ನಟಿಯಿಂದ ಸಂವಿಧಾನಕ್ಕೆ ದೊಡ್ಡ ಅವಮಾನ: ರಚಿತಾ ರಾಮ್ ನ ಗಡೀಪಾರು ಮಾಡಿ! ಹೆಚ್ಚಾದ ಆಗ್ರಹ

Written by Soma Shekar

Published on:

---Join Our Channel---

ಸೆಲೆಬ್ರಿಟಿಗಳು(celebrities) ಹಾಗೂ ವಿ ವಾ ದಗಳು ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಸೆಲೆಬ್ರಿಟಿಗಳು ತಾವು ವಿ ವಾ ದಗಳಿಂದ ಸದಾ ದೂರ ಇರಬೇಕೆಂದು ಬಯಸುತ್ತಾರೆ. ಆದರೆ ಅವರು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಸಹಾ ಕೆಲವೊಮ್ಮೆ ಮಾತಿನ ಭರದಲ್ಲಿ ಅವರು ನೀಡುವ ಹೇಳಿಕೆಗಳು ವಿ ವಾ ದ ಗಳಿಗೆ ಕಾರಣವಾಗುತ್ತವೆ. ಈಗ ಸ್ಯಾಂಡಲ್ವುಡ್ ನ(Sandalwood) ಸ್ಟಾರ್ ನಟಿ ಎನಿಸಿಕೊಂಡಿರುವ ರಚಿತಾ ರಾಮ್(Rachita Ram) ಅವರಿಗೆ ಸಹಾ ಇಂತಹುದೇ ಪರಿಸ್ಥಿತಿ ಎದುರಾಗಿದೆ. ಕಾರ್ಯಕ್ರಮವೊಂದರಲ್ಲಿ ತಮ್ಮ ಸಿನಿಮಾ ಬಗ್ಗೆ ಮಾತನಾಡುವ ಭರದಲ್ಲಿ ನಟಿ ಆಡಿದ ಮಾತು ಈಗ ಸಮಸ್ಯೆಗೆ ಕಾರಣವಾಗಿದೆ.

ನಟಿ ನೀಡಿದ ಹೇಳಿಕೆಯ ವಿ ರು ದ್ಧ ಈಗಾಗಲೇ ದೂರು ದಾಖಲಾಗಿದೆ. ಅಲ್ಲದೇ ನಟಿಯನ್ನು ಗಡಿಪಾರು ಮಾಡಿ ಎನ್ನುವ ಆಗ್ರಹ ಕೂಡಾ ಕೇಳಿ ಬರುತ್ತಿದೆ. ನಟಿಯ ಮಾತಿನಿಂದ ಆಗಿರುವ ವಿ ವಾ ದ ಈಗ ತೀವ್ರ ಸ್ವರೂಪವನ್ನು ಪಡೆದುಕೊಳ್ಳುವ ಹಾಗೆ ಕಾಣುತ್ತಿದೆ. ನಟಿ ಸ್ಯಾಂಡಲ್ವುಡ್ ನ(Sandalwood) ಸ್ಟಾರ್ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರ ಜೊತೆಗೆ ಕ್ರಾಂತಿ(Kranti) ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.

ಇದನ್ನೂ ಓದಿ: ಕಾಂತಾರ 2 ಗೆ ಶುರುವಾಯ್ತು ಸಿದ್ಧತೆ: ದೈವದ ಒಪ್ಪಿಗೆ ಸಿಕ್ಕಿತು, ಸಿನಿಮಾ ತೆರೆಗೆ ಯಾವಾಗ? ಉತ್ತರ ಕೊಟ್ಟ ನಿರ್ಮಾಪಕ

ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಚಿತಾ ರಾಮ್ (Rachita Ram), “ಗಣರಾಜ್ಯೋತ್ಸವ ಮರೆಯಿರಿ, ಕ್ರಾಂತಿಯ ಉತ್ಸವ ಮಾಡಿ” ಎನ್ನುವ ಮಾತೊಂದನ್ನು ಹೇಳಿದ್ದರು.’ ಈ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಖಂ ಡಿ ಸಿದ್ದರು. ನಟಿಗೆ ದೇಶದ ಸಂವಿಧಾನದ ಬಗ್ಗೆ ಸ್ವಲ್ಪವೂ ಜ್ಞಾನ ಇಲ್ಲವೇ ? ಎಂದು ಪ್ರಶ್ನಿಸಿ, ಟೀಕೆಗಳನ್ನು ಮಾಡಿದ್ದರು. ನಟಿಯ ಈ ಹೇಳಿಕೆಯ ವಿ ರು ದ್ಧ ದೂರು ಸಹಾ ದಾಖಲಾಗಿದೆ. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಶಿವಲಿಂಗಯ್ಯ ಅವರು ದೂರನ್ನು ದಾಖಲಿಸಿದ್ದಾರೆ.

ಶಿವಲಿಂಗಯ್ಯ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಇನ್ನೂ ನಮ್ಮ ಸಂವಿಧಾನಕ್ಕೆ ಒಂದಲ್ಲಾ ಒಂದು ಸಮಸ್ಯೆ ಇದೆ. ನಟಿ ರಚಿತಾ ರಾಮ್ ಅವರು ಗಣರಾಜ್ಯೋತ್ಸವ ಮರೆತು, ಕ್ರಾಂತಿ ಉತ್ಸವ ಮಾಡಿ ಎಂದು ತಮ್ಮ ಎಲುಬಿಲ್ಲದ ನಾಲಗೆಯನ್ನು ಹರಿ ಬಿಟ್ಟಿದ್ದಾರೆ. ಬಹಿರಂಗವಾಗಿ ಸಂವಿಧಾನ ವಿ ರೋ ಧಿ ಹೇಳಿಕೆ ನೀಡಿರುವುದು ಸಂವಿಧಾನ ಜಾರಿಯಾದ ದಿನಕ್ಕೆ ಮಾಡಿದ ಅವಮಾನ. ಆದ ಕಾರಣ ಅವರ ಮೇಲೆ ದೇಶ ದ್ರೋ ಹ ಪ್ರಕರಣ ದಾಖಲು ಮಾಡಿ, ದೇಶದಿಂದ ಗಡಿಪಾರು ಮಾಡುವಂತೆ ದೂರು ನೀಡಿರುವುದಾಗಿ ಹೇಳಿದ್ದಾರೆ.

Leave a Comment