ರಶ್ಮಿಕಾ ಎನರ್ಜಿಗೆ ನೆಟ್ಟಿಗರು ಫಿದಾ: ಹೊಸ ವೀಡಿಯೋ ನೋಡಿ ವಾವ್ ಎಂದ ಅಭಿಮಾನಿಗಳು!!

Entertainment Featured-Articles News Viral Video

ಬಹುಭಾಷಾ ನಟಿಯಾಗಿ, ಪುಷ್ಪ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ದೊಡ್ಡಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿ ರಶ್ಮಿಕಾ ಮಂದಣ್ಣ, ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ರಶ್ಮಿಕಾ ಈಗ ಕೇವಲ ಬಹುಭಾಷಾ ನಟಿ ಮಾತ್ರವೇ ಅಲ್ಲದೇ ಬಹುಬೇಡಿಕೆಯ ನಟಿ ಕೂಡ ಆಗಿದ್ದು, ರಶ್ಮಿಕಾ ಮಂದಣ್ಣ ಎಲ್ಲಿ ಇದ್ದರೆ ಅಲ್ಲಿ ಖಂಡಿತ ಸುದ್ದಿ ಎನ್ನುವಂತೆ ಅವರ ತಾರ ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರಶ್ಮಿಕಾ ಸಿನಿಮಾ ವಿಷಯಗಳಿಗೆ ಮಾತ್ರವೇ ಅಲ್ಲದೆ ಅವರ ವೈಯಕ್ತಿಕ ಜೀವನದ ಕುರಿತಾಗಿಯೂ ಸಹಾ ಸುದ್ದಿ ಆಗುವುದುಂಟು.

ಇನ್ನು ಫಿಟ್ನೆಸ್ ಗೆ ಮೊದಲ ಆದ್ಯತೆಯನ್ನು ನೀಡುವ ರಶ್ಮಿಕಾ ಅವರ ಫಿಟ್ನೆಸ್ ಕುರಿತಾಗಿಯೂ ಆಗಾಗ ಚರ್ಚೆಗಳು ನಡೆಯುತ್ತವೆ. ರಶ್ಮಿಕಾ ಫಿಟ್ನೆಸ್ ಗೆ ಎಷ್ಟು ಪ್ರಾಧಾನ್ಯತೆ ನೀಡುತ್ತಾರೆ ಎನ್ನುವುದನ್ನು ತೋರಿಸುವ ಹೊಸದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಿಮ್ ನಲ್ಲಿ ಬಹಳ ಶ್ರಮ ವಹಿಸಿ ವರ್ಕೌಟ್ ಮಾಡುತ್ತಿರುವ ರಶ್ಮಿಕಾ ವಿಡಿಯೋವನ್ನು ನೋಡಿ ನಟಿಯ ಅಭಿಮಾನಿಗಳು ಅಚ್ಚರಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಜಿಮ್ ನಲ್ಲಿ ತಾನು ನಡೆಸುತ್ತಿರುವ ಕಸರತ್ತಿನ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ರಶ್ಮಿಕಾ ಶೇರ್ ಮಾಡಿಕೊಂಡಿದ್ದಾರೆ ರಶ್ಮಿಕಾ. ನಟಿಯು ಶೇರ್ ಮಾಡಿದ ವಿಡಿಯೋ ನೋಡಿ ಅವರ ಅಭಿಮಾನಿಗಳು ಮೆಚ್ಚುಗೆಗಳನ್ನು ಹರಿಸುತ್ತಿದ್ದಾರೆ. ಇನ್ನು ರಶ್ಮಿಕಾ ತಮ್ಮ ಯಾವ ಹೊಸ ಸಿನಿಮಾಕ್ಕಾಗಿ ಎಷ್ಟೆಲ್ಲಾ ಶ್ರಮ ಪಡುತ್ತಿದ್ದಾರೆ ಎನ್ನುವುದು ಮಾತ್ರ ತಿಳಿದಿಲ್ಲ. ರಶ್ಮಿಕಾ ಹಂಚಿಕೊಂಡಿರುವ ಕೆಲವೇ ಸೆಕೆಂಡುಗಳ ವಿಡಿಯೋದಲ್ಲಿ ಅವರು ವಿವಿಧ ವ್ಯಾಯಾಮಗಳನ್ನು ಮಾಡಿದ್ದಾರೆ.

ವಿಡಿಯೋ ಶೇರ್ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ 20 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋವನ್ನು ವೀಕ್ಷಣೆ ಮಾಡಿದ್ದು, ಆರು ಸಾವಿರಕ್ಕಿಂತಲೂ ಅಧಿಕ ಜನರು ಕಾಮೆಂಟ್ಗಳನ್ನು ಮಾಡುವ ಮೂಲಕ ನಟಿಗೆ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ವಿಡಿಯೋ ಶೇರ್ ಮಾಡಿಕೊಂಡ ನಟಿ, ನಿಮಗೆ ಈ ವರ್ಕೌಟ್ ಇಷ್ಟವಾದರೆ ಬೈಸೆಪ್ಸ್ ಇಮೋಜಿಯನ್ನು ಕಾಮೆಂಟ್ ಮಾಡಿ ಎಂದು ಕೂಡೂ ಬರೆದುಕೊಂಡಿದ್ದಾರೆ. ಅವರು ಹೇಳಿದಂತೆ ಅಭಿಮಾನಿಗಳು ಸಹಾ ಹಾಗೆ ಕಾಮೆಂಟ್ ಮಾಡುತ್ತಿದ್ದಾರೆ.

Leave a Reply

Your email address will not be published.