ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಸದ್ಯಕ್ಕೆ ಇಬ್ಬರು ನಟಿಯರ ಯಶಸ್ಸಿನ ಪಯಣ ಬಹಳ ಜೋರಾಗಿ ನಡೆಯುತ್ತಿದೆ. ಪ್ರತಿ ದಿನವೂ ಈ ನಟಿಯರಿಬ್ಬರ ಕುರಿತಾಗಿ ಒಂದಲ್ಲಾ ಒಂದು ಸುದ್ದಿ ಜನರ ಗಮನವನ್ನು ಸೆಳೆಯುತ್ತಲೇ ಇರುತ್ತದೆ. ಈ ಇಬ್ಬರು ನಟಿಯರು ಎಲ್ಲಿದ್ದರೆ ಅಲ್ಲೊಂದು ಸುದ್ದಿ ಎನ್ನುವಷ್ಟರ ಮಟ್ಟಿಗೆ ಕ್ರೇಜ್ ಸೃಷ್ಟಿಯಾಗಿರುವುದು ವಾಸ್ತವ. ಹೌದು ನಿಮ್ಮ ಊಹೆ ಸರಿ ನಾವೀಗ ಹೇಳುತ್ತಿರುವುದು ಪ್ರಸ್ತುತ ದಿನಗಳಲ್ಲಿ ದಕ್ಷಿಣದಿಂದ ಬಾಲಿವುಡ್ ವರೆಗೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ನಟಿಯರಾದ ಸಮಂತಾ ಮತ್ತು ರಶ್ಮಿಕಾ ಮಂದಣ್ಣ ಕುರಿತಾಗಿಯೇ. ಬಹುಶಃ ಇತ್ತೀಚಿನ ದಿನಗಳಲ್ಲಿ ಈ ನಟಿಯರಷ್ಟು ಸುದ್ದಿಯಾದ ನಟಿ ಮತ್ತಾರೂ ಇಲ್ಲ ಎನ್ನಬಹುದು.
ನಟಿ ಸಮಂತಾ ಇತ್ತೀಚಿಗೆ ಸಾಲು ಸಾಲು ಸಿನಿಮಾಗಳಲ್ಲಿ ಮತ್ತು ಜಾಹೀರಾತುಗಳಲ್ಲಿ ತೊಡಗಿಕೊಂಡಿದ್ದಾರೆ. ಮಹಿಳಾ ಪ್ರಧಾನ ಕಥೆಗಳ ಸಿನಿಮಾಗಳಿಗೆ ಸಮಂತಾ ನಾಯಕಿಯಾದರೆ ಚೆನ್ನ ಎನ್ನುವಷ್ಟು ಕ್ರೇಜ್ ಸೃಷ್ಟಿಯಾಗಿದೆ. ಪುಷ್ಪ ಸಿನಿಮಾದ ಐಟಂ ಹಾಡಿಗೆ ಸೊಂಟ ಬಳುಕಿಸಿದ ನಂತರ ಸಮಂತಾ ಕ್ರೇಜ್ ಇಡೀ ದೇಶದಲ್ಲೇ ಹೆಚ್ಚಿದೆ. ಇದೇ ವೇಳೆ ರಶ್ಮಿಕಾ ಕೂಡಾ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡು, ಸೂಪರ್ ಹಿಟ್ ಸಿನಿಮಾಗಳ ಮೂಲಕ ಸ್ಟಾರ್ ನಟಿ ಮಾತ್ರವೇ ಅಲ್ಲದೇ ಬಹು ಬೇಡಿಕೆಯ ನಟಿ ಕೂಡಾ ಎನಿಸಿಕೊಂಡಿದ್ದಾರೆ.
ಪುಷ್ಪ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಶ್ಮಿಕಾ ಬಾಲಿವುಡ್ ನಲ್ಲಿ ಮೂರನೇ ಸಿನಿಮಾದಲ್ಲಿ ನಟಿಸುತ್ತಿದ್ದು, ಅತಿಥಿ ಪಾತ್ರದ ಮೂಲಕ ಮಲೆಯಾಳಂ ಸಿನಿ ರಂಗ ಪ್ರವೇಶ ಮಾಡಿದ್ದು, ಪಂಚಭಾಷಾ ತಾರೆಯ ಪಟ್ಟವನ್ನು ಪಡೆದುಕೊಂಡಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಒಂದು ರೀತಿಯಲ್ಲಿ ಸಮಂತಾ ಮತ್ತು ರಶ್ಮಿಕಾ ನಡುವೆ ಪೈಪೋಟಿ ನಡೆಯುತ್ತಿದೆ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೇ ನಾವು ಒಪ್ಪಬೇಕಾದಂತಹ ಬೆಳವಣಿಗೆಗಳು ಕಾಣುತ್ತಿವೆ.
ಹೀಗೆ ಸ್ಟಾರ್ ಡಂ ಪಡೆದಿರುವ ಈ ಇಬ್ಬರು ನಟಿಯರು ಒಂದೇ ಸಿನಿಮಾದಲ್ಲಿ ನಾಯಕಿರಾಗಿ ಕಾಣಿಸಿಕೊಂಡರೆ? ಎನ್ನುವ ಪ್ರಶ್ನೆ ಬಂದರೆ ಸಹಜವಾಗಿಯೇ ಒಂದು ಕುತೂಹಲ ಮೂಡುತ್ತದೆ. ಆದರೆ ಇಂತಹ ಒಂದು ಆಫರ್ ಗೆ ನಟಿ ಸಮಂತಾ ನೋ ಎಂದು ರಶ್ಮಿಕಾ ಜೊತೆ ನಟಿಸುವ ಅವಕಾಶವನ್ನು ರಿಜೆಕ್ಟ್ ಮಾಡಿದ್ದಾರೆ ಎನ್ನುವ ಸುದ್ದಿಯೊಂದು ಟಾಲಿವುಡ್ ನ ಮಾದ್ಯಮವೊಂದು ವರದಿ ಮಾಡಿದೆ. ಹೌದು, ಸಮಂತಾ ರಶ್ಮಿಕಾ ಜೊತೆ ಸಿನಿಮಾ ಮಾಡೋದಿಕ್ಕೆ ತಿರಸ್ಕಾರ ಮಾಡಿದ್ದಾರೆ ಎನ್ನಲಾಗಿದೆ.
ನಟಿ ಸಮಂತಾ ತಾವು ತಮಿಳಿನಲ್ಲಿ ಕಾತುವಾಕಲ ರೆಂಡು ಕಾದಲ್ ಸಿನಿಮಾದಲ್ಲಿ ನಟ ವಿಜಯ್ ಸೇತುಪತಿ ಮತ್ತು ನಯನತಾರಾ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದರು. ಆದರೆ ಈಗ ತಾನು ಮಲ್ಟಿ ಸ್ಟಾರರ್ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎನ್ನುವ ನಿರ್ಧಾರವನ್ನು ಮಾಡಿರುವ ಕಾರಣದಿಂದಾಗಿ ರಶ್ಮಿಕಾ ಜೊತೆಗೆ ನಟಿಸುವ ಅವಕಾಶವನ್ನು ರಿಜೆಕ್ಟ್ ಮಾಡಿದ್ದಾರೆ ಎನ್ನುವುದಾಗಿ ಹೇಳಲಾಗಿದೆ. ಸಮಂತಾ ರಶ್ಮಿಕಾ ಸಿನಿಮಾಕ್ಕೆ ನೋ ಹೇಳಿದ್ದರಿಂದ ರಶ್ಮಿಕಾ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ.