ಯುವ ನಟಿಯರನ್ನು ನಾಚಿಸುವಷ್ಟು ಸ್ಲಿಮ್ ಆದ ಖುಷ್ಬೂ: ಹೊಸ ನಟಿಯರಿಗೂ ಸ್ಪರ್ಧೆ ನೀಡುವಂತಿದೆ ಅವರ ಹೊಸ ಲುಕ್

Entertainment Featured-Articles News
55 Views

ಮೂಲತಃ ಮುಂಬೈನಲ್ಲಿ ಒಂದು ಸಾಧಾರಣ ಕುಟುಂಬದಲ್ಲಿ ಜನಿಸಿ, ಬಾಲನಟಿಯಾಗಿ ಬಾಲಿವುಡ್ ಪ್ರವೇಶಿಸಿ, ಆನಂತರ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ನಟಿ ಖುಷ್ಬೂ. ಆದರೆ ಈ ನಟಿ ಬಾಲಿವುಡ್ ಗಿಂತಲೂ ಹೆಚ್ಚಿನ ಜನಪ್ರಿಯತೆ ಹಾಗೂ ಜನ ಮನ್ನಣೆಯನ್ನೂ ಪಡೆದಿದ್ದು ಮಾತ್ರ ದಕ್ಷಿಣದ ಸಿನಿಮಾರಂಗದಲ್ಲಿ. ಅದರಲ್ಲೂ ವಿಶೇಷವಾಗಿ ತಮಿಳು ಚಿತ್ರರಂಗ ನಟಿ ಖುಷ್ಬು ಅವರಿಗೆ ನೀಡಿದ ಸ್ಥಾನಮಾನ ಬಹಳ ವಿಶೇಷವಾದದ್ದು. 90ರ ದಶಕದಲ್ಲಿ ದಕ್ಷಿಣ ಸಿನಿರಂಗದ ಬಹುಬೇಡಿಕೆಯ ನಟಿಯಾಗಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯಯನ್ನು ತನ್ನದಾಗಿಸಿಕೊಂಡ ನಟಿ ಖುಷ್ಬೂ. ಅಂದು ಈ ನಟಿಯ ಅಂದಕ್ಕೆ ಮನ ಸೋತವರು ಅಸಂಖ್ಯಾತ ಮಂದಿ. ಅವರ ಅಭಿಮಾನಿಗಳಿಗೆ ಖುಷ್ಬು ಅವರ ಮೇಲಿನ ಅಭಿಮಾನ ಹೇಗಿತ್ತು ಎಂದರೆ ತಮಿಳುನಾಡಿನಲ್ಲಿ ಅವರಿಗಾಗಿ ಒಂದು ದೇವಾಲಯವನ್ನು ನಿರ್ಮಾಣ ಮಾಡಿಬಿಟ್ಟಿದ್ದರು.

ಒಂದು ಕಾಲದಲ್ಲಿ ಅನೇಕರ ಕನಸಿನ ಹುಡುಗಿಯಾಗಿ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿದ್ದ, ಖುಷ್ಬೂ ಅವರು ಅನಂತರ ಮದುವೆ, ಮಕ್ಕಳು ಸಾಂಸಾರಿಕ ಜೀವನ ಹಾಗೂ ರಾಜಕೀಯದ ಕಡೆ ಗಮನವನ್ನು ಹರಿಸಿ ಸಿನಿಮಾಗಳ ಕಡೆಗೆ ಸ್ವಲ್ಪ ಆಸಕ್ತಿಯನ್ನು ಕಡಿಮೆ ಮಾಡಿದರು. ಇನ್ನು ಮನೆ ಮಕ್ಕಳು ಎನ್ನುವ ಜಂಜಾಟದಲ್ಲಿ ಅವರ ದೇಹದ ತೂಕವು ಹೆಚ್ಚಾಯಿತು. ಸಿನಿಮಾಗಳಲ್ಲಿ ಅಂದದ ಬೊಂಬೆಯಾಗಿ ಬಳ್ಳಿಯಂತೆ ನಾಜೂಕಾಗಿ ಸಿನಿರಸಿಕರ ಹೃದಯಕ್ಕೆ ಲಗ್ಗೆ ಇಟ್ಟಿದ್ದ, ಎಲ್ಲಾ ತರಹದ ಪಾತ್ರಗಳಲ್ಲೂ ಅದ್ಭುತ ನಟನೆಯ ಮೂಲಕ ಸಿನಿ ಪ್ರೇಮಿಗಳ ಮೆಚ್ಚುಗೆ ಗಳಿಸಿದ್ದಂತಹ ಖುಷ್ಬು ಅವರ ಅಂದ ಮಾಸಲಿಲ್ಲವಾದರೂ, ಅವರ ದೇಹದ ತೂಕ ಮಾತ್ರ ಹಿಂದಿನಂತೆ ಉಳಿದಿರಲಿಲ್ಲ, ಅವರಲ್ಲೂ ಸಹಾ ಸಾಕಷ್ಟು ಬದಲಾವಣೆಗಳು ಕಂಡವು.

