ರಜನೀಕಾಂತ್ ಸಿನಿಮಾದಲ್ಲಿ ನಟಿಸಿದ್ದ ಕಿಚ್ಚ ಸುದೀಪ್ ತಮ್ಮ ದೃಶ್ಯಗಳಿಗೆ ತಾವೇ ಕತ್ತರಿ ಹಾಕಿಸಿದ್ದೇಕೆ?? ಶಾಕಿಂಗ್ ಆದ್ರೂ ನಿಜ

Written by Soma Shekar

Published on:

---Join Our Channel---

ದಕ್ಷಿಣ ಸಿನಿರಂಗದ ಹಿರಿಯ ನಟ, ತಮಿಳು ಸಿನಿಮಾ ರಂಗದ ಸೂಪರ್ ಸ್ಟಾರ್ ನಟ ರಜನೀಕಾಂತ್ ಅವರ ಸಿನಿಮಾಗಳು ಎಂದರೆ ಅವರ ಅಭಿಮಾನಿಗಳಿಗೆ ದೊಡ್ಡ ಕ್ರೇಜ್. ಅಪಾರ ಅಭಿಮಾನಿಗಳು ಹಾಗೂ ಬಹುದೊಡ್ಡ ಸ್ಟಾರ್ ಡಂ ಹೊಂದಿರುವ ಈ ನಟನ ಜೊತೆ ನಟಿಸುವ ಅವಕಾಶ ಸಿಕ್ಕರೆ ಯಾವ ನಟರು ತಾನೇ ಬೇಡ ಎನ್ನಲು ಸಾಧ್ಯ??? ಅನೇಕ ಯುವ ನಟ ನಟಿಯರು ಹಾಗೂ ಸ್ಟಾರ್ ಗಳ ಸಹಾ ರಜನೀಕಾಂತ್ ಅವರ ಸಿನಿಮಾದಲ್ಲಿ ನಟಿಸಲು ಬಯಸುತ್ತಾರೆ. ಒಂದು ಸೀನ್ ನಲ್ಲಿ ಕಾಣಿಸಿಕೊಂಡರೂ ಅದೇ ಅದ್ಭುತ ಅವಕಾಶ ಎಂದು ಭಾವಿಸುತ್ತಾರೆ. ರಜನೀಕಾಂತ್ ಸಿನಿಮಾಗಳಲ್ಲಿ ಸಹಜವಾಗಿಯೇ ಸ್ಟಾರ್ ಗಳ ದಂಡು ಇರುತ್ತದೆ.

ಎಲ್ಲರೂ ರಜನೀ ಜೊತೆ ತೆರೆ ಹಂಚಿಕೊಳ್ಳಲು ಬಯಸುವಾಗಲೇ ನಮ್ಮ ಸ್ಯಾಂಡಲ್ವುಡ್ ನ ಕಿಚ್ಚ ಸುದೀಪ್ ಅವರು ಮಾತ್ರ ತಾವು ರಜನೀ ಜೊತೆ ನಟಿಸಿದ್ದ ದೃಶ್ಯವನ್ನು ತಾವೇ ಸಿನಿಮಾದಿಂದ ತೆಗೆಸಿ ಹಾಕಿದ್ದರಂತೆ. ಹೌದು ಈ ವಿಷಯವನ್ನು ಸ್ವತಃ ಸುದೀಪ್ ಅವರೇ ಝೀ ವಾಹಿನಿಯ ಕುಟುಂಬ ಅವಾರ್ಡ್ಸ್ ವೇದಿಕೆಯ ಮೇಲೆ ಹಂಚಿಕೊಂಡು ಎಲ್ಲರಿಗೂ ಆಶ್ಚರ್ಯವನ್ನು ಉಂಟು ಮಾಡಿದ್ದಾರೆ. ಕುಟುಂಬ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರು ಅತಿಥಿಯಾಗಿ ಬಂದಿದ್ದರು.

ಆಗ ವಿಶೇಷ ಫೋಟೋಗಳನ್ನು ತೋರಿಸಿ ಅದರ ಬಗ್ಗೆ ಅವರ ಮನಸ್ಸಿಗೆ ಬರುವ ಮಾತನ್ನು ಹೇಳುವಂತೆ ಕೇಳಿದ್ದರು. ಆಗ ತೋರಿಸುತ್ತಿದ್ದ ಫೋಟೋಗಳಲ್ಲಿ ಒಂದು ಸುದೀಪ್ ಹಾಗೂ ರಜನೀಕಾಂತ್ ಅವರು ಜೊತೆಯಿದ್ದ ಫೋಟೋ ತೋರಿಸಿದಾಗ ಸುದೀಪ್ ಅವರು ಈ ಆಸಕ್ತಿಕರ ಮಾಹಿತಿ ಹಂಚಿಕೊಂಡಿದ್ದಾರೆ. ರಜನೀಕಾಂತ್ ನಟನೆಯ ಲಿಂಗ ಸಿನಿಮಾ ದೊಡ್ಡ ಯಶಸ್ಸನ್ನು ಪಡೆದುಕೊಂಡ ಸಿನಿಮಾ. ಈ ಸಿನಿಮಾದಲ್ಲಿ ಸುದೀಪ್ ಅವರು ಕೂಡಾ ಒಂದು ದೃಶ್ಯದಲ್ಲಿ ರಜನೀಕಾಂತ್ ಅವರ ಜೊತೆ ನಟಿಸಿದ್ದರಂತೆ.

ಆದರೆ ಚಿತ್ರೀಕರಣ ಮುಗಿದ ಮೇಲೆ ಸುದೀಪ್ ಅವರು ಅದನ್ನು ನೋಡಿ ರಜನೀಕಾಂತ್ ಅವರಿಗೆ ಸರ್ ಈ ದೃಶ್ಯ ನಿಜಕ್ಕೂ ಅವಶ್ಯಕತೆ ಇದ್ಯಾ?? ಇದು ಯಾಕೋ ಅಗತ್ಯ ಇಲ್ಲ, ಸಿನಿಮಾಕ್ಕೆ ಇದು ಸೂಟ್ ಆಗ್ತಿಲ್ಲ ಸಾಧ್ಯವಾದ್ರೆ ತೆಗೆದು ಬಿಡಿ ಅಂದಿದ್ರಂತೆ. ಅನಂತರ ಸಿನಿಮಾ ಎಲ್ಲಾ ಪೂರ್ತಿ ಆದ ಮೇಲೆ ಸಿನಿಮಾ ನೋಡಿದ ರಜನೀಕಾಂತ್ ಸುದೀಪ್ ಅವರಿಗೆ ಕರೆ ಮಾಡಿ, ಹೌದು ನೀವು ಹೇಳಿದ್ದು ಸರಿ, ಆ ದೃಶ್ಯ ತೆಗೆದರೆ ನಿಮಗೆ ಬೇಸರ ಇಲ್ಲ ತಾನೇ?? ಎಂದಾಗ ಸುದೀಪ್ ಅವರು ಖುಷಿಯಾಗಿ ಇಲ್ಲ ಪರವಾಗಿಲ್ಲ ತೆಗೆಯಿರಿ ಎಂದಿದ್ರಂತೆ.

ಹೀಗೆ ಲಿಂಗ ಸಿನಿಮಾದಲ್ಲಿ ರಜನೀ ಜೊತೆ ನಟಿಸಿದ್ದರೂ ಕೂಡಾ ಸುದೀಪ್ ಅವರು ಸಿನಿಮಾದ ದೃಷ್ಟಿಯಿಂದ ಆ ಒಂದು ದೃಶ್ಯ ಅವಶ್ಯಕತೆ ಇಲ್ಲ ಎಂದೆನಿಸಿ ಅದನ್ನು ತೆಗೆಸಿದ್ದ ವಿಚಾರ ಹೇಳಿದಾಗ ಅವರ ಸಿನಿಮಾ ಪ್ರೀತಿ ಹಾಗೂ ತಮ್ಮ ವೃತ್ತಿಯ ಬಗ್ಗೆ ಅವರಿಗೆ ಇರುವ ಸಮರ್ಪಣಾ ಭಾವ ಎಂತಹದ್ದು ಎಂದು ಗೊತ್ತಾಗುತ್ತದೆ. ಬಹುಶಃ ಅವರು ಹೇಳ್ದೇ ಇದ್ದಿದ್ದರೆ ಲಿಂಗ ಸಿ‌ನಿಮಾದಲ್ಲಿ ಸುದೀಪ್ ಅವರು ಇದ್ರು ಅನ್ನೋ ವಿಷಯ ಯಾರಿಗೂ ಗೊತ್ತಾಗ್ತಾನೇ ಇರಲಿಲ್ಲ ಎಂದರೂ ತಪ್ಪಾಗದು.

Leave a Comment