ರಶ್ಮಿಕಾ ಪಾಲಿಗೆ ವಿಲನ್ ಆದ ಸಮಂತಾ: ಅಸಲಿ ಮಜಾ ಈಗ ಬರುತ್ತೆ ಅಂತಿದ್ದಾರೆ ಸಿನಿ ಪ್ರೇಮಿಗಳು!! ಏನೀ ಕಥೆ?

Entertainment Featured-Articles Movies News

ಸಿನಿಮಾ ರಂಗದಲ್ಲಿ ಅದೃಷ್ಟ ಯಾರನ್ನು, ಎಲ್ಲಿ ಹೇಗೆ ಅರಸಿ ಬರುತ್ತೆ ಅಂತ ಹೇಳೋದು ತುಂಬಾ ಕಷ್ಟ. ಆದ್ರೆ ಅದೃಷ್ಟ ಮತ್ತು ಯಶಸ್ಸು ಎರಡು ಸಿಕ್ರೆ ಅಂತಹ ನಟ, ನಟಿಯರ ಸ್ಟಾರ್ ಡಂ ಬಹಳ ಎತ್ತರಕ್ಕೆ ಹೋಗುತ್ತೆ. ಅದಕ್ಕೆ ಸಾಕ್ಷಿ ಅನ್ನೋ ಹಾಗೆ ದಕ್ಷಿಣದ ಇಬ್ಬರು ಸ್ಟಾರ್ ನಟಿಯರು ದಕ್ಷಿಣದ ಸಿನಿಮಾ ರಂಗದಲ್ಲಿ ಮತ್ತು ಅತ್ತ ಬಾಲಿವುಡ್ ನಲ್ಲಿ ಸಹಾ ತಮ್ಮ ಹವಾ ಸೃಷ್ಟಿಸಿ, ಬಾಲಿವುಡ್ ನಟಿಯರು ಸಹಾ ಈ ದಕ್ಷಿಣದ ಹಾಟ್ ಹಾಟ್ ಬೆಡಗಿಯರ ಅಂದ, ಗ್ಲಾಮರ್ ಕಂಡು ಇವರತ್ತ ನೋಡುವಂತೆ ಆಗಿದೆ. ಹೀಗೆ ಸಖತ್ ಮಿಂಚ್ತಾ ಇರೋ ಆ ಇಬ್ಬರು ನಟಿಯರು ಮತ್ತಾರೂ ಅಲ್ಲ, ಸಮಂತಾ ಮತ್ತು ರಶ್ಮಿಕಾ ಮಂದಣ್ಣ‌.

ಇತ್ತೀಚಿನ ದಿನಗಳಲ್ಲಿ ಬೇರೆ ಯಾವ ನಟಿಯರ ಬಗ್ಗೆಯೂ ಇವರಿಬ್ಬರಷ್ಟು ಸುದ್ದಿಗಳಿಲ್ಲ ಎನ್ನುವುದು ಅಕ್ಷರಶಃ ಸತ್ಯವಾದ ಮಾತಾಗಿದೆ. ನಟಿ ಸಮಂತ ನಾಗಚೈತನ್ಯ ಜೊತೆಗೆ ವಿಚ್ಚೇದನದ ನಂತರ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇನ್ನು ಪುಷ್ಪ ಸಿನಿಮಾದಿಂದ ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್ ಆದ್ರೆ, ಅದೇ ಸಿ‌ನಿಮಾದಲ್ಲಿ ಒಂದು ಐಟಂ ಹಾಡಿಗೆ ಹೆಜ್ಜೆ ಹಾಕಿ ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದಾರೆ ಸಮಂತಾ. ಇಬ್ಬರ ನಡುವೆ ಒಂದು ರೀತಿಯಲ್ಲಿ ಪರೋಕ್ಷ ಸ್ಪರ್ಧೆ ಬಹಳ ಜೋರಾಗಿಯೇ ನಡೆದಿದೆ.

ಸಮಂತಾ ದಕ್ಷಿಣದಲ್ಲಿ ಮಹಿಳಾ ಪ್ರಧಾನ ಸಿ‌ನಿಮಾಗಳ ಜೊತೆಗೆ ಮೊದಲ ಬಾಲಿವುಡ್ ಪ್ರಾಜೆಕ್ಟ್ ಗೆ ಸಹಿ ಹಾಕಿದ್ದಾರೆ. ಇದೇ ವೇಳೆ ರಶ್ಮಿಕಾ ಕೂಡಾ ಬಾಲಿವುಡ್ ನಲ್ಲಿ ಮೂರನೇ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಇಬ್ಬರೂ ನಟಿಯರು ಸಹಾ ಜಾಹೀರಾತು ವಲಯದಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಸಿಕೊಂಡಿದ್ದಾರೆ. ಹತ್ತು ಹಲವು ಕಂಪನಿಗಳ ಪ್ರಾಡೆಕ್ಟ್ ಗಳ ಜಾಹೀರಾತಿನಲ್ಲಿ ಸಮಂತಾ ಮತ್ತು ರಶ್ಮಿಕಾ ಕಾಣಿಸಿಕೊಂಡು ಅಭಿಮಾ‌ನಿಗಳಿಗೆ ಖುಷಿ ನೀಡ್ತಾ ಇದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲೂ ಸಹಾ ಈ ಇಬ್ಬರು ದೊಡ್ಡ ಕ್ರೇಜ್ ಹುಟ್ಟು ಹಾಕಿದ್ದಾರೆ.

