ಟಾಲಿವುಡ್ ಚಿತ್ರ ಜಗತ್ತಿನಲ್ಲಿ ಸದ್ಯಕ್ಕೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿರುವ ಪುಷ್ಪ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಬಹಳ ಕಾತರರಾಗಿದ್ದಾರೆ. ನಟಿ ರಶ್ಮಿಕಾ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಕೂಡಾ ಇದಾಗಿದೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದಲ್ಲಿ ರಶ್ಮಿಕಾ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಆಗಿತ್ತು. ಫಸ್ಟ್ ಲುಕ್ ಗೆ ಮೆಚ್ಚುಗೆಗಳು ಹರಿದು ಬಂದಿದೆ. ಇದೇ ವೇಳೆ ಎಂದಿನ ಹಾಗೆ ಭರ್ಜರಿ ಟ್ರೋಲ್ ಕೂಡಾ ಆಗಿದೆ.
ಪುಷ್ಪ ಸಿನಿಮಾದ ಮೊದಲನೇ ಭಾಗ ಡಿಸೆಂಬರ್ 17 ಕ್ಕೆ ಬೆಳ್ಳಿ ತೆರೆಗೆ ಬರಲಿದೆ ಎನ್ನುವ ಘೋಷಣೆ ಈಗಾಗಲೇ ಆಗಿದೆ. ನಟಿ ರಶ್ಮಿಕಾ ಮಂದಣ್ಣ ತಮ್ಮ ಪುಷ್ಪ ಸಿನಿಮಾದ ನಟನೆಯ ಅನುಭವವನ್ನು ಇತ್ತೀಚಿಗೆ ಮಾದ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ನಟಿ ರಶ್ಮಿಕಾ ಇದು ನನ್ನ ಮೊದಲನೇ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ, ಸಿನಿಮಾ ಬಿಡುಗಡೆ ದಿನಾಂಕದ ಘೋಷಣೆಯಾದಾಗಲೇ ನಾನು ಹೆದರಿದ್ದೆ ಎಂದಿದ್ದಾರೆ.
ಪುಷ್ಪ ಸಿನಿಮಾದಲ್ಲಿನ ನನ್ನ ಪಾತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎನ್ನುವ ಭಯ ಹಾಗೂ ಒತ್ತಡದಲ್ಲೇ ನಾನು ಸಿನಿಮಾದ ಬಿಡುಗಡೆಗಾಗಿ ನಿರೀಕ್ಷೆ ಮಾಡುತ್ತಿದ್ದೆ. ಆದರೆ ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆ ಮುಂದೂಡಲಾಯಿತು. ಈ ಸಿನಿಮಾದಲ್ಲಿ ನನ್ನ ಪಾತ್ರ ಬಹಳ ವಿಶೇಷವಾಗಿದೆ ಎಂದು ರಶ್ಮಿಕಾ ತಮ್ಮ ಪಾತ್ರದ ಬಗ್ಗೆ ಮೆಚ್ಚುಗೆಯನ್ನು ಸಹಾ ಈ ವೇಳೆ ವ್ಯಕ್ತಪಡಿಸಿದ್ದಾರೆ. ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ಶ್ರೀವಲ್ಲಿ ಎನ್ನುವ ಪಾತ್ರವನ್ನು ನಿರ್ವಹಣೆ ಮಾಡುತ್ತಿದ್ದಾರೆ.
ಶ್ರೀವಲ್ಲಿ ಪಾತ್ರದ ವ್ಯಾಪ್ತಿಯು ಸಿನಿಮಾದಲ್ಲಿ ಬಹಳ ದೊಡ್ಡದಾಗಿದೆ. ಈ ಚಿತ್ರವು ನನ್ನ ಜೀವನದಲ್ಲಿ ಒಂದು ಮೈಲಿಗಲ್ಲಾಗಲಿದೆ ಎಂದು ರಶ್ಮಿಕಾ ಹೇಳಿದ್ದಾರೆ. ಇದೇ ಅಕ್ಟೋಬರ್ 13 ರಂದು ರಶ್ಮಿಕಾ ಅವರ ಪಾತ್ರದ ಶೀವಲ್ಲಿ ಹಾಡು ಸಹಾ ಬಿಡುಗಡೆ ಆಗಲಿದ್ದು, ಈಗ ರಶ್ಮಿಕಾ ಅವರ ಅಭಿಮಾನಿಗಳು ಈ ಹಾಡಿನ ನಿರೀಕ್ಷೆಯನ್ನು ಮಾಡುತ್ತಿದ್ದಾರೆ. ಖ್ಯಾತ ಗಾಯಕ ಸಿದ್ಧ್ ಶ್ರೀರಾಮ್ ಈ ಹಾಡನ್ನು ನಾಲ್ಕು ಭಾಷೆಗಳಲ್ಲಿ ಸಹಾ ಹಾಡಿದ್ದಾರೆ. ನಾಲ್ಕು ಭಾಷೆಗಳಲ್ಲಿ ಒಂದೇ ದನಿಯಲ್ಲಿ ಹಾಡು ಮೂಡಿ ಬರುತ್ತಿರುವುದು ವಿಶೇಷವಾಗಿದೆ.