ರಮ್ಯಕೃಷ್ಣ ತೀರ್ಪು ಸರಿಯಿಲ್ಲ: ಡಾನ್ಸ್ ರಿಯಾಲಿಟಿ ಶೋ ನಲ್ಲಿ ನಟಿಯರ ನಡುವೆ ಬಿಗ್ ಫೈಟ್

0 3

ತಮಿಳು ನಟಿ, ಬಿಗ್ ಬಾಸ್ ಖ್ಯಾತಿಯ ವನಿತಾ ವಿಜಯ್ ಕುಮಾರ್ ಸದಾ ಒಂದಲ್ಲಾ ಒಂದು ವಿ ವಾ ದ ದಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಈ ನಟಿಯ ಮೂರು ವಿವಾಹಗಳ ಕುರಿತಾಗಿ ಈಗಾಗಲೇ ಸಾಕಷ್ಟು ಸುದ್ದಿಗಳಾಗಿವೆ. ವನಿತಾ ಅವರ ಮೂರು ಮದುವೆಗಳು ಸಹಾ ವಿಫಲವಾಗಿದೆ. ಕಳೆದ ವರ್ಷ ಲಾಕ್ ಡೌನ್ ವೇಳೆಯಲ್ಲಿ ವನಿತಾ ತಮ್ಮ ಮೂರನೇ ಮದುವೆ ಮಾಡಿಕೊಂಡಿದ್ದರು. ಆದರೆ ಅದೇಕೋ ಮೂರನೇ ಮದುವೆ ಸಹಾ ಹೆಚ್ಚು ದಿನ ಉಳಿಯಲಿಲ್ಲ. ವನಿತಾ ತಮ್ಮ ಮೂರನೇ ಮದುವೆ ಮುರಿದು ಬಿದ್ದ ವಿಚಾರವನ್ನು ಸೋಶಿಯಲ್ ಮೀಡಿಯಾಗಳ ಮೂಲಕ ಹಂಚಿಕೊಂಡು ನಾನೀಗ ಸಿಂಗಲ್ ಎಂದು ಹೇಳಿದ್ದರು.

ಈಗ ಮತ್ತೊಮ್ಮೆ ವನಿತಾ ಒಂದು ಹೊಸ ವಿವಾದದಿಂದ ಸುದ್ದಿಯಾಗಿದ್ದಾರೆ. ಈ ಬಾರಿ ವನಿತಾ ವಿ ವಾ ದ ಮಾಡಿಕೊಂಡಿರುವುದು ದಕ್ಷಿಣ ಸಿನಿ ರಂಗದ ಹಿರಿಯ ನಟಿ, ಸ್ಟಾರ್ ನಟಿಯಾದ ರಮ್ಯಕೃಷ್ಣ ಅವರ ಜೊತೆಗೆ. ಹೌದು, ತಮಿಳಿನ ವಿಜಯ್ ಟಿವಿ ಯಲ್ಲಿ ಬಿಗ್ ಬಾಸ್ ಜೋಡಿಗಳ್ ಎನ್ನುವ ಒಂದು ಸೆಲೆಬ್ರಿಟಿ ಡಾನ್ಸ್ ರಿಯಾಲಿಟಿ ಶೋ ನಡೆಯುತ್ತಿದ್ದು, ಇದರಲ್ಲಿ ನಟಿ ರಮ್ಯಕೃಷ್ಣ ಅವರು ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ವನಿತಾ ದೇವಿ ಕಾಳಿ ರೂಪದಲ್ಲಿ ಒಂದು ಡಾನ್ಸ್ ಪರ್ಫಾಮೆನ್ಸ್ ನೀಡಿದ್ದರು. ಈ ವೇಳೆ ತೀರ್ಪು ನೀಡುವಾಗ ರಮ್ಯ ಕೃಷ್ಣ ಅವರು ವನಿತಾ ಅವರ ಮೇಕಪ್, ಡ್ರೆಸ್ ಎಲ್ಲಾ ಓಕೆ ಡಾನ್ಸ್ ಇನ್ನು ಸ್ವಲ್ಪ ಇಂಪ್ರೂವ್ ಮಾಡಬೇಕು ಎಂದಿದ್ದಾರೆ.

