ಯುವನಟಿಯಿಂದ ಆರ್ಯನ್ ಖಾನ್ ಗೆ ಡ್ರ ಗ್ ಸಪ್ಲೈ: ಬಾಲಿವುಡ್ ಸ್ಟಾರ್ ಕಿಡ್ ಗಳು ಮಾಡ್ತಿರೊದೇನು?

0 1

ಬಾಲಿವುಡ್ ಸ್ಟಾರ್ ಶಾರೂಖ್ ಖಾನ್ ಮಗ ಡ್ರ ಗ್ ಕೇ ಸ್ ನಲ್ಲಿ ಸಿಕ್ಕಿ ಹಾಕಿಕೊಂಡಿರುವ ವಿಷಯ ದೇಶದೆಲ್ಲೆಡೆ ಸದ್ದು ಮಾಡಿರುವ ಹೈಪ್ರೊಫೈಲ್ ಪ್ರಕರಣವಾಗಿದೆ. ಈ ಡ್ರ ಗ್ ಕೇಸ್ ನಲ್ಲಿ ಬಾಲಿವುಡ್ ನ ಸ್ಟಾರ್ ಗಳ ಮಕ್ಕಳ ತಳಕು ಹಾಕಿಕೊಂಡಿರುವುದೇ ಇದನ್ನು ಸಂಕೀರ್ಣ ಮಾಡುತ್ತಿದೆ. ಒಂದೆಡೆ ಶಾರೂಖ್ ಖಾನ್ ಹರ ಸಾಹಸ ಪಟ್ಟರೂ ಮಗನಿಗೆ ಜಾಮೀನು ಪಡೆಯುವುದು ಅಸಾಧ್ಯವಾಗಿದೆ. ಬಾಲಿವುಡ್ ಸೆಲೆಬ್ರಿಟಿಗಳು ಶಾರೂಖ್ ಮಗನ ಬಂ ಧ ನ ಆತನಿಗೆ ಆಗುತ್ತಿರುವ ಶೋ ಷ ಣೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಬರೆದುಕೊಂಡು ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.

ಇವೆಲ್ಲವುಗಳ ನಡುವೆಯೇ ಹೊಸ ಬೆಳವಣಿಗೆಯಲ್ಲಿ ಬಾಲಿವುಡ್ ನ ಯುವನಟಿ , ಹಿರಿಯ ನಟ ಚುಂಕಿ ಪಾಂಡೆ ಮಗಳಾದ ಅನನ್ಯಾ ಪಾಂಡೆ ಹೆಸರು ಕೇಳಿ ಬಂದಿದೆ. ಅನನ್ಯಾ ಪಾಂಡೆ ಮೇಲೆ ಅನುಮಾನಗಳು ಬಂದ ಹಿನ್ನೆಲೆಯಲ್ಲಿ ನಿನ್ನೆ ಮತ್ತು ಇಂದು ಎನ್ ಸಿ ಬಿ ಅನನ್ಯಾ ಪಾಂಡೆಯವರನ್ನು ಕರೆಯಿಸಿ ವಿಚಾರಣೆಯನ್ನು ನಡೆಸಿದೆ. ಈ ಮಧ್ಯೆ ವಾಟ್ಸಾಪ್ ಚಾಟ್ ಗಳಿಂದ ಕೆಲವು ಮಹತ್ವದ ವಿಚಾರಗಳ ಮಾಹಿತಿ ದೊರೆತಿದೆ ಎನ್ನಲಾಗಿದೆ. ಎನ್ ಸಿ ಬಿ ಅಧಿಕಾರಿಗಳಿಗೆ ಈ ಮಾಹಿತಿಗಳು ಉಪಯುಕ್ತ ಆಗಲಿದೆ ಎಂದು ಹೇಳಲಾಗುತ್ತಿದೆ.

ಆರ್ಯನ್ ಖಾನ್ ಬಂ ಧ ನ ದ ನಂತರ ಆತನ ಮೊಬೈಲ್ ಅನ್ನು ಎನ್ ಸಿ ಬಿ ತನ್ನ ವಶಕ್ಕೆ ಪಡೆದಿತ್ತು. ಆ ವೇಳೆ ಆರ್ಯನ್ ಫೋನ್ ನಲ್ಲಿ ಎನ್ ಸಿ ಬಿ ಅಧಿಕಾರಿಗಳು ವಾಟ್ಸಾಪ್ ಚಾಟ್ ಅನ್ನು ಪರಿಶೀಲನೆ ನಡೆಸಿದಾಗ ಆ ಚಾಟ್ ಹಿಸ್ಟರಿ ನೋಡಿ ಅಧಿಕಾರಿಗಳು ಶಾ ಕ್ ಆಗಿದ್ದಾರೆ. ಇದಕ್ಕೆ ಪ್ರಮುಖ ಕಾರಣವಾಗಿದ್ದು ಆರ್ಯನ್ ಖಾನ್ ಮತ್ತು ಆರ್ಯನ್ ನಡುಗೆ ಡ್ರ ಗ್ ವಿಚಾರವಾಗಿ ನಡೆದಿರುವ ಚಾಟ್ ನ ಮಾಹಿತಿ ದೊರೆತಿದೆ. ಈ ಚಾಟ್ ನಿಂದ ಆರ್ಯನ್ ಖಾನ್ ಗೆ ಗಾಂ ಜಾ ಸಪ್ಲೈ ಮಾಡಿದ್ದರು ಎನ್ನುವ ಅರ್ಥವನ್ನು ನೀಡುವಂತಿದೆ ಎನ್ನಲಾಗಿದೆ.

ಇದೇ ಕಾರಣದಿಂದಲೇ ಅನನ್ಯ ಪಾಂಡೆಯನ್ನು ಎನ್ ಸಿ ಬಿ ಅಧಿಕಾರಿಗಳು ವಿಚಾರಣೆಗೆ ಕರೆದು ಪ್ರಶ್ನೆ ಮಾಡಿದೆ. ಡ್ರ ಗ್ ಸೇವನೆ ಎಂತಹ ಅ ಪ ರಾ ಧ ವೋ ಅದನ್ನು ಪೂರೈಕೆ ಮಾಡುವುದು ಸಹಾ ಅಂತಹುದೇ ಅ ಪ ರಾ ಧ ವಾಗಿದೆ. ಒಂದು ವೇಳೆ ಇನ್ನಷ್ಟು ಸಾಕ್ಷ್ಯಗಳು ಹಾಗೂ ಮಾಹಿತಿಗಳು ದೊರೆತರೆ ಅನನ್ಯಾ ಪಾಂಡೆ ಯನ್ನು ಸಹಾ ಬಂ ಧಿ ಸುವ ಸಾಧ್ಯತೆಗಳಿದ್ದು ಎನ್ ಸಿ ಬಿ ಎಲ್ಲಾ ರೀತಿಯಲ್ಲೂ ಸಮರ್ಪಕವಾದ ತನಿಖೆಯನ್ನು ನಡೆಸುತ್ತಿದ್ದು ಮುಂದೆ ಏನಾಗಲಿದೆ ನೋಡಬೇಕಿದೆ.

Leave A Reply

Your email address will not be published.