ರಶ್ಮಿಕಾ, ಪೂಜಾ ಹೆಗ್ಡೆ ಸಿನಿಮಾ ಸಕ್ಸಸ್ ರೇಸ್ ನಲ್ಲಿ ಪೂಜಾ ಹೆಗ್ಡೆಗೆ ಹಿನ್ನಡೆ ಆಯ್ತಾ? ಹೌದು ಅಂತಿದೆ ಈ ಸುದ್ದಿ

Entertainment Featured-Articles News

ಸಿನಿಮಾ ರಂಗದಲ್ಲಿ ಸಕ್ಸಸ್ ಎನ್ನುವುದು ಒಂದು ಅದೃಷ್ಟ ಎನ್ನುವುದನ್ನು ಎಲ್ಲರೂ ಒಪ್ಪಲೇಬೇಕಾದ ವಿಷಯವಾಗಿದೆ. ಯಾರಿಗೆ ಸೋಲು ಯಾವಾಗ ಎದುರಾಗುತ್ತದೆ ಎನ್ನುವುದನ್ನು ಯಾರಿಂದಲೂ ಹೇಳುವುದು ಸಾಧ್ಯವಿಲ್ಲ. ಸತತ ಗೆಲುವುಗಳನ್ನು ಕಂಡ ನಟ, ನಟಿಯರಿಗೂ ಸಹಾ ಅನಿರೀಕ್ಷಿತ ಸೋಲು ಎದುರಾಗಬಹುದು. ಸಿನಿ ರಂಗದಲ್ಲಿ ಒಂದೆರಡು ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿ, ಮರೆಯಾದವರು ಕೂಡಾ ಇದ್ದಾರೆ. ಇದಕ್ಕೆ ಕಾರಣ ಅವರಿಗೆ ಸಿಗದ ಅವಕಾಶ ಹಾಗೂ ಗೆಲುವು ಎನ್ನುವುದು ವಾಸ್ತವದ ಕಾರಣ.

ದಕ್ಷಿಣ ಸಿನಿಮಾ ರಂಗದಲ್ಲಿ ಅದರಲ್ಲೂ ವಿಶೇಷವಾಗಿ ತೆಲುಗಿನಲ್ಲಿ ಇಬ್ಬರು ಕನ್ನಡ ಮೂಲದ ನಟಿಯರ ನಡುವೆ ಸಿಕ್ಕಾಪಟ್ಟೆ ಪೈಪೋಟಿ ನಡೆದಿತ್ತು. ರಶ್ಮಿಕಾ ಮಂದಣ್ಣ‌ ಮತ್ತು ಪೂಜಾ ಹೆಗ್ಡೆ ನಡುವೆ ಸಿನಿಮಾಗಳ ವಿಷಯದಲ್ಲಿ ಒಂದು ಸ್ಪರ್ಧೆಯೇ ನಡೆದಿತ್ತು. ಇಬ್ಬರೂ ನಟಿಯರಿಗೂ ಟಾಲಿವುಡ್ ನಲ್ಲಿ ಬೇಡಿಕೆ ಹೆಚ್ಚಿದೆ. ಸಾಲು ಸಾಲು ಹಿಟ್ ಸಿನಿಮಾಗಳು, ಸ್ಟಾರ್ ನಟರ ಜೊತೆ ನಟಿಸುತ್ತಾ ಈ ಇಬ್ಬರೂ ನಟಿಯರೂ ತಮ್ಮ ತಮ್ಮ ಸ್ಟಾರ್ ಗಿರಿಯನ್ನು ಎಂಜಾಯ್ ಮಾಡುತ್ತಿದ್ದರು. ಆದರೆ ಇದೀಗ ರಶ್ಮಿಕಾ ಮತ್ತು ಪೂಜಾ ಹೆಗ್ಡೆ ನಡುವಿನ ಈ ರೇಸ್ ನಲ್ಲಿ ಪೂಜಾ ಗೆ ಹಿನ್ನಡೆಯಾದಂತೆ ಇದೆ.

ಹೌದು, ಸಿಕ್ಕಾಪಟ್ಟೆ ಬೇಡಿಕೆಯ‌ ನಟಿಯಾಗಿರುವ ಪೂಜಾ ಹೆಗ್ಡೆ ನಟಿಸಿರುವ ಸಾಲು ಸಾಲು ಸಿನಿಮಾಗಳು ಬಾಕ್ಸಾಫೀಸಿನಲ್ಲಿ ಸದ್ದು ಮಾಡುವಲ್ಲಿ ವಿಫಲವಾಗಿದೆ. ಒಂದರ ನಂತರ ಮತ್ತೊಂದು ಎನ್ನುವ ಹಾಗೆ ಮೂರು ಸಿನಿಮಾಗಳು ಮಕಾಡೆ ಮಲಗಿವೆ. ಪೂಜಾ ಹೆಗ್ಡೆ ತೆಲುಗಿನಲ್ಲಿ ಈಗಾಗಲೇ ಸ್ಟಾರ್ ನಟರೊಂದಿಗೆ ತೆರೆಯನ್ನು ಹಂಚಿಕೊಂಡಿದ್ದಾರೆ. ಆದರೆ ಅವರ ವೃತ್ತಿ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಆಗಿದ್ದು ಅಲ್ಲು ಅರ್ಜುನ್ ಜೊತೆ ನಟಿಸಿದ ಅಲಾ ವೈಕುಂಠ ಪುರಮುಲೋ ಸಿನಿಮಾ.

