ಯುವನಟಿಯೊಂದಿಗೆ ಹೃತಿಕ್ ಪ್ರೇಮ??ಯುವ ನಟಿಯ ಕೈ ಕೈ ಹಿಡಿದು ಕಂಡ ಹೃತಿಕ್!! ಯಾರು ಈಕೆ ಎಂದು ನೆಟ್ಟಿಗರ ಆಸಕ್ತಿ

Written by Soma Shekar

Updated on:

---Join Our Channel---

ಬಾಲಿವುಡ್ ಮಾತ್ರವೇ ಅಲ್ಲದೇ ಭಾರತೀಯ ಸಿನಿಮಾದಲ್ಲಿ ಸುಂದರಾಂಗ, ವಿಶ್ವದ ಸುಂದರ ಪುರುಷರಲ್ಲಿ ಸ್ಥಾನವನ್ನು ಪಡೆದಿರುವ ನಟ ಹೃತಿಕ್ ರೋಷನ್ ಇತ್ತೀಚಿನ ದಿನಗಳಲ್ಲಿ ಅಷ್ಟಾಗಿ ಸಿನಿಮಾ ಚಟುವಟಿಕೆಗಳನ್ನು ಮಾಡುತ್ತಿಲ್ಲವಾದರೂ ಸಹಾ ಅವರ ಬಗ್ಗೆ ಆಗಾಗ ಸುದ್ದಿಗಳಾಗುತ್ತಲೇ ಇರುತ್ತವೆ.‌ ಇನ್ನು ನಟ ಹೃತಿಕ್ ರೋಶನ್ ಹೆಸರು ಬಾಲಿವುಡ್ ನ ಕೆಲವು ನಟಿಯರ ಜೊತೆ ತಳಕು ಹಾಕಿಕೊಂಡ ವಿಷಯಗಳು ಈಗಾಗಲೇ ಹಲವು ಬಾರಿ ಚರ್ಚೆಗೆ ಒಳಗಾಗಿದ್ದವು. ಹೃತಿಕ್ ಹಾಗೂ ಸೂಸನ್ ವಿಚ್ಛೇದನ ಕೂಡಾ ದೊಡ್ಡ ಸುದ್ದಿಯಾಗಿತ್ತು.

ಈ ಹಿಂದೆ ನಟ ಹೃತಿಕ್ ರೋಶನ್ ಮತ್ತು ನಟಿ ಕಂಗನಾ ನಡುವಿನ ಅಫೇರ್ ಕುರಿತಾಗಿ ಸಹಾ ಸಾಕಷ್ಟು ವಿಷಯಗಳು ಹರಿದಾಡಿದ್ದವು. ಅಲ್ಲದೇ ನಟಿ ಕಂಗನಾ ಕೂಡಾ ಬೋಲ್ಡಾಗಿ ಹೃತಿಕ್ ರೋಶನ್ ಬಗ್ಗೆ ಕೆಲವು ಸಂದರ್ಶನಗಳಲ್ಲಿ ಮಾತಾಡುತ್ತಾ ಹೃತಿಕ್ ತನ್ನ ಹಿಂದೆ ಬಿದ್ದಿದ್ದ ಎನ್ನುವ ಮಾತನ್ನು ಹೇಳಿದ್ದುಂಟು. ಏನೇ ಆದರೂ ಹೃತಿಕ್ ಅವರು ಪ್ರೀತಿಸಿ ಮದುವೆಯಾಗಿದ್ದ ಸೂಸನ್ ಜೊತೆಗೆ ವಿಚ್ಛೇದನ ಆದಾಗ ಅವರ ಅಭಿಮಾನಿಗಳಿಗೆ ಇದೊಂದು ದೊಡ್ಡ ಶಾ ಕ್ ನೀಡುವಂತ ವಿಚಾರವಾಗಿತ್ತು.

