ಯಾವೋನ್ ಮಾತು ಕೇಳಲ್ಲ, ಹೊಡೆದಾಡೋಣ: Boycott ಲೈಗರ್ ಎಂದವರಿಗೆ ವಿಜಯ ದೇವರಕೊಂಡ ಸವಾಲ್!!

Featured-Articles Entertainment Movies News

ಬಾಲಿವುಡ್ ನಲ್ಲಿ ಸಿನಿಮಾಗಳು ತೆರೆಗೆ ಬರುವ ವೇಳೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಅದನ್ನು ಬಾಯ್ ಕಾಟ್ ಮಾಡುವ ಟ್ರೆಂಡ್ ಒಂದು ಸೃಷ್ಟಿಯಾಗಿದೆ. ಇದರ ಪರಿಣಾಮವಾಗಿ ಬಾಲಿವುಡ್ ನ ಹಲವು ಸ್ಟಾರ್ ನಟರ ಸಿನಿಮಾಗಳು ನೆಲ ಕಚ್ಚಿವೆ, ಹೀನಾಯ ಸೋಲಿನ ರುಚಿಯನ್ನು ನೋಡಿವೆ. ವೃತ್ತಿ ಜೀವನದಲ್ಲಿ ತಾವು ಹಿಂದೆಂದೂ ನೋಡಿರದಂತಹ ಸೋಲನ್ನು ಸ್ಟಾರ್ ನಟರು ನೋಡುವಂತಾಗಿದೆ. ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ, ಅಕ್ಷಯ್ ಕುಮಾರ್ ಅಭಿನಯದ ರಕ್ಷಾ ಬಂಧನ್ ಅದಾದ ನಂತರ ನಟಿ ತಾಪ್ಸಿ ಪನ್ನು ಅಭಿನಯದ ದೊಬಾರಾ‌ ಸಿನಿಮಾಗಳು ಇತ್ತೀಚಿಗೆ ಮಕಾಡೆ ಮಲಗಿದ ಬಾಲಿವುಡ್ ಸಿನಿಮಾಗಳಾಗಿವೆ. ಇದಕ್ಕೆ ಪ್ರಮುಖ ಕಾರಣ ಬಾಯ್ ಕಾಟ್ ಟ್ರೆಂಡ್.

ಇದೀಗ ಇದೇ ಟ್ರೆಂಡ್ ದಕ್ಷಿಣದ ನಟ, ಟಾಲಿವುಡ್ ನ ಯುವ ಸ್ಟಾರ್ ನಟ ವಿಜಯ ದೇವರಕೊಂಡ ಅವರ ಬಹುನಿರೀಕ್ಷಿತ ಸಿನಿಮಾ, ಲೈಗರ್ ಗೂ ಕಾಡಲು ಆರಂಭಿಸಿದೆ.‌ ಇಷ್ಟು ದಿನ ಬಾಲಿವುಡ್ ನಟರಿಗೆ, ಅವರ ಸಿನಿಮಾಗಳಿಗೆ ಬಾಯ್ ಕಾಟ್ ಎನ್ನುತ್ತಿದ್ದ ಜನರು ಈಗ ವಿಜಯ ದೇವರಕೊಂಡ ಸಿನಿಮಾಕ್ಕೆ ಬಾಯ್ ಕಾಟ್ ಹೇಳುತ್ತಿರುವುದು ನಿಮಗೆ ಅಚ್ಚರಿ ಎನಿಸಿದರೂ ಸಹಾ ಇದು ನಿಜವಾಗಿದೆ. ಟ್ವಿಟರ್ ನಲ್ಲಿ ಬಾಯ್ ಕಾಟ್ ಲೈಗರ್ ಟ್ರೆಂಡ್ ಆಗಲು ಆರಂಭಿಸಿದೆ. ಇಷ್ಟಕ್ಕೂ ಜನರು ಈ ಸಿನಿಮಾ ಬಾಯ್ ಕಾಟ್ ಮಾಡಲು ಕಾರಣ ಏನು ಎನ್ನುವುದಾದರೆ, ಈ ಸಿನಿಮಾದ ನಿರ್ಮಾಪಕ ಕರಣ್ ಜೋಹರ್ ಎನ್ನುವುದಾಗಿದೆ.

