ರಶ್ಮಿಕಾ ಈ ಸಿ‌ನಿಮಾ ಒಪ್ಪಲೇಬಾರದಿತ್ತು: ವೇಸ್ಟ್ ಆಫ್ ಟೈಮ್! ರಶ್ಮಿಕಾ ಸಿನಿಮಾ ಬಗ್ಗೆ ಪ್ರೇಕ್ಷಕರ ರಿಯಾಕ್ಷನ್

Entertainment Featured-Articles News

ನಟಿ ರಶ್ಮಿಕಾ ಮಂದಣ್ಣ ಪ್ರಸ್ತುತ ತೆಲುಗು, ತಮಿಳು ಮತ್ತಿ ಹಿಂದಿ ಸಿನಿಮಾಗಳಲ್ಲಿ ಅಲ್ಲಿನ ಸ್ಟಾರ್ ನಟರ ಜೊತೆಗೆ ನಟಿಸುವ ಮೂಲಕ ಸಾಕಷ್ಟು ಬ್ಯುಸಿಯಾಗಿದ್ದಾರೆ. ದಕ್ಷಿಣದಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ತಾನೊಬ್ಬ ಅದೃಷ್ಟವಂತ ನಟಿ ಎಂದು ಸಾಬೀತು ಮಾಡಿದ್ದಾರೆ. ಹಿಂದಿಯಲ್ಲಿ ರಶ್ಮಿಕಾ ಅಭಿನಯದ ಎರಡು ಸಿನಿಮಾಗಳು ಬಿಡುಗಡೆಗೆ ಕಾದಿವೆ. ಈ ನಡುವೆ ತೆಲುಗು ಚಿತ್ರರಂಗದ ಸ್ಟಾರ್ ನಟ ಅಲ್ಲು ಅರ್ಜುನ್ ಜೊತೆಗೆ ಪುಷ್ಪ ಸಿನಿಮಾದಲ್ಲಿ ನಟಿಸಿದ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮತ್ತಷ್ಟು ಜನಪ್ರಿಯತೆಯನ್ನು ರಶ್ಮಿಕಾ ತನ್ನದಾಗಿಸಿಕೊಂಡಿದ್ದಾರೆ.

ಇವೆಲ್ಲವುಗಳ ಬೆನ್ನಲ್ಲೇ ಇದೀಗ ರಶ್ಮಿಕಾ ಮಂದಣ್ಣ ಅಭಿನಯದ ತೆಲುಗು ಸಿನಿಮಾ, ನಟ ಶರ್ವಾನಂದ್ ನಾಯಕನಾಗಿ ಕಾಣಿಸಿಕೊಂಡಿರುವ ಸಿನಿಮಾ ಆಡವಾಳ್ಳು ಮೀಕು ಜೋಹಾರ್ಲು ಎನ್ನುವ ಹೆಸರಿನ ಹೊಸ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾ ಬಿಡುಗಡೆಯ ನಂತರ ಸಿನಿಮಾ ಹೇಗಿದೆ ಎನ್ನುವ ಪ್ರತಿಕ್ರಿಯೆಗಳು, ಪ್ರೇಕ್ಷಕರಿಂದ ಸಾಮಾಜಿಕ ಜಾಲತಾಣಗಳ ಮೂಲಕ ದೊಡ್ಡ ಮಟ್ಟದಲ್ಲೇ ಹರಿದು ಬರುತ್ತಿದೆ. ಸಿನಿಮಾ ನೋಡಿದ ಮಂದಿ ರಶ್ಮಿಕಾ ಈ ಸಿನಿಮಾ ಮಾಡಲೇಬಾರದಿತ್ತು ಎನ್ನುವ ಮಾತನ್ನು ಸಹ ಹೇಳಿದ್ದಾರೆ.

