ಯಾವ ತಾಯಿಯೂ ಮಾಡದಂತ ಕೆಲಸ ಮಾಡಲು ಮುಂದಾದ ಸೀತಮ್ಮ: ಸತ್ಯ ಸೀರಿಯಲ್ ನಲ್ಲಿ ಭರ್ಜರಿ ಟ್ವಿಸ್ಟ್ !!

Entertainment Featured-Articles Movies News

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳು ಪ್ರಸಾರ ಆಗುತ್ತಿದೆ. ಇದರಲ್ಲಿ ಕೆಲವೊಂದು ಧಾರಾವಾಹಿಗಳು ಮಾತ್ರ ಟಾಪ್ ಸೀರಿಯಲ್ ನ ಸ್ಥಾನವನ್ನು ಪಡೆದುಕೊಂಡಿವೆ. ಇಂತಹ ಟಾಪ್ ಸೀರಿಯಲ್ ಗಳ ಸಾಲಿನಲ್ಲಿ ಜನಪ್ರಿಯ ಸೀರಿಯಲ್ ಸತ್ಯ ಸಹಾ ಸೇರಿದೆ. ಸತ್ಯ ಸೀರಿಯಲ್ ಬೇರೆಲ್ಲಾ ಸೀರಿಯಲ್ ಗಳಿಗಿಂತ ಭಿನ್ನವಾಗಿ ಮೂಡಿ ಬರುತ್ತಿರುವುದು ಅದರ ವಿಶೇಷವಾಗಿದ್ದು, ಅದೇ ಕಾರಣದಿಂದಲೇ ಪ್ರೇಕ್ಷಕರಿಂದ ವಿಶೇಷ ಮೆಚ್ಚುಗೆಗಳನ್ನು ಪಡೆದುಕೊಂಡಿದೆ. ಕುಟುಂಬದ ಜವಾಬ್ದಾರಿಗಳನ್ನು ಹೊತ್ತು, ಗಂಡು ದಿಕ್ಕಿಲ್ಲದ ಮನೆಗೆ ತಾನೇ ದಿಕ್ಕಾಗಿ, ಗಂಡಿಗಿಂತ ತಾನೇನೂ ಕಡಿಮೆ ಇಲ್ಲವೆನ್ನುವಂತೆ ಬದುಕುವ ದಿಟ್ಟತನದ ಹುಡುಗಿ ಸತ್ಯಾಳ ಕಥೆಯಲ್ಲಿ ಈಗಾಗಲೇ ಸಾಕಷ್ಟು ತಿರುವುಗಳು ಮೂಡಿದೆ.

ಸತ್ಯಳ ಅಕ್ಕ ದಿವ್ಯ ಮಾಡಿದ ಎಡವಟ್ಟಿನಿಂದ ಸತ್ಯ ಕೋಟೆಮನೆಗೆ ಸೊಸೆಯಾಗಿದ್ದಾಳೆ. ತಾನು ಪ್ರೀತಿಸಿದ ಕಾರ್ತಿಕ್ ನ ಪತ್ನಿಯಾಗಿದ್ದಾಳೆ. ಆದರೆ ಕಾರ್ತಿಕ್ ಗೆ ಅವಳು ಮೋಸದಿಂದ ತನ್ನನ್ನು ಮದುವೆ ಆಗಿದ್ದಾಳೆ ಎನ್ನುವ ಕೋಪವಿದೆ. ಸತ್ಯಳ ಬಗ್ಗೆ ಅಸಮಾಧಾನವಿದೆ‌. ಇನ್ನು ಕಾರ್ತಿಕ್ ನ ತಾಯಿ ಸೀತಮ್ಮನಿಗೆ ಸತ್ಯ ಸೊಸೆಯಾಗಿ ತನ್ನ ಮನೆಗೆ ಬಂದಿರುವುದು ಸ್ವಲ್ಪವೂ ಇಷ್ಟವಿಲ್ಲ. ಅವರ ಅಸಮಾಧಾನ ಹಾಗೂ ಸಿಟ್ಟು ಮಾತ್ರ ಒಂಚೂರು ಕಡಿಮೆಯಾಗಿಲ್ಲ. ಸತ್ಯ ಮನೆ ಸೊಸೆಯಾಗಿ ಆ ಮನೆಯ ಸಂಪ್ರದಾಯಗಳನ್ನು ಆಚಾರ ವಿಚಾರಗಳನ್ನು ತಿಳಿದುಕೊಳ್ಳುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾ, ಹಬ್ಬದ ದಿನ ಗುರುಗಳ ಮೆಚ್ಚುಗೆಗೆ ಪಾತ್ರವಾದರೂ ಕೂಡಾ ಸೀತಮ್ಮನಿಗೆ ಯಾವುದೂ ಸಮಾಧಾನ ನೀಡುತ್ತಿಲ್ಲ. ಸತ್ಯಳು ಇಷ್ಟವಾಗುತ್ತಿಲ್ಲ.

