ರಶ್ಮಿಕಾಗೆ ನಿಯತ್ತಿಲ್ಲವೇ? ಅಪ್ಪು ವಿಚಾರದಲ್ಲಿ ಹೆಸರು ಹೇಳದೆಯೇ ರಶ್ಮಿಕಾ ಬಗ್ಗೆ ಆ ಕ್ರೋ ಶ ಹೊರ ಹಾಕಿದ ನೆಟ್ಟಿಗರು

Entertainment Featured-Articles News

ನಟಿ ರಶ್ಮಿಕಾ ಮಂದಣ್ಣ ಸದಾ ಒಂದಲ್ಲಾ ಒಂದು ವಿಷಯಕ್ಕೆ ಚರ್ಚೆಯಲ್ಲಿ ಇರುತ್ತಾರೆ. ಈ ನಟಿಗೆ ಮೊದಲಿನಿಂದಲೂ ಸಹಾ ಕನ್ನಡ ಎಂದರೆ ಅಷ್ಟಕ್ಕಷ್ಟೇ ಎನ್ನುವುದನ್ನು ಹಲವು ಸಂದರ್ಭಗಳಲ್ಲಿ ಅವರ ವರ್ತನೆಯಿಂದ ಪ್ರದರ್ಶಿಸಿ ಜನರ ಟೀಕೆಗಳಿಗೆ ಗುರಿಯಾಗುತ್ತಲೇ ಇರುತ್ತಾರೆ.‌ ಟಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಮಾತ್ರವೇ ಬ್ಯುಸಿಯಾಗಿರುವ. ಈ ನಟಿ ಕನ್ನಡದಲ್ಲಿ ಯಾವುದೇ ಹೊಸ ಸಿನಿಮಾ ಮಾಡುತ್ತಿಲ್ಲ. ಬಾಲಿವುಡ್ ನಲ್ಲಿ ಆಗಾಗ ಕಾಣಿಸಿಕೊಂಡು ಸುದ್ದಿಯಾಗುವ ರಶ್ಮಿಕಾ ಹೈದ್ರಾಬಾದ್ ನಂತರ ಇದೀಗ ಮುಂಬೈನಲ್ಲಿ ಹೊಸ ಮನೆ ಖರೀದಿಸಿ, ಅಲ್ಲೇ ಸೆಟಲ್ ಆಗುವ ಯೋಜನೆ ಮಾಡುತ್ತಿದ್ದಾರೆ ಎನ್ನುವುದು ಸುದ್ದಿಗಳಾಗಿವೆ.

ಕನ್ನಡದ ವಿಚಾರವಾಗಿ ಸದಾ ಕನ್ನಡಿಗರ ಕೋ ಪ ಕ್ಕೆ ಗುರಿಯಾಗುವ ಈ ನಟಿ, ಈಗ ಮತ್ತೊಮ್ಮೆ ದೊಡ್ಡ ತಪ್ಪೊಂದನ್ನು ಮಾಡುವ ಮೂಲಕ ಮತ್ತೆ ನೆಟ್ಟಿಗರ ಸಿಟ್ಟಿಗೆ, ಕನ್ನಡಿಗರ ಆ ಕ್ರೋ ಶ ಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನಟಿಯ ಬಗ್ಗೆ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಹಾಗಾದರೆ ರಶ್ಮಿಕಾ ಮಂದಣ್ಣ ಮಾಡಿದ ಅಂತಹ ತಪ್ಪಾದರೂ ಏನು? ಜನರ ಕೋ ಪ ಕ್ಕೆ ಗುರಿಯಾಗಲು ಕಾರಣವೇನು? ತಿಳಿಯೋಣ ಬನ್ನಿ. ಇದು ರಶ್ಮಿಕಾ ತಿಳಿದು ಮಾಡಿದರೋ, ತಿಳಿಯದೆ ಮಾಡಿದರೋ ಆದರೆ ಇಷ್ಟೊಂದು‌ ನಿರ್ಲಕ್ಷ್ಯ ಖಂಡಿತ ಅಸಹನೀಯ.