ಹಾಗಾದರೆ ಈ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರಿಂದ ಬರುತ್ತಿರುವ ಪ್ರತಿಕ್ರಿಯೆಗಳು ಏನು ಎನ್ನುವುದನ್ನು ತಿಳಿಯೋಣ ಬನ್ನಿ. ನಟ ಶರ್ವಾನಂದ್ ತೆಲುಗಿನಲ್ಲಿ ಉತ್ತಮ ಕೌಟುಂಬಿಕ ಕಥಾ ಸಿನಿಮಾಗಳಿಗೆ ಹಾಗೂ ಪ್ರೇಮ ಕಥೆಗಳಿಗೆ ಹೆಸರುವಾಸಿಯಾದ ನಟನಾಗಿದ್ದಾರೆ. ಅವರ ಸಿನಿಮಾಗಳನ್ನು ನೋಡುವ ಪ್ರತ್ಯೇಕ ಪ್ರೇಕ್ಷಕರ ವರ್ಗವೇ ಇದೆ. ಇನ್ನು ಈಗ ಅವರು ನಾಯಕನಾಗಿ ಕಾಣಿಸಿಕೊಂಡಿರುವ ಆಡವಾಳ್ಳು ಮೀಕು ಜೋಹಾರ್ಲು ಸಿನಿಮಾ ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದೆ.

ಸಂಭಾಷಣೆಗಳು ಉತ್ತಮವಾಗಿದ್ದು, ಹಾಸ್ಯ ರಸವತ್ತಾಗಿದೆ. ಶರ್ವಾನಂದ್ ನಟನೆ ಚೆನ್ನಾಗಿದೆ, ನಟಿ ರಶ್ಮಿಕಾ ಗ್ಲಾಮರ್ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನುಳಿದಂತೆ ಸಿನಿಮಾದ ಎಲ್ಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಕಲಾವಿದರು ಸಹಾ ಬಹಳ ಚೆನ್ನಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಸಿನಿಮಾದ ಹಾಡುಗಳು ಹಾಗೂ ಸಂಗೀತ ಕೂಡಾ ಚೆನ್ನಾಗಿದೆ ಎಂದು ಒಂದಷ್ಟು ಜನ ಪಾಸಿಟಿವ್ ಅಂಶಗಳನ್ನು ತಿಳಿಸಿದ್ದಾರೆ. ಇದೇ ವೇಳೆ ನೆಗೆಟಿವ್ ಕಾಮೆಂಟ್ ಗಳು ಭರ್ಜರಿಯಾಗಿ ಹರಿದು ಬಂದಿವೆ.

ಸಿನಿಮಾದ ಸಂಗೀತ ಹಾಗೂ ಬಿಜಿಎಂ ಚೆನ್ನಾಗಿಲ್ಲ. ಇದೊಂದು ಸಾಮಾನ್ಯ ಕಥೆ, ಕ್ಲೈಮ್ಯಾಕ್ಸ್ ಇನ್ನೂ ಚೆನ್ನಾಗಿ ಮೂಡಿ ಬರಬೇಕಾಗಿತ್ತು. ಇದೊಂದು ಸೆಕೆಂಡ್ ಆಫ್ ಬಹಳ ಬೋರ್ ಆಗುತ್ತದೆ. ಸಿನಿಮಾದ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಬೇಡಿ. ಇದೊಂದು ಧಾರಾವಾಹಿ ಇದ್ದ ಹಾಗಿದೆ. ವೇಸ್ಟ್ ಆಫ್ ಟೈಮ್, ಓಟಿಟಿಗೂ ಲಾಯಕ್ಕಿಲ್ಲ, ರಶ್ಮಿಕಾ ಈ ಸಿನಿಮಾ ಮಾಡಲೇಬಾರದಾಗಿತ್ತು. ಇನ್ನು ಶರ್ವಾನಂದ್ ಅವರ ಖಾತೆಗೆ ಮತ್ತೊಂದು ಸೋಲು ಎಂದೆಲ್ಲಾ ಪ್ರೇಕ್ಷಕರು ಕಾಮೆಂಟ್ ಗಳನ್ನು ಮಾಡಿದ್ದಾರೆ.

Leave a Reply

Your email address will not be published.