ಆದರೆ ಅದೇಕೋ ಅದಾದ ನಂತರ ಇತ್ತೀಚಿನ ದಿನಗಳಲ್ಲಿ ಪೂಜಾ ಹೆಗ್ಡೆಗೆ ಅದೃಷ್ಟ ಕೈಕೊಟ್ಟಂತಾಗಿದೆ. ಟಾಲಿವುಡ್ ನ ಯಂಗ್ ರೆಬೆಲ್ ಸ್ಟಾರ್ ಖ್ಯಾತಿಯ ನಟ ಪ್ರಭಾಸ್ ಜೊತೆಗೆ ಪೂಜಾ ಹೆಗ್ಡೆ ನಾಯಕಿಯಾಗಿದ್ದ ರಾಧೇ ಶ್ಯಾಮ್ ಸಿನಿಮಾ ಬಿಡುಗಡೆಗೂ ಮುನ್ನ ಸಿಕ್ಕಾಪಟ್ಟೆ ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಪಾತ್ರಕ್ಕೆ ವಿಶೇಷ ಪ್ರಾಧಾನ್ಯತೆಯೂ ಇತ್ತು. ಆದರೆ ಸಿನಿಮಾ ಬಿಡುಗಡೆ ನಂತರ ತನ್ನ ಮ್ಯಾಜಿಕ್ ಮಾಡುವಲ್ಲಿ ವಿಫಲವಾಗಿ ಹೋಯಿತು.

ಇದಾದ ನಂತರ ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಜೊತೆ ಪೂಜಾ ಹೆಗ್ಡೆ ಅಭಿನಯದ ಬೀಸ್ಟ್ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಏಕೆಂದರೆ ಈ ಸಿನಿಮಾ ಸಹಾ ಬಿಡುಗಡೆಗೆ ಮುನ್ನ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸಿತ್ತು. ಅರೇಬಿಕ್ ಕುತು ಹಾಡು ಟ್ರೆಂಡ್ ಹುಟ್ಟು ಹಾಕಿತ್ತು. ಆದರೆ ಬಿಡುಗಡೆ ನಂತರ ಎಲ್ಲಾ ನಿರೀಕ್ಷೆಗಳು ಉಲ್ಟಾ ಹೊಡೆದವು. ಬೀಸ್ಟ್ ಸೋಲನ್ನು ಎದುರಿಸಿತು. ಪೂಜಾ ಹೆಗ್ಡೆ ಪಾಲಿಗೆ ಈ ಸಿನಿಮಾ ಮತ್ತೊಂದು ಸೋಲಿನ ರುಚಿಯನ್ನು ಸವಿಯುವ ಹಾಗೆ ಮಾಡಿತು.

ಎರಡು ಸಿನಿಮಾಗಳ ಸೋಲಿನ ನಂತರ ಮೂರನೇ ಸಿನಿಮಾ ಪೂಜಾ ಕೈ ಹಿಡಿಯಬಹುದು ಎನ್ನುವ ನಿರೀಕ್ಷೆ ಇತ್ತು. ಇದಕ್ಕೆ ಕಾರಣ ಮೆಗಾಸ್ಟಾರ್ ಚಿರಂಜೀವಿ ಹಾಗೂ ರಾಮ್ ಚರಣ್ ತೇಜಾ ಜೊತೆಯಾಗಿದ್ದ ಆಚಾರ್ಯ ಸಿನಿಮಾದಲ್ಲಿ ಪೂಜಾ ಹೆಗ್ಡೆ ಕಾಣಿಸಿಕೊಂಡರು. ಈ ಸಿನಿಮಾದಲ್ಲಿ ಪೂಜಾ ಅವರ ದೃಶ್ಯಗಳು ಕಡಿಮೆಯಿದ್ದರೂ ಸಹಾ ಅಲ್ಲೊಂದು ಮ್ಯಾಜಿಕ್ ಕ್ರಿಯೇಟ್ ಆಗಬಹುದೆನ್ನುವ ನಿರೀಕ್ಷೆ ಸುಳ್ಳಾಯಿತು. ಆಚಾರ್ಯ ಜನರಿಗೆ ಮನರಂಜನೆ ನೀಡುವಲ್ಲಿ ವಿ ಫ ಲವಾಗಿದೆ‌.

ಹೀಗೆ ಸತತ ಮೂರು ಸೋಲುಗಳು ಪೂಜಾ ಹೆಗ್ಡೆ ಅವರ ಖಾತೆಗೆ ಸೇರ್ಪಡೆಯಾಗಿದೆ. ಪ್ರಸ್ತುತ ಸರ್ಕಸ್ ಸಿನಿಮಾ ಹಾಗೂ ಮಹೇಶ್ ಬಾಬು ಜೊತೆಗೆ ಒಂದು ಸಿನಿಮಾ ಪೂಜಾ ಅವರ ಕೈಯಲ್ಲಿದ್ದು, ಈ ಸಿನಿಮಾಗಳು ಪೂಜಾ ಅವರಿಗೆ ಯಶಸ್ಸು ದೊರೆಯಲಿದೆಯಾ? ಕಾದು ನೋಡಬೇಕಾಗಿದೆ. ಆದರೆ ಇದೇ ವೇಳೆ ರಶ್ಮಿಕಾ ಮಾತ್ರ ಸಕ್ಸಸ್ ಗಳನ್ನು ಪಡೆದುಕೊಂಡು ಸಕ್ಸಸ್ ರೇಸ್ ನಲ್ಲಿ ಈಗ ಪೂಜಾ ಹೆಗ್ಡೆ ಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ ಎನ್ನುವುದು ವಾಸ್ತವ.

Leave a Reply

Your email address will not be published.