ಮಗ ಕಾರ್ತಿಕ್ ಕುಡಿದ ಮತ್ತಿನಲ್ಲಿ ಸತ್ಯಳನ್ನು ಅಪ್ಪನಿಗಾಗಿ ಮದುವೆಯಾದೆ, ತನ್ನ ಜೀವನ ಹಾಳಾಗಿ ಹೋಯ್ತು ಎಂದು ಹೇಳಿದ್ದ ಮಾತುಗಳನ್ನು ಪದೇ ಪದೇ ಸ್ಮರಿಸಿಕೊಳ್ಳುವ ಸೀತಮ್ಮ, ಸತ್ಯಳ ಆಗಮನದಿಂದ ತಮ್ಮ ಮಗನ ಜೀವನ ಹಾಳಾಗುತ್ತಿದೆ, ಅವನ ಜೀವನವನ್ನು ಸರಿ ದಾರಿಗೆ ತರಬೇಕಾದರೆ ಸತ್ಯಳನ್ನು ಅವನ ಜೀವನದಿಂದ ದೂರ ಮಾಡಬೇಕೆಂಬ ಆಲೋಚನೆಯನ್ನು ಮಾಡಿದ್ದಾಗಿದೆ. ಅದಕ್ಕಾಗಿಯೇ ಈಗ ಸತ್ಯಳನ್ನು ಪ್ರತ್ಯೇಕವಾಗಿ ಮಾತನಾಡಲು ಕರೆದಿರುವ ಸೀತಮ್ಮ ಯಾವ ತಾಯಿಯೂ ಮಾಡದ ಕೆಲಸವೊಂದನ್ನು ಮಾಡಲು ಹೊರಟಿದ್ದಾರೆ. ಮನೆ ಸೊಸೆಯಾಗಿ ಎಲ್ಲರಿಂದಲೂ ಮೆಚ್ಚುಗೆ ಪಡೆಯಬೇಕು ಎಂದು ಆಸೆ ಪಟ್ಟ ಸತ್ಯಳ ಮುಂದೆ ಅವಳು ಊಹಿಸಿರದ ವಿಚಾರವನ್ನು ಇಡಲು ಹೊರಟಿದ್ದಾರೆ.

ಹೌದು, ಸೀತಮ್ಮ ಕಾರ್ತಿಕ್ ಮತ್ತು ಸತ್ಯಳನ್ನು ಕಾನೂನಿನ ಪ್ರಕಾರ ದೂರ ಮಾಡುವ ಪ್ರಯತ್ನದ ಭಾಗವಾಗಿ ಡಿವೋರ್ಸ್ ಪೇಪರ್ ಗೆ ಸತ್ಯಳಿಂದ ಸಹಿಯನ್ನು ಪಡೆಯಲು, ಅವಳ ಮುಂದೆ ಡಿವೋರ್ಸ್ ಪ್ರಸ್ತಾಪವನ್ನು ಮಾಡಲು ಸಜ್ಜಾಗಿದ್ದಾರೆ. ತಮ್ಮ ಮಗನ ಜೀವನದಿಂದ ಸತ್ಯಳನ್ನು ಶಾಶ್ವತವಾಗಿ ದೂರ ಮಾಡಬೇಕೆಂದು ನಿರ್ಧರಿಸಿರುವ ವಿಚಾರವನ್ನು ಸತ್ಯಳಿಗೆ ತಿಳಿಸಲು ಹೊರಟಿದ್ದಾರೆ. ಸತ್ಯ ಸೀತಮ್ಮ ಹೇಳುವ ವಿಚಾರವನ್ನು ಹೇಗೆ ಸ್ವೀಕರಿಸುತ್ತಾಳೆ? ಮುಂದಿನ ದಿನಗಳಲ್ಲಿ ಸೀತಮ್ಮ ತಾನು ಮಾಡಿದ ನಿರ್ಧಾರ ತಪ್ಪೆಂದು ಅರ್ಥಮಾಡಿಕೊಳ್ಳುವ ಹಾಗೆ ಮಾಡಲು ಸತ್ಯ ಯಶಸ್ವಿಯಾಗುವೇ? ಎನ್ನುವುದು ಪ್ರೇಕ್ಷಕರು ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.

Leave a Reply

Your email address will not be published.