ಇನ್ನು ತನ್ನ ಸಿನಿಮಾಕ್ಕೆ ಬಾಯ್ ಕಾಟ್ ಬಿಸಿ ತಾಗಿದ ಕೂಡಲೇ ನಟ ವಿಜಯ ದೇವರಕೊಂಡ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆ ಅವರು ಟ್ವೀಟ್ ಮಾಡಿ, ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಸಿ‌ನಿಮಾದಲ್ಲಿ ಕೇವಲ ನಟನ ಹೆಸರು ಮಾತ್ರ ಇಲ್ಲ, ಆ ಸಿನಿಮಾ ನಿರ್ಮಾಪಕರ ಹಿಂದೆ 250 ಕುಟುಂಬಗಳು ಇರುತ್ತವೆ ಎಂದು ಟ್ವೀಟ್ ಮಾಡಿ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಪರವಾಗಿ ದನಿಯನ್ನು ಎತ್ತಿ, ನಟ ಅಮೀರ್ ಖಾನ್ ಅವರ ಪರವಾಗಿ ಮಾತನಾಡಿದ್ದರು. ಈಗ ನಟನು ತನ್ನ ಸಿನಿಮಾವನ್ನು ಬಾಯ್ ಕಾಟ್ ಮಾಡಬೇಕು ಎಂದು ಹೇಳುತ್ತಿರುವುದನ್ನು ಕೇಳಿ ಬಹಳ ಖಡಕ್ ಆಗಿ ಮಾತನಾಡುತ್ತಾ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.

ವಿಜಯ್ ದೇವರ ಕೊಂಡ ತಮ್ಮ ಪೋಸ್ಟ್ ನಲ್ಲಿ, ನಾವು ಸರಿಯಾಗಿರುವಾಗ, ನಮ್ಮ ಧರ್ಮ ನಾವು ಮಾಡಿರುವಾಗ, ಯಾವೋನ ಮಾತನ್ನು ಕೇಳಲ್ಲ,‌ ಹೊಡೆದಾಡೋಣ ಎಂದು ಬರೆದುಕೊಂಡು, ಪಕ್ಕದಲ್ಲಿ ಬೆಂಕಿಯ ಇಮೋಜಿ ಯನ್ನು ಹೇಳಿಕೊಂಡಿದ್ದಾರೆ. ಅವರ ಈ ಟ್ವೀಟ್ ಈಗ ವೈರಲ್ ಆಗುತ್ತಾ ಸಾಗಿದೆ. ‌ನಟನ ಈ ಟ್ವೀಟ್ ಗೆ ಮಿಶ್ರ ಪ್ರತಿಕ್ರಿಯೆಗಳು ಹರಿದು ಬರುತ್ತಿದೆ. ಅಭಿಮಾನಿಗಳಾದರೆ ನಟನ ಪರವಾಗಿ ಟ್ವೀಟ್ ಮಾಡಿ, ಬಾಯ್ ಕಾಟ್ ಮಾಡುವವರನ್ನು ಟೀಕೆ ಮಾಡುತ್ತಿದ್ದರೆ, ಇನ್ನೂ ಕೆಲವರು ವಿಜಯ ದೇವರಕೊಂಡ ಬಾಯ್ ಕಾಟ್ ಮಾಡುವವರಿಗೆ ಸವಾಲು ಎಸೆದಿರುವ ಬಗ್ಗೆ ಕಾಮೆಂಟ್ ಮಾಡಿದ್ದಾರೆ.

Leave a Reply

Your email address will not be published.