ರಣಬೀರ್ ಕಪೂರ್ ಆಡಿದ್ದ ಒಂದು ಮಾತಿಗೆ ಸಿಡಿದೆದ್ದ ಜನ: ಸಿಗಲಿಲ್ಲ ನಟನಿಗೆ ಮಹಾಕಾಳೇಶ್ವರ ಮಂದಿರಕ್ಕೆ ಪ್ರವೇಶ

0 0

ಸೆಪ್ಟೆಂಬರ್ 9 ಕ್ಕೆ ಅಯಾನ್ ಮುಖರ್ಜಿ ನಿರ್ದೇಶನದ ಬಾಲಿವುಡ್ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೋಡಿಯಾಗಿ ನಟಿಸಿರುವ ಬಾಲಿವುಡ್ ನ ಬಹು ನಿರೀಕ್ಷಿತ, ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ, ಬಹು ತಾರಾಗಣದ ಸಿನಿಮಾ ಬ್ರಹ್ಮಾಸ್ತ್ರ ತೆರೆಗೆ ಬರಲು ಸಜ್ಜಾಗಿದೆ. ಆದರೆ ಬಾಯ್ಕಾಟ್ ಬ್ರಹ್ಮಾಸ್ತ್ರ ಎನ್ನುವ ಟ್ರೆಂಡ್ ಕೂಡಾ ಸದ್ದು ಮಾಡುತ್ತಿರುವಾಗಲೇ, ರಣಬೀರ್ ಮತ್ತು ಆಲಿಯಾ ತಮ್ಮ ಸಿನಿಮಾದ ಪ್ರಚಾರ ಕಾರ್ಯವನ್ನು ಬಹಳ ಜೋರಾಗಿ ನಡೆಸುತ್ತಾ ದೇಶದ ವಿವಿಧೆಡೆಗಳಲ್ಲಿ ಭರ್ಜರಿಯಾಗಿ ಸಿ‌ನಿಮಾ ಪ್ರಮೋಷನ್ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ನಟಿ ಆಲಿಯಾ ಕೂಡಾ ಸಿನಿಮಾದ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಫೋಟೋ, ವೀಡಿಯೋ ಅಪ್ಲೋಡ್ ಮಾಡಿ ಅಪ್ಡೇಟ್ ನೀಡುತ್ತಲೇ ಇದ್ದಾರೆ.

ಬ್ರಹ್ಮಾಸ್ತ್ರ ಸಿ‌ನಿಮಾದ ಪ್ರಚಾರದ ನಡುವೆಯೇ, ಸಿನಿಮಾ ಬಿಡುಗಡೆಗೂ ಮುನ್ನ ಮಧ್ಯಪ್ರದೇಶದಲ್ಲಿ ಇರುವ ಸುಪ್ರಸಿದ್ದ ಮಹಾಕಾಳೇಶ್ವರನ ಮಂದಿರದಲ್ಲಿ ಪೂಜೆಯನ್ನು ಸಲ್ಲಿಸುವ ಸಲುವಾಗಿ ನಿರ್ದೇಶಕ ಅಯಾನ್ ಮುಖರ್ಜಿ, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮೂವರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇಗುಲಕ್ಕೆ ಬಂದ ವೇಳೆಯಲ್ಲಿ ರಣಬೀರ್ ಮತ್ತು ಆಲಿಯಾ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟಿದ್ದರು. ಅಲ್ಲದೇ ಅವರು ದೇಗುಲದ ಶಿಷ್ಟಾಚಾರಗಳನ್ನು ಸಹಾ ಪಾಲನೆ ಮಾಡಿದ್ದರು. ಆದರೆ ಅವರು ಆಲಯಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಭಜರಂಗ ದಳದ ಕಾರ್ಯಕರ್ತರು ಅವರನ್ನು ತಡೆದಿದ್ದಾರೆ.

ಹೌದು, ವರ್ಷಗಳ ಹಿಂದೆ ರಣಬೀರ್ ಕಪೂರ್ ನೀಡಿದ್ದ ಒಂದು ಹೇಳಿಕೆಯ ವೀಡಿಯೋ ಇತ್ತೀಚಿಗೆ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ರಣಬೀರ್ ಹೇಳಿಕೆಯಲ್ಲಿ, ನಮ್ಮ ಕುಟುಂಬ ಪೇಶಾವರದಿಂದ ಬಂದಿದ್ದು, ನಮಗೆ ಮಾಂಸಾಹಾರ ಎಂದರೆ ಬಲು ಇಷ್ಟ. ನಮ್ಮ ಬ್ರೇಕ್ ಫಾಸ್ಟ್ ನಲ್ಲಿ ಸಹಾ ಮಾಂಸಾಹಾರ ಇರುತ್ತದೆ. ನಾವು ಆಹಾರ ಪ್ರಿಯರು. ಅದರಲ್ಲೂ ನನಗೆ ಗೋಮಾಂಸ ಬಹಳ ಇಷ್ಟ ಎಂದು ರಣಬೀರ್ ಹೇಳಿದ್ದರು. ಈಗ ಅವರ ಈ ಹೇಳಿಕೆಯನ್ನು ಖಂಡಿಸಿ ಭಜರಂಗದಳದ ಕಾರ್ಯಕರ್ತರು ರಣಬೀರ್ ಮತ್ತು ಆಲಿಯಾ ರನ್ನು ದೇಗುಲ ಪ್ರವೇಶ ಮಾಡಬಾರದೆಂದು ತಡೆ ಹಿಡಿದಿದ್ದಾರೆ.

ಈ ವಿಚಾರವಾಗಿ ಪೋಲಿಸರು ಮತ್ತು ಭಜರಂಗದಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಪೋಲಿಸರು ಕೆಲವರ ಮೇಲೆ ಕೈ ಮಾಡಿದ್ದು ನಡೆದಿದೆ. ಅನಿರೀಕ್ಷಿತ ಘಟನೆಯಿಂದ ಗಲಿಬಿಲಿಗೊಂಡ ಆಲಿಗಾತ, ರಣಬೀರ್ ಎಷ್ಟು ಹೇಳಿದರೂ ಅಲ್ಲಿ ಕೇಳಲು ಜನರು ಸಿದ್ಧರಿಲ್ಲದ ಕಾರಣ ಅವರು ದೇವರ ದರ್ಶನ ಪಡೆಯದೇ ಹೊರಗೆ ಉಳಿಯಲೇ ಬೇಕಾಯಿತು‌. ಅನಂತರ ನಿರ್ದೇಶಕ ಅಯಾನ್ ಮುಖರ್ಜಿ ಮಾತ್ರವೇ ದೇಗುಲದ ಒಳಗೆ ಹೋಗಿ, ಮಹಾಕಾಳೇಶ್ವರನ ದರ್ಶನ ಮಾಡಿ, ಪೂಜೆ ಸಲ್ಲಿಸಿದ್ದಾರೆ. ಆ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Leave A Reply

Your email address will not be published.