ರಶ್ಮಿಕಾಗೆ ಖುಲಾಯಿಸಿತು ಬಾಲಿವುಡ್ ನಲ್ಲೂ ಅದೃಷ್ಟ: ಬಾಲಿವುಡ್ ನಲ್ಲೂ ಸಖತ್ ಬ್ಯುಸಿಯಾದ ನಟಿ

Entertainment Featured-Articles News

ದಕ್ಷಿಣ ಸಿನಿಮಾ ರಂಗದಲ್ಲಿ ಸದ್ಯಕ್ಕೆ ಸದಾ ಸುದ್ದಿಯಲ್ಲಿರುವ ನಟಿಯರ ಹೆಸರು ಬಂದಾಗ ಅಲ್ಲಿ ನಟಿ ರಶ್ಮಿಕಾ ಮಂದಣ್ಣ ಹೆಸರು ಖಂಡಿತ ಇರುತ್ತದೆ. ನಟಿ ರಶ್ಮಿಕಾ ತೆಲುಗು ಸಿನಿಮಾ ರಂಗದಲ್ಲಿ ಸಖತ್ ಬ್ಯುಸಿ ನಟಿಯಾಗಿದ್ದಾರೆ. ಅಲ್ಲದೇ ತಮಿಳು, ಮಲೆಯಾಳಂ ಚಿತ್ರರಂಗಕ್ಕೂ ಅಡಿಯಿಟ್ಟ ಮೇಲೆ ರಶ್ಮಿಕಾ ಪಂಚ ಭಾಷಾ ತಾರೆಯಾಗಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ರಶ್ಮಿಕಾ ಈಗಾಗಲೇ ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಎರಡು ಸಿನಿಮಾಗಳು ಸಹಾ ಬಿಡುಗಡೆ ಆಗಬೇಕಿದೆ. ಸಾಲು ಸಾಲು ಹೊಸ ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ.‌

ಈ ನಡುವೆ ಇತ್ತೀಚಿಗಷ್ಟೇ ಬಿಡುಗಡೆ ಆದ ಪುಷ್ಪ ಸಿನಿಮಾ ನಂತರ ರಶ್ಮಿಕಾ ಬೇಡಿಕೆ ಇನ್ನಷ್ಟು ಹೆಚ್ಚಿದೆ. ಕಳೆದ ಕೆಲವು ದಿನಗಳಿಂದಲೂ ರಶ್ಮಿಕಾ ಬಾಲಿವುಡ್ ನಟ ರಣಬೀರ್ ಕಪೂರ್ ಅವರ ಸಿನಿಮಾದಲ್ಲಿ ನಾಯಕಿಯಾಗಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿತ್ತು. ಈಗ ಈ ಸುದ್ದಿಗೆ ಅಧಿಕೃತ ಮೊಹರು ಬಿದ್ದಿದೆ. ರಶ್ಮಿಕಾ ರಣಬೀರ್ ಗೆ ನಾಯಕಿಯಾಗುವುದು ಖಚಿತ ಎಂದು ತಿಳಿದು ಬಂದಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಬಾಲಿವುಡ್ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಲಿದ್ದಾರೆ.

ಟಿ ಸಿರೀಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ರಶ್ಮಿಕಾ ಪಾತ್ರದ ಕುರಿತಾಗಿ ಘೋಷಣೆಯನ್ನು ಮಾಡಿದೆ. ಯುಗಾದಿ ಮತ್ತು ಗುಡಿ ಪಾಡ್ವಾದ ಈ ಶುಭ ದಿನದಂದು ನಾವು ರಶ್ಮಿಕಾ ಮಂದಣ್ಣ ಅವರನ್ನು ಅನಿಮಲ್ ತಂಡಕ್ಕೆ ಸ್ವಾಗತಿಸುತ್ತಿದ್ದೇವೆ ಎಂದು ಘೋಷಿಸಿದೆ. ಅಲ್ಲದೇ ಈ ಬೇಸಿಗೆಯಿಂದಲೇ ಶೂಟಿಂಗ್ ಪ್ರಾರಂಭವಾಗಲಿದೆ ಎನ್ನುವ ಮಾಹಿತಿಯನ್ನು ನೀಡಿದೆ. ಅನಿಮಲ್ ಸಿನಿಮಾ ಅ ಪ ರಾ ಧ ಹಿನ್ನೆಲೆಯ ಕಥೆಯನ್ನು ಹೊಂದಿದೆ ಎನ್ನಲಾಗಿದೆ.

ರಶ್ಮಿಕಾ ಸಿದ್ಧಾರ್ಥ್ ಮಲ್ಹೋತ್ರ ಜೊತೆಗೆ ನಟಿಸಿರುವ ಸ್ಪೈ ಥ್ರಿಲ್ಲರ್ ಕಥೆ ಮಿಷನ್ ಮಜ್ನು ಹಾಗೂ ಬಾಲಿವುಡ್ ನ ದಿಗ್ಗಜ ಹಾಗೂ ಹಿರಿಯ ನಟ ಅಮಿತಾಬ್ ಜೊತೆಗೆ ನಟಿಸಿರುವ ಗುಡ್ ಬೈ ಸಿನಿಮಾಗಳು ಚಿತ್ರೀಕರಣ ಮುಗಿಸಿ ಬಹಳ ದಿನಗಳಾಗಿದ್ದು, ಸಿನಿಮಾ ಬಿಡುಗಡೆ ಆಗಬೇಕಿದೆ. ಮೊದಲ ಎರಡು ಸಿನಿಮಾ ಬಿಡುಗಡೆಯ ಮೊದಲೇ ರಶ್ಮಿಕಾ ಇದೀಗ ಮೂರನೇ ಸಿನಿಮಾಕ್ಕೆ ಸಜ್ಜಾಗುತ್ತಿದ್ದು ನಟಿ ಬಾಲಿವುಡ್ ನಲ್ಲೂ ಬ್ಯುಸಿಯಾಗಲಿರುವ ಸೂಚನೆಯನ್ನು ನೀಡಿದ್ದಾರೆ.

Leave a Reply

Your email address will not be published.