ರಶ್ಮಿಕಾ ನಿಶ್ಚಿತಾರ್ಥ ಬ್ರೇಕಪ್ ಮಾಡಿಕೊಳ್ಳಲು ಕಾರಣ ನಾನೇ!! ಖ್ಯಾತ ಜ್ಯೋತಿಷಿಯ ಸಂಚಲನ ಹೇಳಿಕೆ

Entertainment Featured-Articles Movies News

ಈ ಮಾತನ್ನು ಕೇಳಿದರೆ ಯಾರೇ ಆದರೂ ಕೂಡಾ ಬೆಚ್ಚಿ ಬೀಳಬೇಕು ಅನ್ನೋ ಹಾಗಿದೆ. ಹೌದು ಸ್ಟಾರ್ ಹೀರೋಯಿನ್ ಆಗಿ ಮೆರೆಯುತ್ತಿರುವ ಕನ್ನಡದ ಖ್ಯಾತ ಬ್ಯೂಟಿ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಅವರ ಮೊದಲ‌ ಸಿನಿಮಾದ‌ ನಂತರ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಜೊತೆಗೆ ಆಗಿದ್ದು ಎಲ್ಲರಿಗೂ ತಿಳಿದ ವಿಚಾರ ಆಗಿದೆ. ಇದೆಲ್ಲಾ ರಶ್ಮಿಕಾ ತೆಲುಗು ಚಿತ್ರರಂಗಕ್ಕೆ ಅಡಿಯಿಡುವ ಮುನ್ನ ನಡೆದ ಘಟನೆಗಳಾಗಿದ್ದವು. ಆದರೆ, ಆಕೆ ಅನಿರೀಕ್ಷಿತವಾಗಿ ನಿಶ್ಚಿತಾರ್ಥ ಮುರಿದುಕೊಂಡು ರಕ್ಷಿತ್ ಶೆಟ್ಟಿ ಯನ್ನು ತೊರೆದ ವಿಚಾರವು ಸಹಾ ದೊಡ್ಡ ಸುದ್ದಿಯಾಯಿತು. ನಟಿ ರಶ್ಮಿಕಾ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಯಿತು.

ಆದರೆ ಈ ಅವರು ಏಕೆ ಬೇರ್ಪಟ್ಟರು ಎನ್ನುವ ವಿಚಾರವನ್ನು ಮಾತ್ರ ಸ್ಪಷ್ಟವಾಗಿ ಎಲ್ಲೂ ಬಹಿರಂಗ ಪಡಿಸಿಲ್ಲ. ರಕ್ಷಿತ್ ಶೆಟ್ಟಿ ಜೊತೆಗೆ ರಶ್ಮಿಕಾ ಮಂದಣ್ಣ ಬ್ರೇಕಪ್ ಆದ ನಂತರ, ಒಂದರ ಹಿಂದೆ ಮತ್ತೊಂದು ಎನ್ನುವಂತೆ ಸ್ಟಾರ್ ನಟರ‌ ಸಿ‌ನಿಮಾ ಗಳಲ್ಲಿ ನಟಿಸುತ್ತಾ, ಈಗ ಅಗ್ರ ಸ್ಥಾನದಲ್ಲಿದ್ದಾರೆ. ಆದರೆ, ಇತ್ತೀಚೆಗಷ್ಟೇ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ರಶ್ಮಿಕಾ ನಿಶ್ಚಿತಾರ್ಥದ ಬಗ್ಗೆ ಒಂದು ಸಂಚಲನಾತ್ಮಕ ಕಾಮೆಂಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಅವರು ಹೇಳಿರುವ ಮಾತು ಇದೀಗ ದೊಡ್ಡ ಸುದ್ದಿಯಾಗಿದೆ.

ವೇಣು ಸ್ವಾಮಿ ಮಾತನಾಡುತ್ತಾ “ಅವರಿಬ್ಬರ ಜಾತಕ ಹೊಂದಾಣಿಕೆಯಾಗದ ಕಾರಣ ರಶ್ಮಿಕಾಗೆ ತಮ್ಮ ಬಾಯ್‌ಫ್ರೆಂಡ್‌ನಿಂದ ಬ್ರೇಕ್ ಅಪ್ ಮಾಡಿಕೊಳ್ಳಲು ನಾನು ಹೇಳಿದ್ದೆ. ಮದುವೆಯಾದರೂ ಸಹಾ ಮುಂದೆ ವಿಚ್ಛೇದನಕ್ಕೆ ಕಾರಣವಾಗುತ್ತದೆ. ಮೇಲಾಗಿ ರಶ್ಮಿಕಾ ಜಾತಕ ತುಂಬಾ ಚೆನ್ನಾಗಿದೆ. ಇಂಡಸ್ಟ್ರಿ ಆಳುವ ಹೀರೋಯಿನ್ ಆಗುತ್ತಾರೆ ಎನ್ನುವುದು ನನಗೆ ಗೊತ್ತು, ಅದಕ್ಕೆ ಆಗ ಆ ಸಲಹೆ ನೀಡಿದ್ದೆ” ಎಂದು ಹೇಳುವ ಮೂಲಕ ದೊಡ್ಡ ಬಾಂಬ್ ಸಿಡಿಸಿದ್ದಾರೆ ವೇಣು ಸ್ವಾಮಿ.

ವೇಣು ಸ್ವಾಮಿ ಹೇಳಿಕೆಗಳು ಇತ್ತೀಚಿಗೆ ಬಾರಿ ಸದ್ದನ್ನು ಮಾಡುತ್ತಿವೆ. ಈ ಹಿಂದೆ ಅವರು ಸಮಂತಾ ಮತ್ತು ನಾಗಚೈತನ್ಯ ಬೇರೆಯಾಗುವರೆಂದು ಹೇಳಿದ್ದರು. ಅವರ ಮಾತು ಸತ್ಯವಾಗಿತ್ತು. ಕೆಲವೇ ದಿನಗಳ ಹಿಂದೆಯಷ್ಟೇ ನಟ ಪವನ್ ಕಲ್ಯಾಣ್ ಹಾಗೂ ಮೆಗಾಸ್ಟಾರ್ ಮಗಳು ಶ್ರೀಜಾ ಗೆ ನಾಲ್ಕು ಮದುವೆ ಯೋಗ ಇದೆ ಎಂದು ಭವಿಷ್ಯವಾಣಿ ನುಡಿದಿದ್ದಾರೆ ವೇಣು ಸ್ವಾಮಿ. ಇವೆಲ್ಲವುಗಳ ನಡುವೆ ರಶ್ಮಿಕಾ ಬ್ರೇಕಪ್ ಗೆ ಕಾರಣ ನಾನು ಎಂದು ಹೇಳಿ ಸದ್ದು ಮಾಡಿದ್ದಾರೆ.

Leave a Reply

Your email address will not be published.