ಅಲ್ಲದೇ ಡಾನ್ಸ್ ಹೇಗಿರಬೇಕು ಎನ್ನುವಾಗ ಕೆಲವು ಉದಾಹರಣೆ ನೀಡಿದ್ದಾರೆ. ರಮ್ಯಕೃಷ್ಣ ಅವರ ಮಾತು ಕೇಳಿ ವನಿತಾ ಕೆಂಡಾಮಂಡಲವಾಗಿದ್ದಾರೆ. ನನ್ನನ್ನು ಬೇರೆಯವರಿಗೆ ಹೋಲಿಕೆ ಮಾಡಬೇಡಿ ಎಂದು ತೀರ್ಪಿನ ವಿ ರು ದ್ಧ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ. ಇದರಿಂದ ಜಡ್ಜ್ ರಮ್ಯಕೃಷ್ಣ ಅವರು ಸಿಟ್ಟಾಗಿ ನನಗೆ ಹೇಗೆ ಜಡ್ಜ್ ಮಾಡಬೇಕೆಂದು ಹೇಳಿಕೊಡುವ ಅವಶ್ಯಕತೆ ಇಲ್ಲ, ಇದು ಸ್ಪರ್ಧೆ. ಸ್ಪರ್ಧೆ ಎಂದರೇನು? ಹೋಲಿಕೆ ಮಾಡದೇ ಹೇಗೆ ತೀರ್ಪು ನೀಡಲು ಸಾಧ್ಯ? ಎಂದು ರಮ್ಯಕೃಷ್ಣ ಸಹಾ ತಮ್ಮ ಸಿಟ್ಟು ಹೊರಹಾಕಿದಾಗ ವನಿತಾ ಶೋ ದಿಂದ ಹೊರಗೆ ನಡೆದಿದ್ದಾರೆ.

ಶೋ ನಿಂದ ಹೊರ ಬಂದ ಮೇಲೆ ವನಿತಾ, ಗಂಡ ಕುಟುಂಬವಿಲ್ಲದೇ ಮೂರು ಮಕ್ಕಳ ತಾಯಿಯಾಗಿ ತಾನು ಪಡುತ್ತಿರುವ ಕಷ್ಟ ಕಂಡು ಪ್ರೋತ್ಸಾಹ ನೀಡಬೇಕು. ಆದರೆ ಅದರ ಬದಲಾಗಿ ಕೆಲಸ ಮಾಡುವ ಕಡೆ, ಮಹಿಳೆಯರೇ ಮಹಿಳೆಯರ ಬಗ್ಗೆ ಅಸೂಯೆ ಪಡುವುದು ದುರದೃಷ್ಟಕರ ಎಂದು ವನಿತಾ ಹೇಳಿದ್ದಾರೆ. ಅಲ್ಲದೇ ತಾನು ಶೋ ನಿಂದ ಹೊರ ಬಂದಿದ್ದರಿಂದ ಕೊರಿಯೋಗ್ರಫರ್ ಗೆ ಅವಕಾಶ ಹೋಯಿತೆನ್ನುವ ಬೇಸರವಿದೆ ಎಂದಿದ್ದಾರೆ. ರಮ್ಯ ಕೃಷ್ಣ ಅಭಿಮಾನಿಗಳು ತೆರೆಯ ಮೇಲಿನ ಶಿವಗಾಮಿಯನ್ನು ಮತ್ತೆ ನೋಡುವಂತೆ ಆಯಿತು ಎಂದಿದ್ದಾರೆ.

Leave A Reply

Your email address will not be published.