ಈಗ ಹಲವು ದಿನಗಳ ನಂತರ ಹೃತಿಕ್ ಹೆಸರು ಉದಯೋನ್ಮುಖ ನಟಿಯೊಬ್ಬರ ಜೊತೆಗೆ ತಳಕು ಹಾಕಿಕೊಂಡಿದೆ. ಅದಕ್ಕೆ ಪೂರಕ ಎನ್ನುವ ಹಾಗೆ ಶುಕ್ರವಾರ ರಾತ್ರಿ ಹೃತಿಕ್ ರೋಶನ್ ಹಾಗೂ ಬಾಲಿವುಡ್ ನಟಿ ಇಬ್ಬರೂ ಜೊತೆಯಾಗಿ ಡಿನ್ನರ್ ಗೆ ಹೋಗಿದ್ದರು. ಡಿನ್ನರ್ ಮುಗಿಸಿ ಹೊರ ಬರುವಾಗ ಮಾದ್ಯಮಗಳ ಕ್ಯಾಮೆರಾ ಕಣ್ಣುಗಳಿಗೆ ಕೈ ಕೈ ಹಿಡಿದು ಬರುತ್ತಿದ್ದ ಜೋಡಿಯು ಕಂಡಿದ್ದು, ಅವರ ಫೋಟೋ ಸೋಶಿಯಲ್ ಮೀಡಿಯಾ ಮೂಲಕ ಈಗ ಎಲ್ಲರ ಗಮನ ಸೆಳೆದಿದೆ.

ಹೌದು, ಹೃತಿಕ್ ರೋಶನ್‌ ಸಿನಿಮಾ ರಂಗದಲ್ಲಿ ಕೆಲವೊಂದು ಸಿನಿಮಾಗಳನ್ನು ಮಾಡಿರುವ, ಆದರೆ ದೊಡ್ಡ ಯಶಸ್ಸನ್ನು ಪಡೆದಿರುವ ಯಾವುದೇ ಸಿನಿಮಾಗಳನ್ನು ಮಾಡದೇ ಇರುವ ಉದಯೋನ್ಮುಖ ನಟಿ ಸಬಾ ಆಜಾದ್ ಜೊತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶುಕ್ರವಾರ ರಾತ್ರಿ ಮುಂಬೈನ ಬಾಂದ್ರಾದಲ್ಲಿ ಜಪಾನೀಸ್ ನ ರೆಸ್ಟೋರೆಂಟ್ ನಿಂದ ಹೊರ ಬಂದಾಗ ಹೃತಿಕ್ ರೋಶನ್ ಮತ್ತು ಸಭಾ ಕ್ಯಾಮರಾ ಕಣ್ಣಿಗೆ ಕಂಡಿದ್ದು, ಬಿ ಟೌನ್ ನಲ್ಲಿ ಇವರ ಬಗ್ಗೆ ಗುಸು ಗುಸು ಆರಂಭವಾಗಿದೆ.

ವಿಚ್ಚೇದನದ ನಂತರ ಹೃತಿಕ್ ರೋಶನ್ ಅವರ ಹೆಸರು ಯಾರೊಂದಿಗೂ ತಳಕು ಹಾಕಿಕೊಂಡಿರಲಿಲ್ಲ. ಆದರೆ ಈಗ ಸಬಾ ಜೊತೆ ಹೃತಿಕ್ ಕಾಣಿಸಿಕೊಂಡ ಮೂಲಕ ಇವರ ನಡುವೆ ಏನೋ ಇದೆ ಎಂದು ಗಾಸಿಪ್ ಗಳು ಹರಿದಾಡಿವೆ. ಅಲ್ಲದೇ ಸಬಾ ಇಷ್ಟು ದಿನ ಸಿನಿಮಾಗಳಿಂದ ಕೂಡಾ ಜನಪ್ರಿಯತೆ ಒಂದು ಫೋಟೋದಿಂದ ಪಡೆದಿದ್ದು, ನೆಟ್ಟಿಗರು ಹಾಗೂ ಸಿನಿ ಪ್ರೇಮಿಗಳು ಯಾರು ಹೃತಿಕ್ ರೋಶನ್ ಜೊತೆಗೆ ಕಂಡ ನಟಿ?? ಎಂದು ತಿಳಿಯಲು ಗಮನ ನೀಡಿದ್ದಾರೆ.‌

Leave a Comment