ಮಾರ್ಚ್ 17 ಕನ್ನಡ ನಾಡಿನ ಕಣ್ಮಣಿ ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನ. ಅದರಲ್ಲೂ ಈ ಬಾರಿ ಪುನೀತ್ ಅವರೇ ಇಲ್ಲದ ಈ ವೇಳೆ ಅವರ ಜನ್ಮದಿನ ಆಚರಣೆ ಅಭಿಮಾನಿಗಳ ಪಾಲಿಗೆ ಭಾವನಾತ್ಮಕ ಜನ್ಮದಿನವಾಗಿತ್ತು. ಪುನೀತ್ ಅವರ ಕೊನೆಯ ಸಿನಿಮಾ‌ ಜೇಮ್ಸ್ ಬಿಡುಗೊಂಡ ವಿಶೇಷ ದಿನ. ಪುನೀತ್ ಅವರಿಲ್ಲ ಎನ್ನುವ ನೋವಿನಲ್ಲಿ ಅನೇಕ ಸೆಲೆಬ್ರಿಟಿಗಳು ಜೇಮ್ಸ್ ಸಿನಿಮಾ ಬಿಡುಗಡೆ ಹಾಗೂ ಪುನೀತ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅವರನ್ನು ಸ್ಮರಿಸಿಕೊಂಡಿದ್ದರು, ತಮ್ಮ‌ ಭಾವನೆಗಳನ್ನು ಹಂಚಿಕೊಂಡಿದ್ದರು.

ಇಷ್ಟೆಲ್ಲಾ ಭಾವುಕ ಕ್ಷಣಗಳ ನಡುವೆಯೂ ರಶ್ಮಿಕಾಗೆ ಮಾತ್ರ ಪುನೀತ್ ಅವರ ಜನ್ಮದಿನಕ್ಕೆ ಒಂದು ಶುಭಾಶಯವನ್ನು ಕೋರುವ ಸಮಯ ಕೂಡಾ ಸಿಕ್ಕಿಲ್ಲ. ಬೇರೆ ಭಾಷೆಯ ನಟ, ನಟಿಯರಿಗೆ ವಿಶ್ ಮಾಡುವ, ಉಡುಗೊರೆ ನೀಡುವ ರಶ್ಮಿಕಾ ಮಂದಣ್ಣ ಅವರಿಗೆ ಪುನೀತ್ ಅವರ ಜನ್ಮದಿನಕ್ಕೆ ಒಂದು ವಿಶ್ ಮಾಡಲು ಸಮಯವಿಲ್ಲವೇ? ಎಂದು ನೆಟ್ಟಿಗರು ಪ್ರಶ್ನೆ ಯನ್ನು ಮಾಡಿದ್ದಾರೆ. ಸಿನಿಮಾ ಒಂದರಲ್ಲಿ ಅವರೊಟ್ಟಿಗೆ ನಟಿಸಿದ ನಟಿಗೆ ಇದು ಕೂಡಾ ನೆನಪಿಲ್ಲ ಎನ್ನುವುದು ಸಾಕಷ್ಟು ಜನರ ಸಿಟ್ಟಿಗೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಜನರು ತಮ್ಮ ಸಿಟ್ಟು ಹೊರ ಹಾಕಿದ್ದಾರೆ.

ನಮ್ಮ ಕನ್ನಡ ಸೆಲೆಬ್ರಿಟಿಗಳು, ಪರಭಾಷೆಯ ನಟಿಯರು ಸಹಾ ಪುನೀತ್ ಅವರ ಜನ್ಮದಿನಕ್ಕೆ ಅವರನ್ನು ಸ್ಮರಿಸಿಕೊಂಡಿದ್ದಾರೆ. ಜೇಮ್ಸ್ ಸಿನಿಮಾಕ್ಕೆ ಶುಭವನ್ನು ಕೋರಿದ್ದಾರೆ. ಆದರೆ ರಶ್ಮಿಕಾ ಕನ್ನಡದವರೇ ಆಗಿದ್ದರೂ ಇಂತಹುದೊಂದು ವರ್ತನೆ ಮೆರೆದಿರುವುದು ಬೇಸರದ ವಿಷಯವಾಗಿದೆ. ಇನ್ನು ರಶ್ಮಿಕಾ ಹೀಗೆಲ್ಲಾ‌ ಮಾಡಿದಾಗ ಟ್ರೋಲ್ ಆಗುವುದು ಸಹಜ. ಆದರೆ ನಟಿ ಮಾತ್ರ ಯಾರು ಎಷ್ಟೇ ಟ್ರೋಲ್ ಮಾಡಿದರೂ ಸಹಾ ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುವುದು ಸಹಾ ವಾಸ್ತವವಾಗಿದೆ.

Leave a Reply

Your email address will not be published.