ತೆಲುಗು ಸಿನಿಮಾ ಮೂಲಕ ದಕ್ಷಿಣ ಚಿತ್ರರಂಗಕ್ಕೆ ಅಡಿಯಿಟ್ಟ ಖುಷ್ಬೂ ಅವರು ಅನಂತರ ತಮಿಳು ಸಿನಿಮಾಗಳಲ್ಲಿ ಸ್ಟಾರ್ ನಟಿಯಾದರು. ಇನ್ನು ಕನ್ನಡದಲ್ಲಿ ರವಿಚಂದ್ರನ್ ಅವರ ಜೊತೆ ನಟಿಸಿದ ಅಂಜದಗಂಡು, ರಣಧೀರ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಕೂಡಾ ದೊಡ್ಡ ಯಶಸ್ಸನ್ನು ಪಡೆದುಕೊಂಡರು ನಟಿ ಖುಷ್ಬೂ. ಇವರು ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಅಪಾರವಾದ ಬೇಡಿಕೆಯನ್ನು ಪಡೆದುಕೊಂಡಿದ್ದರು, ತಮಿಳು ಚಿತ್ರರಂಗದಲ್ಲಿ ನಂಬರ್ ಒನ್ ನಟಿಯಾದರೆ, ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದರು. ತಮಿಳುನಾಡಿನಲ್ಲಿ ಖುಷ್ಬು ಅವರ ಹೆಸರಿನಲ್ಲಿ ಅನೇಕ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ ಜನ ಎಂದರೆ ಅದು ಖುಷ್ಬೂ ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ತಮಿಳಿನ ಇಂದಿನ ಹಿರಿಯ ನಟ ಪ್ರಭು ಅವರ ಜೊತೆಗೆ ರಿಲೇಶನ್ ಶಿಪ್ ಮಲ್ಲಿ ಇದ್ದಂತಹ ನಟಿ ಖುಷ್ಬೂ ಅವರನ್ನೇ ಮದುವೆಯಾಗುತ್ತಾರೆ ಎನ್ನುವ ಸುದ್ದಿಯೂ ಹರಡಿತ್ತು. ಆದರೆ ಅದು ಪ್ರಭು ಅವರ ತಂದೆ ಶಿವಾಜಿಗಣೇಶನ್ ಅವರಿಗೆ ಅದು ಇಷ್ಟವಿಲ್ಲದ ಕಾರಣ ಖುಷ್ಬೂ ತಾನಾಗಿಯೇ ಆ ಸಂಬಂಧದಿಂದ ದೂರವಾಗಿದ್ದರು. ಇದಾದ ನಂತರ ಅವರು ನಿರ್ದೇಶಕ ಸುಂದರ್ ಅವರ ಜೊತೆ ವಿವಾಹವನ್ನು ಮಾಡಿಕೊಂಡಿದ್ದು, ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿದ್ದಾರೆ. ತಮಿಳು ನಾಡಿದ ರಾಜಕೀಯ ರಂಗದಲ್ಲಿ ಸಾಕಷ್ಟು ಯಶಸ್ಸನ್ನು ಪಡೆದುಕೊಂಡಿರುವ ಅವರು ಸೀರಿಯಲ್ ಗಳ ನಿರ್ಮಾಣದ ಕಡೆ ಗಮನವನ್ನು ನೀಡಿದ್ದಾರೆ.

ಇದೀಗ ವರ್ಷಗಳ ಬಳಿಕ ತಮ್ಮ ದೇಹದ ತೂಕದ ಕಡೆಗೆ ಗಮನವನ್ನು ನೀಡಿರುವ ಖುಷ್ಬೂ ಅವರು ಕಳೆದ ಒಂದೂವರೆ ವರ್ಷದಿಂದ ಇರುವ ಲಾಕ್ ಡೌನ್ ಅವಧಿಯನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡಿದ್ದಾರೆ. ಈ ವೇಳೆಯಲ್ಲಿ ಅವರು ಉತ್ತಮ ವರ್ಕೌಟ್ ಮೂಲಕ ತಮ್ಮ ದೇಹವನ್ನು ದಂಡಿಸಿ ಸ್ಲಿಮ್ ಆಗಿದ್ದಾರೆ. ಖುಷ್ಬೂ ಅವರ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲಾಗಿದ್ದು, ಇಂದಿನ ಯುವ ನಟಿಯರಿಗೆ ಸ್ಪರ್ಧೆ ನೀಡುವಂತೆ ಕಾಣುತ್ತಿದ್ದಾರೆ. ನಟಿ ಖುಷ್ಬು ಅವರ ಈ ಹೊಸ ಫೋಟೋಗಳನ್ನು ನೋಡಿ ಅಭಿಮಾನಿಗಳು ಕೂಡಾ ಸಾಕಷ್ಟು ಮೆಚ್ಚುಗೆಯ ಪ್ರತಿಕ್ರಿಯೆಗಳನ್ನು ನೀಡುತ್ತಾ ಸಾಗಿದ್ದಾರೆ.

Leave a Reply

Your email address will not be published. Required fields are marked *