ಚರ್ಚೆ ಒಂದು ಈಗ ಆರಂಭ ಆಗಿದೆ.

Leave a Comment