ರತ್ನನ್ ಪ್ರಪಂಚಕ್ಕೆ‌ ಅಸಲಿಗೆ ರಾಣಿ ಆಗ್ಬೇಕಾಗಿದ್ದು ಇವರೇ!! ಆದರೆ ಅವಕಾಶ ಕೈ ಬಿಟ್ಟ ಸ್ಯಾಂಡಲ್ವುಡ್ ಪದ್ಮಾವತಿ

Written by Soma Shekar

Published on:

---Join Our Channel---

ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿ ಅಪಾರವಾದ ಜನ ಮೆಚ್ಚುಗೆಯನ್ನು ಪಡೆದುಕೊಂಡು ದೇಶ ವಿದೇಶಗಳ ಕನ್ನಡಿಗರ ಮನಸ್ಸನ್ನು ಸೂರೆಗೊಂಡು ಭಾರಿ ಸದ್ದು ಮಾಡುತ್ತಿದೆ ನಟ ಡಾಲಿ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಸಿನಿಮಾ. ರತ್ನನ್ ಪ್ರಪಂಚ ಸಿನಿಮಾ ನೋಡಿ ಪ್ರೇಕ್ಷಕರು ಮಾತ್ರವೇ ಅಲ್ಲದೆ ಸ್ಯಾಂಡಲ್ವುಡ್ ನ ಸೆಲೆಬ್ರಿಟಿಗಳು ಕೂಡಾ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ಸೋಶಿಯಲ್ ಮೀಡಿಯಾ ಗಳಲ್ಲಿ ಪೋಸ್ಟ್ ಗಳನ್ನು ಹಾಕಿದ್ದಾರೆ. ಇಂತಹ ಸೆಲೆಬ್ರಿಟಿಗಳ ಸಾಲಿಗೆ ಸೇರಿದ್ದಾರೆ ಸ್ಯಾಂಡಲ್ವುಡ್ ನ ಮೋಹಕ ತಾರೆ ನಟಿ ರಮ್ಯ.

ರತ್ನನ್ ಪ್ರಪಂಚ ಕುರಿತಾಗಿ ನಟಿ ರಮ್ಯಾ ವಿಶೇಷವಾದ ಆಸಕ್ತಿಯನ್ನು ತೋರಿಸಿದ್ದು ಟ್ರೇಲರ್ ಬಿಡುಗಡೆಯಾದಾಗಲೇ ಗೊತ್ತಾಗಿತ್ತು. ಸಿನಿಮಾ ಟ್ರೇಲರ್ ನೋಡಿದ ರವರು ಅಪಾರವಾದ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಿನಿಮಾ ನೋಡಲು ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಈಗ ಸಿನಿಮಾ‌ ಬಿಡುಗಡೆ ನಂತರ ಅವರು ಸಿನಿಮಾವನ್ನು ಹೊಗಳುವ ಜೊತೆಗೆ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುವಂತಹ ವಿಷಯವೊಂದನ್ನು ಸಹಾ ಹಂಚಿಕೊಂಡಿದ್ದಾರೆ.

ಹಾಗಾದರೆ ಅವರು ಶೇರ್ ಮಾಡಿದ ವಿಶೇಷ ಸುದ್ದಿ ಏನು ಎನ್ನುವುದಾದರೆ, ರತ್ನನ್ ಪ್ರಪಂಚ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ರಮ್ಯಾ ಅವರನ್ನು ಕೇಳಲಾಗಿತ್ತಂತೆ. ಆದರೆ ಅವರು ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಈ ವಿಚಾರವನ್ನು ಈಗ ಸ್ವತಃ ನಟಿ ರಮ್ಯಾ ಅವರೇ ಹೇಳಿಕೊಂಡಿದ್ದಾರೆ. ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ಬಿಡುಗಡೆಯಾದ ನಂತರ ಸಿನಿಮಾ ನೋಡುವ ಮೊದಲು ಅವರು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಪೋಸ್ಟ್ ಮಾಡಿ ಈ ಸಿನಿಮಾದಲ್ಲಿ ನಾಯಕಿಯಾಗುವ ಅವಕಾಶ ಬಂದಿದ್ದ ವಿಚಾರವನ್ನು ತಿಳಿಸಿದ್ದಾರೆ.