ವಿಚ್ಚೇದನದ ಬಳಿಕ ನಟಿ ಸಮಂತಾ ಬಿಂದಾಸ್ ಆಗಿ ಹೊಸ ಹೊಸ ಪಾತ್ರಗಳಿಗೆ ಸೈ ಎನ್ನುತ್ತಿದ್ದಾರೆ, ಬೋಲ್ಡ್ ಆಗಿ ಕಾಣಿಸಿಕೊಳ್ಳಲು ಹಿಂದೇಟು ಹಾಕ್ತಿಲ್ಲ. ರಶ್ಮಿಕಾ ಕೂಡಾ ಅದೇ ಹಾದಿಯಲ್ಲಿ ನಡೆಯುತ್ತಿದ್ದಾರೆ. ಈಗ ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಹೊಸ ಸುದ್ದಿಯೊಂದು ಹರಡಿದ್ದು, ರಶ್ಮಿಕಾ ಪಾಲಿನ ವಿಲನ್ ಆಗಲು ಹೊರಟಿದ್ದಾರಂತೆ ಸಮಂತಾ.. ಹೌದು, ಈ ವಿಷಯ ನಿಜ, ಆದ್ರೆ ಇದು ರಿಯಲ್ ಲೈಫ್ ನಲ್ಲಿ ಅಲ್ಲ, ಬದಲಿಗೆ ಸಿನಿಮಾ ಒಂದ್ರಲ್ಲಿ ಸಮಂತಾ ಹಾಗೂ ರಶ್ಮಿಕಾ ಕಾಣಿಸಿಕೊಳ್ಳುತ್ತಾರೆ ಎನ್ನುವ ವಿಚಾರ ಹಾಟ್ ಟಾಪಿಕ್ ಆಗಿದೆ.

ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಅಭಿನಯದ, ವಂಶಿ ಪೈಡಪಲ್ಲಿ ನಿರ್ದೇಶನದಲ್ಲಿ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬರುತ್ತಿರುವ ಸಿನಿಮಾ ವಾರಿಸು, ( ತೆಲುಗಿನಲ್ಲಿ ವಾರಸುಡು ) ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿರುವುದು ಎಲ್ಲರಿಗೂ ತಿಳಿದಿದೆ. ಆದರೆ ಈಗ ಹರಡಿರುವ ಸುದ್ದಿಗಳ ಪ್ರಕಾರ ಈ ಸಿನಿಮಾಕ್ಕೆ ಸಮಂತಾ ಕೂಡಾ ಎಂಟ್ರಿ ನೀಡುತ್ತಿದ್ದಾರೆ ಎನ್ನಲಾಗಿದೆ. ಇಲ್ಲಿ ಟ್ವಿಸ್ಟ್ ಏನಂದ್ರೆ ಸಮಂತಾ ನಾಯಕಿಯಾಗಿ ಅಲ್ಲ, ಬದಲಾಗಿ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಸಮಂತಾ ಮತ್ತು ರಶ್ಮಿಕಾ ಒಂದೇ ಸಿ‌ನಿಮಾದಲ್ಲಿ ಎಂದ ಮೇಲೆ ಅಸಲಿ ಆಟ ಈಗ ನಡೆಯಲಿದೆ, ನಿಜವಾದ ಮಜಾ ಈಗ ಸಿಗಲಿದೆ ಎಂದು ಸಿನಿಮಾ ಪ್ರೇಮಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪುಷ್ಪ ಸಿನಿಮಾದ ಒಂದು ಹಾಡಿನ ಮೂಲಕವೇ ನಾಯಕಿಗಿಂತ ಹೆಚ್ಚಿನ ಕ್ರೇಜ್ ಸೃಷ್ಟಿಸಿದ ಸಮಂತಾ, ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ನಿಜವೇ ಆದ್ರೆ ಸಮಂತಾ ಹಾಗೂ ರಶ್ಮಿಕಾ ಇಬ್ಬರಲ್ಲಿ ಯಾರು ಪ್ರೇಕ್ಷಕರ ಮನಸ್ಸನ್ನು ಗೆಲ್ತಾರೆ ಎನ್ನುವ ಚರ್ಚೆಗಳು ಆರಂಭವಾಗಿದೆ. ಒಟ್ಟಾರೆ ಅಧಿಕೃತ ಘೋಷಣೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *