ಯಾವುದೇ ಕಾರಣಕ್ಕೂ ಆಚಾರ್ಯ ಸಿನಿಮಾ ಹಿಂದಿಗೆ ಡಬ್ ಆಗಲ್ಲ: ರಾಮ್ ಚರಣ್ ಖಡಕ್ ನಿರ್ಧಾರದ ಹಿಂದಿದೆ ಒಂದು ಕಾರಣ!!

0 3

ಪ್ರಸ್ತುತ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಜೋರಾಗಿದೆ‌. ದಕ್ಷಿಣದ ಸಿನಿಮಾಗಳು ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗಿ ಯಶಸ್ಸು ಪಡೆಯುತ್ತಿವೆ. ಅದರಲ್ಲೂ ವಿಶೇಷವಾಗಿ ಬಾಲಿವುಡ್ ನಲ್ಲಿ ತ್ರಿಬಲ್ ಆರ್, ಪುಷ್ಪ ಹಾಗೂ ಕೆಜಿಎಫ್-2 ಸಿನಿಮಾಗಳು ಪಡೆದಿರುವ ಯಶಸ್ಸು ಎಂತದ್ದು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಬಾಲಿವುಡ್ ಕೂಡಾ ದಕ್ಷಿಣದ ಸಿನಿಮಾಗಳ ಅಬ್ಬರಕ್ಕೆ ಬೆಚ್ಚಿ ಬೀಳುವಂತೆ ಆಗಿವೆ. ಬಾಲಿವುಡ್ ಸಿನಿಮಾಗಳನ್ನು ಬದಿಗೊತ್ತಿ ದಕ್ಷಿಣದ ಸಿನಿಮಾಗಳು ಬಾಲಿವುಡ್ ನಲ್ಲಿ ತಮ್ಮ ಪ್ರಾಬಲ್ಯವನ್ನು ಮೆರೆಯುತ್ತಿವೆ.

ಕಲೆಕ್ಷನ್ ವಿಚಾರದಲ್ಲಿ ಬಾಲಿವುಡ್ ಸಿನಿಮಾಗಳೇ ಸೋತು ಸುಣ್ಣವಾಗುತ್ತಿರುವ ವೇಳೆಯಲ್ಲಿ ದಕ್ಷಿಣದ ಸಿನಿಮಾಗಳು ಬಾಲಿವುಡ್ ಬಾಕ್ಸಾಫೀಸಿನಲ್ಲಿ ಸಖತ್ ಕಲೆಕ್ಷನ್ ಮಾಡುತ್ತಿವೆ. ಆದರೆ ಇದೀಗ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಆಚಾರ್ಯ ಮಾತ್ರ ಹೊಸದೊಂದು ನಿರ್ಧಾರಕ್ಕೆ ಮುಂದಾಗಿದೆ. ಆಚಾರ್ಯ ಸಿನಿಮಾವನ್ನು ನಟ ರಾಮ್ ಚರಣ್ ತೇಜಾ ಅವರು ನಿರ್ಮಾಣ ಮಾಡಿದ್ದು, ರಾಮ್ ಚರಣ್ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ಸಹಾ ನಿರ್ವಹಿಸಿದ್ದಾರೆ. ಅಪ್ಪ-ಮಗ ಇಬ್ಬರೂ ಸಿನಿಮಾದಲ್ಲಿ ಇರುವುದು ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟು ಮಾಡಿದೆ.

ಹೀಗೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಆಚಾರ್ಯ ಸಿನಿಮಾವನ್ನು ಹಿಂದಿ ಭಾಷೆಗೆ ಡಬ್ ಮಾಡುವುದಿಲ್ಲ ಎನ್ನುವ ಮಾತನ್ನು ಹೇಳಿದ್ದು, ಸಿನಿಮಾವನ್ನು ಹಿಂದಿಗೆ ಡಬ್ ಮಾಡದೇ ಇರಲು ಕಾರಣವೇನು ಎನ್ನುವುದನ್ನು ಸಹಾ ರಾಮ್ ಚರಣ್ ಅವರು ತಿಳಿಸಿದ್ದು, ಈ ಉತ್ತರವನ್ನು ಕೇಳಿ ಅಭಿಮಾನಿಗಳು ಸಹಾ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಸಿನಿಮಾ ತಂಡದ ಇಂತಹುದೊಂದು ಖಡಕ್ ನಿರ್ಧಾರದ ಹಿಂದಿನ ಆ ಕಾರಣವಾದರೂ ಏನು? ತಿಳಿಯೋಣ ಬನ್ನಿ.

ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾ ಆರಂಭವಾದಾಗಿನಿಂದಲೂ ಕುತೂಹಲವನ್ನು ಮೂಡಿಸಿತ್ತು. ಅಲ್ಲದೇ ಹಿಂದಿ ಭಾಷೆಯ ಜನರು ಸಿನಿಮಾ ನೋಡಲು ಆಸಕ್ತಿ ತಳೆದಿದ್ದರು. ಆದರೆ ಈಗ ಸಿನಿಮಾ ಹಿಂದಿ ಗೆ ಡಬ್ ಆಗುವುದಿಲ್ಲ ಎಂದು ತಿಳಿದರೆ ಅವರಿಗೆ ಬೇಸರವಾಗಬಹುದು ಅಲ್ಲದೇ ಹಿಂದಿಯಿಂದ ಬರುವ ಆದಾಯ ಸಹಾ ಚಿತ್ರ ತಂಡಕ್ಕೆ ಮಿಸ್ ಆಗಬಹುದು. ಆದರೆ ಸಿನಿಮಾ ಡಬ್ ಆಗದಿರಲು ಒಂದು ಪ್ರಮುಖವಾದ ಕಾರಣವಂತೂ ಖಂಡಿತಾ ಇದೆ.

ಸಿನಿಮಾ ಆರಂಭವಾದಾಗಲೇ ನಿರ್ದೇಶಕ ಕೊರಟಾಲ ಶಿವ ಅವರು, ಈ ಸಿನಿಮಾ ವಿಷಯದಲ್ಲಿ ಬಹಳ ಸ್ಪಷ್ಟವಾದ ನಿಲುವನ್ನು ಹೊಂದಿದ್ದರು. ಈ ಸಿನಿಮಾ ಒಂದು ದಕ್ಷಿಣ ಭಾರತದ ಸೊಗಡಿನ ಸಿನಿಮಾ. ಗಡಿಬಿಡಿಯಲ್ಲಿ ಇದನ್ನು ಪ್ಯಾನ್ ಇಂಡಿಯಾ ಸಿನಿಮಾ ಆಗಿಸುವ ಉದ್ದೇಶ ಖಂಡಿತಾ ಇಲ್ಲ ಎಂದಿದ್ದರು. ಹಿಂದಿ ಗೆ ಡಬ್ ಮಾಡಿಲ್ಲ ಎನ್ನುವ ಬೇಸರ ಸಹಾ ನಮಗೆ ಇಲ್ಲ ಎನ್ನುವ ಮಾತುಗಳನ್ನು ರಾಮ್ ಚರಣ್ ತೇಜಾ ಅವರು ಹೇಳಿದ್ದಾರೆ. ಅವರ ಈ ನಿರ್ಧಾರ ಅನೇಕರಿಗೆ ಸರಿ ಎನಿಸಿದೆ.

ದಕ್ಷಿಣ ಭಾರತದ ಸೊಗಡನ್ನು ಹೊಂದಿರುವ ಸಿನಿಮಾಗಳು ಉತ್ತರದಲ್ಲಿ ಡಬ್ ಆಗಿ ಬಿಡುಗಡೆ ಆದಾಗ ಕೆಲವೊಮ್ಮೆ ಉತ್ತರದಲ್ಲಿ ಕೆಲವರು ಅಂತಹ ಸಿನಿಮಾಗಳ ಬಗ್ಗೆ ವ್ಯಂಗ್ಯ ಮಾಡಿರುವ, ಟ್ರೋಲ್ ಮಾಡಿರುವ ಉದಾಹರಣೆಗಳು ಉಂಟು. ಆದ್ದರಿಂದಲೇ ರಾಮ್ ಚರಣ್ ಅವರು ಈಗ ಮಾಡಿರುವ ನಿರ್ಧಾರ ಖಂಡಿತ ಉತ್ತಮವಾಗಿದೆ ಹಾಗೂ ನಮ್ಮ ಸೊಗಡಿನ ಸಿನಿಮಾಗಳು ಬಾಲಿವುಡ್ ಮಂದಿಗೆ ರುಚಿಸದೇ ಹೋಗಬಹುದು.

ಇನ್ನು ಆಚಾರ್ಯ ಸಿನಿಮಾದಲ್ಲಿ ನಟ ರಾಮ್ ಚರಣ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವತಃ ನಿರ್ಮಾಪಕನೂ ಆಗಿರುವ ರಾಮ್ ಚರಣ್ ಅವರಿಗೆ ನಿರ್ದೇಶಕ ಕೊರಟಾಲ ಶಿವ ಈ ಅತಿಥಿ ಪಾತ್ರದ ಬಗ್ಗೆ ಹೇಳಿ, ಆ ಪಾತ್ರವನ್ನು ತನಗೆ ನೀಡಿದ್ದಕ್ಕೆ ರಾಮ್ ಚರಣ್ ಅವರು ಧನ್ಯವಾದಗಳನ್ನು ಸಹಾ ತಿಳಿಸಿದ್ದಾರೆ. ಮೆಗಾಸ್ಟಾರ್ ಅಭಿಮಾನಿಗಳು ಆಚಾರ್ಯ ಸಿನಿಮಾದ ಬಿಡುಗಡೆಗಾಗಿ ಬಹಳಷ್ಟು ಕಾತರರಾಗಿದ್ದು, ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.

Leave A Reply

Your email address will not be published.