ಈಗ ರತ್ನತ್ ಪ್ರಪಂಚ ಸಿನಿಮಾ ನೋಡುವ ಸಮಯ. ಈ ಸಿನಿಮಾದ ನಾಯಕಿಯ ಪಾತ್ರಕ್ಕೆ ನನ್ನನ್ನು ಕೇಳಲಾಗಿತ್ತು. ನಾನು ಏನು ಮಿಸ್ ಮಾಡಿಕೊಂಡೆ ಎನ್ನುವುದನ್ನು ಈಗ ನೋಡಬೇಕು ಎಂದು ಬರೆದುಕೊಳ್ಳುವ ಮೂಲಕ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ತನಗೆ ಬಂದಿದ್ದ ಆಫರ್ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇನ್ನು ಸಿನಿಮಾ ನೋಡಿದ ನಂತರ ಮತ್ತೊಂದು ಪೋಸ್ಟ್ ಹಾಕುವ ಮೂಲಕ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ರಮ್ಯಾ ತಮ್ಮ ಪೋಸ್ಟ್ ನಲ್ಲಿ ”’ರತ್ನನ್ ಪ್ರಪಂಚ’ ಬಹಳ ಮಧುವವಾದ ಸಿನಿಮಾ. ಧನಂಜಯ್, ಪ್ರಮೋದ್, ವೈನಿಧಿ ಜಗದೀಶ್, ಅನು ಪ್ರಭಾಕರ್, ಉಮಾಶ್ರೀ, ಶ್ರುತಿ, ಅಚ್ಯುತ್ ಕುಮಾರ್, ರವಿಶಂಕರ್ ಎಲ್ಲರೂ ಬಹಳ ಚೆನ್ನಾಗಿ ನಟಿಸಿದ್ದಾರೆ. ನಾಯಕಿ ರೆಬಾ ಮೋನಿಕಾ ಮೊದಲ ಸಿನಿಮಾದಲ್ಲಿಯೇ ಅದ್ಭುತವಾಗಿ ನಟಿಸಿದ್ದು, ನಾನು ಇಷ್ಟು ಚೆನ್ನಾಗಿ ನಟಿಸಲು ಆಗುತ್ತಿತ್ತೊ ಇಲ್ಲವೊ ಎನ್ನುವ ಮೂಲಕ ರೆಬಾ ಅವರಿಗೆ ಮೆಚ್ಚುಗೆಯನ್ನು ನೀಡಿದ್ದಾರೆ ರಮ್ಯಾ.

ಇದೇ ವೇಳೆ ಅವರುಬನಿರ್ಮಾಪಕರನ್ನು ಹೊಗಳುತ್ತಾ, ಯೋಗಿರಾಜ್ ಮತ್ತು ಕಾರ್ತಿಕ್ ನಿಮ್ಮ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ. ನಿಮ್ಮ ಜೇಬಿಗೆ ಇನ್ನಷ್ಟು ಹಣ ಎಂದು ಹೇಳಬಹುದು.‌ ರೋಹಿತ್ ಪದಕಿ ಮತ್ತು ತಂಡಕ್ಕೆ ಅಭಿನಂದನೆಗಳು ಎಂದರು ಹೇಳುತ್ತಲೇ, ಪ್ರೇಕ್ಷಕರಿಗೆ ಸಿನಿಮಾ ನೋಡುವ ಮುನ್ನ ಕೆಲವು ಟಿಶ್ಯು ಪೇಪರ್ ಗಳನ್ನು ಮರೆಯದೆ ತೆಗೆದುಕೊಂಡಿರಿ,‌ ಕ್ಲೈಮ್ಯಾಕ್ಸ್ ನಲ್ಲಿ ಮನಸಾರೆ ಅತ್ತು ಬಿಡಿ ಎಂದು ಸಲಹೆಯನ್ನು ನೀಡಿದ್ದಾರೆ.

Leave a Comment