ರಶ್ಮಿಕಾ ಅಂದಕ್ಕೆ ಸೋತ ನಂದಮೂರಿ ಬಾಲಕೃಷ್ಣ ತನ್ನನ್ನು ಹೊಗಳಿದ ರೀತಿಗೆ ನಾಚಿ ನೀರಾದ ರಶ್ಮಿಕಾ!!

Written by Soma Shekar

Published on:

---Join Our Channel---

ಸಿನಿಮಾ ಸ್ಟಾರ್ ಗಳು ಈಗಾಗಲೇ ಓಟಿಟಿಗೆ ಎಂಟ್ರಿ ನೀಡಿ ದೊಡ್ಡ ಸದ್ದು ಮಾಡುತ್ತಿದ್ದಾರೆ. ತೆಲುಗು ಸಿನಿಮಾದ ಲೆಜೆಂಡರಿ ನಟ, ಹಿರಿಯ ನಟ ನಂದಮೂರಿ ಬಾಲಕೃಷ್ಣ ಕೂಡಾ ಆಹಾ ಓಟಿಟಿ ಪ್ಲಾಟ್ ಫಾರ್ಮ್ ಗೆ ಎಂಟ್ರಿ ನೀಡಿದ್ದಾರೆ. Unstoppable ಎನ್ನುವ ಹೆಸರಿನ ಟಾಕ್ ಶೋ ಒಂದನ್ನು ನಿರೂಪಣೆ ಮಾಡುತ್ತಿರುವ ಬಾಲಕೃಷ್ಣ ಅವರ, ಈ ಟಾಕ್ ಶೋ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ತಮ್ಮ ಶೋ ನಲ್ಲಿ ತೆಲುಗು ಸಿನಿ ರಂಗದ ದೊಡ್ಡ ದೊಡ್ಡ ಸ್ಟಾರ್ ಗಳನ್ನು ಬಾಲಕೃಷ್ಣ ತಮ್ಮದೇ ಸ್ಟೈಲ್ ನಲ್ಲಿ ಸಂದರ್ಶನ ಮಾಡುತ್ತಾರೆ.

ಕೆಲವೇ ದಿನಗಳ ಹಿಂದೆ ಬಿಡುಗಡೆಯಾಗಿ ದೊಡ್ಡ ಸದ್ದನ್ನು ಮಾಡುತ್ತಿರುವ ಅಲ್ಲು ಅರ್ಜುನ್ ನಾಯಕನಾಗಿ, ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿರುವ ಪುಷ್ಪ ಸಿನಿಮಾ ತಂಡವು ಬಾಲಕೃಷ್ಣ ಅವರ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದು, ಈ ವೇಳೆ ಬಾಲಕೃಷ್ಣ ನಟಿ ರಶ್ಮಿಕಾ ಬಗ್ಗೆ ಮಾತನಾಡಿರುವುದು ಮಾತ್ರವೇ ಅಲ್ಲದೇ ನಟಿಯನ್ನು ಹಾಡಿ ಹೊಗಳಿ, ಪುಷ್ಪ ಸಿನಿಮಾದ ಹಾಡಿಗೆ ರಶ್ಮಿಕಾ ಜೊತೆ ಹೆಜ್ಜೆ ಹಾಕಿದ್ದಾರೆ.

ಸಿನಿಮಾ ಟೀಂ ಅನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾ ಬಾಲಕೃಷ್ಣ ಅವರು, ರಶ್ಮಕಾರನ್ನು ನ್ಯಾಷನಲ್ ಕ್ರಶ್ಮಿಕಾ ಎಂದು ಕರೆಯುವ ಮೂಲಕ ಸ್ವಾಗತವನ್ನು ಮಾಡಿದ್ದಾರೆ. ಅಲ್ಲದೇ ರಶ್ಮಿಕಾಗೂ ಟ್ರೋಲರ್ಸ್ ಗೂ ಒಳ್ಳೆ ಫ್ರೆಂಡ್ ಶಿಪ್ ಇರೋ ಹಾಗಿದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅನಂತರ ಅವರು ಪುಷ್ಪ ಸಿನಿಮಾದ ಬಗ್ಗೆ ಮಾತನಾಡುತ್ತಾ ಆ ಸಿನಿಮಾದಲ್ಲಿ ನಟ ಬನ್ನಿ ಅಂದ್ರೆ ಅಲ್ಲು ಅರ್ಜುನ್ ಚಂದನ ಆದ್ರೆ ರಶ್ಮಿಕಾ ಆ ಸಿನಿಮಾದಲ್ಲಿ ಚಂದ್ರನಿದ್ದ ಹಾಗೆ ಎಂದು ನಟಿಯನ್ನು ಹಾಡಿ ಹೊಗಳಿದ್ದಾರೆ.

ಒಂದು ಕಡೆ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆದ್ರೂ ರಶ್ಮಿಕಾ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದು, ಸಾಲು ಸಾಲು ಸ್ಟಾರ್ ನಟರ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸ್ಟಾರ್ ಡಂ ದಿನೇ ದಿನೇ ಹೆಚ್ಚುತ್ತಿರುವ ರಶ್ಮಿಕಾಗೆ ಪುಷ್ಪ ನಂತರ ಕೇರಳದಲ್ಲಿ ಸಹಾ ಫ್ಯಾನ್ ಪೇಜ್ ಗಳು ಪ್ರಾರಂಭವಾಗಿದೆ ಎನ್ನಲಾಗಿದೆ.

Leave a Comment