ಯಾರು ಗುರು ಇವ್ರನ್ನ ನ್ಯಾಷನಲ್ ಕ್ರಷ್ ಎಂದಿದ್ದು: ಹಿಂದೀಲಿ ಮಾತಾಡಿ ಹಿಗ್ಗಾಮುಗ್ಗಾ ಟ್ರೋಲ್ ಆದ ರಶ್ಮಿಕಾ

Entertainment Featured-Articles News

ರಶ್ಮಿಕಾ ಮಂದಣ್ಣ‌ ಅದೃಷ್ಟ ಸಿನಿಮಾ ರಂಗದಲ್ಲಿ ಅರಳಿದ್ದು ಕಿರಿಕ್ ಪಾರ್ಟಿಯಿಂದ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದ ನಂತರ ತೆಲುಗಿಗೆ ಹಾರಿದ ರಶ್ಮಿಕಾ ಮಂದಣ್ಣ ಅಲ್ಲಿ ಅಲ್ಪ ಕಾಲದಲ್ಲೇ ಸ್ಟಾರ್ ಆಗಿ ಬಿಟ್ಟರು. ಅನಂತರ ತಮಿಳು, ಹಿಂದಿಯ ಕಡೆಗೂ ಸಾಗಿದ ರಶ್ಮಿಕಾ ಪಯಣ ಯಶಸ್ಸಿನ ನಾಗಾಲೋಟ ಮಾಡಿದರೂ ಕೂಡಾ ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ರಶ್ಮಿಕಾರನ್ನು ಟ್ರೋಲ್ ಮಾಡುವುದು ಮಾತ್ರ ಭರ್ಜರಿಯಾಗಿ ನಡೆಯುತ್ತಿದೆ.
ಅದರಲ್ಲೂ ಕರ್ನಾಟಕದಲ್ಲಿ ರಶ್ಮಿಕಾ ಟ್ರೋಲಿಂಗ್ ತುಸು ಹೆಚ್ಚಾಗಿಯೇ ನಡೆಯುತ್ತದೆ.

ಆದರೆ ಈ ಬಾರಿ ಸ್ವಲ್ಪ ಭಿನ್ನವಾದ ಟ್ರೋಲಿಂಗ್ ನಡೆದಿದೆ. ಹೌದು ರಶ್ಮಿಕಾ ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಹಿಂದಿಯಲ್ಲೂ ಸಹಾ ಮೂಡಿ ಬಂದಿದೆ. ಪುಷ್ಪ ಸಿನಿಮಾದ ಹಿಂದಿ ವರ್ಶನ್ ನ ಪ್ರಮೋಶನ್ ವೇಳೆ ಹೇಳಿದ ಡೈಲಾಗ್ ನ ಒಂದು ವೀಡಿಯೋವನ್ನು ಬಾಲಿವುಡ್ ನ ಫ್ಯಾಷನ್ ಫೋಟೋಗ್ರಫರ್ ವೈರಲ್ ಭಯಾನಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋ ನೋಡಿದ ಮೇಲೆ ನಟಿ ರಶ್ಮಿಕಾ ಬಗ್ಗೆ ಬಹುತೇಕ ನೆಗೆಟಿವ್ ಕಾಮೆಂಟ್ ಗಳೇ ಹರಿದು ಬರುತ್ತಿವೆ.

ನೆಟ್ಟಿಗರೊಬ್ಬರು, “ಗೊತ್ತಿಲ್ಲ ಯಾವ ಆ್ಯಂಗಲ್ ನಲ್ಲಿ ಜನ ಇವ್ರನ್ನು ನ್ಯಾಷನಲ್ ಕ್ರಷ್ ಅಂತಾರೋ” ಎಂದು ಕಾಮೆಂಟ್ ಹಾಕಿದ್ದಾರೆ. ಮತ್ತೊಬ್ಬರು “ಅತಿಯಾದರೆ ಎಲ್ಲಾ ಓವರ್ ಅನ್ಸುತ್ತೆ, ಈ ನಟಿ ಇತ್ತೀಚಿಗೆ ಅದನ್ನೇ ಮಾಡ್ತಾ ಇದ್ದಾರೆ” ಎಂದು ಟೀಕಿಸಿದ್ದಾರೆ. ಒಬ್ಬರಂತೂ “ಏನೋ ಅದೃಷ್ಟದಿಂದ ಗೀತ ಗೋವಿಂದಂ,‌ ಡಿಯರ್ ಕಾಮ್ರೇಡ್ ನಂತಹ ಸಿನಿಮಾ ಸಿಕ್ಕಿತು, ಆದ್ರೆ ತಮಿಳಲ್ಲಿ ಇನ್ನೂ ಚೆನ್ನಾಗಿರೋ ನಟಿಯರು ಇರುವಾಗ ಇವ್ರು ಹೇಗೇ ನ್ಯಾಷನಲ್ ಕ್ರಷ್ ಆಗ್ತಾರೆ” ಎಂದು ಅಸಮಾಧಾನ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *