ರಶ್ಮಿಕಾ ಅಭಿಮಾನಿಗಳಿಗೆ ದೊಡ್ಡ ಶಾಕ್: ರಶ್ಮಿಕಾ ಪಾತ್ರಕ್ಕೆ ಬಿತ್ತು ಕತ್ತರಿ, ಇಂತಹ ನಿರ್ಧಾರಕ್ಕೆ ಕಾರಣವೇನು?

0 0

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ನಟಿ, ಪುಷ್ಪ ಸಿನಿಮಾದ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಕೂಡಾ ಹೌದು. ಒಂದರ ನಂತರ ಮತ್ತೊಂದು ಎನ್ನುವ ಹಾಗೆ ಸ್ಟಾರ್ ಸಿನಿಮಾಗಳಲ್ಲಿ ಬ್ಯುಸಿ, ಬಾಲಿವುಡ್ ನಲ್ಲಿ ಎರಡು ಸಿನಿಮಾಗಳ ಬಿಡುಗಡೆ ಇನ್ನೂ ಆಗಿಲ್ಲವಾದರೂ ಅದಾಗಲೇ ಮೂರನೇ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ‌ದಕ್ಷಿಣದ ನಾಲ್ಕು ಭಾಷೆಗಳ ಚಿತ್ರರಂಗಕ್ಕೆ ಎಂಟ್ರಿ ನೀಡಿ ಆಗಿದೆ. ಸ್ಯಾಂಡಲ್ವುಡ್ ನ ಸಾನ್ವಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದ ರಶ್ಮಿಕಾ ಪುಷ್ಪ ಸಿನಿಮಾದ ಶ್ರೀವಲ್ಲಿಯಾಗಿ ಸಖತ್ ಸದ್ದು ಮಾಡಿರುವುದು ಸಹಾ ವಾಸ್ತವ.

ಪುಷ್ಪ ಸಿನಿಮಾ ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಇಬ್ಬರಿಗೂ ಕೂಡಾ ಹೊಸ ಸ್ಟಾರ್ ಡಂ ತಂದು ಕೊಟ್ಟ ಸಿನಿಮಾ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅಲ್ಲು ಅರ್ಜುನ್ ಪುಷ್ಪರಾಜ್ ಪಾತ್ರದಲ್ಲಿ ಎಷ್ಟು ಪಾಪುಲರ್ ಆಗಿದ್ದಾರೋ ಶ್ರೀವಲ್ಲಿಯಾಗಿ ಡಿಗ್ಲಾಮ್ ಪಾತ್ರದ ಮೂಲಕ ರಶ್ಮಿಕಾ ಕೂಡಾ ಅಷ್ಟೇ ಪಾಪುಲರ್ ಆಗಿದ್ದಾರೆ. ಆದರೆ ಈಗ ಹೊಸ ಸುದ್ದಿಯೊಂದು ಹೊರ ಬಂದಿದ್ದು, ಅಭಿಮಾನಿಗಳು ಬಹಳ ನಿರೀಕ್ಷೆ ಇಟ್ಟುಕೊಂಡಿರುವ ಪುಷ್ಪ 2 ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರಕ್ಕೆ ಕತ್ತರಿ ಬಿದ್ದಿದೆ ಎನ್ನುವ ಸುದ್ದಿಯೊಂದು ಹರಿದಾಡಿದೆ.

ಹೌದು, ಪುಷ್ಪ ಸಿನಿಮಾಕ್ಕೆ ಸಿಕ್ಕ ದೊಡ್ಡ ಯಶಸ್ಸಿನ ನಂತರ ಪುಷ್ಪ 2 ಸಿನಿಮಾದ ಮೇಲಿನ ನಿರೀಕ್ಷೆಗಳು ದುಪ್ಪಟ್ಟಾಗಿದೆ. ಅಲ್ಲದೇ‌ ಕೆಜಿಎಫ್-2 ಸಿನಿಮಾದ ಯಶಸ್ಸು ಕೂಡಾ ಪುಷ್ಪ ನಿರ್ದೇಶಕನ ಮೇಲೆ ಇನ್ನಷ್ಟು ಒತ್ತಡವನ್ನು ಹಾಕಿದೆ. ಪುಷ್ಪ 2 ಸಿನಿಮಾದಲ್ಲಿ ಕಥೆಯನ್ನು ಮತ್ತಷ್ಟು ಬಿಗಿಗೊಳಿಸಲು, ನಾಯಕ ಪುಷ್ಪ ರಾಜ್ ಹೇಗೆ ಹಂತ ಹಂತವಾಗಿ ತನ್ನ ಸಾಮರ್ಥ್ಯ ಹೆಚ್ಚಿಸಿಕೊಂಡನು ಎನ್ನುವುದರ ಮೇಲೆ ಕಥೆ ಫೋಕಸ್ ಮಾಡುವುದರಿಂದ ಇಲ್ಲಿ ಶ್ರೀವಲ್ಲಿ ಪಾತ್ರಕ್ಕೆ ಅಷ್ಟೇನೂ ಕೆಲಸವಿಲ್ಲ ಎಂದೇ ಹೇಳಲಾಗುತ್ತಿದೆ.

ಪುಷ್ಪ 2 ಗಾಗಿ ಈ ಮೊದಲು ಮಾಡಿದ್ದ ಕಥೆಯಲ್ಲಿ ಸಹಾ ಕೆಲವೊಂದು ಬದಲಾವಣೆಗಳು ಆಗಿರುವ ಕಾರಣದಿಂದ ಹೊಸದಾಗಿ ಚಿತ್ರೀಕರಣ ನಡೆಯಲಿದೆ. ಪುಷ್ಪ 2 ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರವು ಇರುತ್ತದೆಯಾದರೂ ಆ ಪಾತ್ರ ಅವಶ್ಯಕತೆ ಇದ್ದ ದೃಶ್ಯಗಳಲ್ಲಿ ಮಾತ್ರವೇ ಬಂದು ಹೋಗುತ್ತದೆ ಎನ್ನಲಾಗಿದೆ. ಈ ವಿಚಾರ ಈಗ ರಶ್ಮಿಕಾ ಅಭಿಮಾನಿಗಳಿಗೆ ಬೇಸರವನ್ನು ಉಂಟು ಮಾಡಿದೆ.‌ ಒಟ್ಟಾರೆ ಪುಷ್ಪ 2 ಅಲ್ಲು ಅರ್ಜುನ್ ಒನ್ ಮ್ಯಾನ್ ಶೋ ಆಗಲಿದೆ.

Leave A Reply

Your email address will not be published.