ಯಾರದು ಈ ಷಡ್ಯಂತ್ರ: ಸಮಂತಾ ಜೊತೆ ಕೆಲಸ ಮಾಡಲು ಸ್ಟಾರ್ ನಿರ್ದೇಶಕರು ನೋ ಅಂತಿರೋದ್ಯಾಕೆ??

Written by Soma Shekar

Published on:

---Join Our Channel---

ವಿಚ್ಚೇದನದ ನಂತರ ನಟಿ ಸಮಂತಾ ಮತ್ತೆ ಸಿನಿಮಾಗಳ ಕಡೆಗೆ ಮುಖ ಮಾಡಿದ್ದಾರೆ. ಜೀವನದಲ್ಲಿ ಆದ ದೊಡ್ಡ ಬದಲಾವಣೆಯ ನಂತರ ಅದರಿಂದ ಹೊರ ಬರಲು ಅವರು ಮನೆಯಲ್ಲಿ ಶ್ವಾನಗಳನ್ನು ಸಾಕುತ್ತಾ, ಹೊರಗೆ ಸ್ನೇಹಿತರ ಜೊತೆಗೆ ಸೈಕ್ಲಿಂಗ್ ಹೀಗೆ ಸಮಯವನ್ನು ಕಳೆಯುವಾಗಲೇ ಇನ್ನೊಂದೆಡೆ ಸಮಂತಾ ಕುರಿತಾಗಿ ಸಾಕಷ್ಟು ಗಾಸಿಪ್ ಗಳು ಹರಿದಾಡಿವೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಒಂದು ಹೊಸ ಗಾಸಿಪ್ ಹುಟ್ಟಿಕೊಂಡಿದೆ. ಸಮಂತಾ ಜೊತೆ ಕೆಲಸ ಮಾಡಲು ತೆಲುಗಿನ ಕೆಲವು ಖ್ಯಾತ ನಿರ್ದೇಶಕರು ನೋ ಎಂದಿದ್ದಾರೆನ್ನಲಾಗಿದೆ.

ಸಮಂತಾ ಜೊತೆ ಸಿನಿಮಾ ಮಾಡಲು ನಿರ್ದೇಶಕರು ನೋ ಎನ್ನುವುದರ ಹಿಂದೆ ಯಾರ ಕೈವಾಡ ಇದೆ ಎನ್ನುವ ಚರ್ಚೆಗಳು ಪ್ರಾರಂಭವಾಗಿದೆ. ಕೆಲವೇ ದಿನಗಳ ಹಿಂದೆ ಸಮಂತಾ ಖಿಲಾಡಿ ಸಿನಿಮಾ ನಿರ್ಮಾಪಕರು ಸಮಂತಾ ಜೊತೆ ಒಂದು ಸಿನಿಮಾ ಘೋಷಣೆಯನ್ನು ಮಾಡಿದ್ದಾರೆ. ಅಲ್ಲದೇ ತೆಲುಗಿನ ಶಿವಲೆಂಕಾ ಕೃಷ್ಣ ಪ್ರಸಾದ್ ಅವರು ಸಮಂತಾ ಜೊತೆ ಸಿನಿಮಾ ಘೋಷಣೆಯನ್ನು ಮಾಡಿದ್ದಾರೆ. ಈ ಎರಡೂ ಸಿನಿಮಾಗಳು ಸಹಾ ತೆಲುಗು, ತಮಿಳಿನಲ್ಲಿ ಮೂಡಿ ಬರಲಿದೆ ಎಂದು ತಿಳಿದು ಬಂದಿದೆ.

ಆದರೆ ಇದೇ ವೇಳೆ ಸಮಂತಾಗೆ ಅನ್ಯ ತೆಲುಗು ನಿರ್ದೇಶಕರ ಜೊತೆಗೆ ಕೆಲಸ ಮಾಡಲು ಆಗುತ್ತಿಲ್ಲ ಎನ್ನಲಾಗುತ್ತಿದೆ. ಕೆಲವು ನಿರ್ದೇಶಕರು ಸಮಂತಾ ಅವರಿಗೆ ಕಥೆಗಳನ್ನು ಹೇಳಿದ್ದರೂ, ಅದೇ ಹಳೆಯ ಲವ್ ಸ್ಟೋರಿಗಳಂತಹ ಕಥೆಗಳನ್ನು ಸಮಂತಾ ಒಪ್ಪಿಲ್ಲ ಎನ್ನಲಾಗಿದೆ‌. ಕೆಲವು ಸ್ಟಾರ್ ನಿರ್ದೇಶಕರಾದರೆ ಸಮಂತಾ ಜೊತೆ ಕೆಲಸವನ್ನು ಮಾಡಲು ಹಿಂದೇಟು ಹಾಕಿದ್ದಾರೆನ್ನಲಾಗಿದೆ. ಇದಕ್ಕೆ ಸಹಾ ಒಂದು ಕಾರಣವಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಏನು ಆ ಕಾರಣ ತಿಳಿಯೋಣ.

ಕೆಲವು ನಿರ್ದೇಶಕರ ಪ್ರಕಾರ ಸಮಂತಾ ಈಗ ತಾನೇ ವಿಚ್ಚೇದನ ಪಡೆದಿದ್ದು, ಅವರ ಮೇಲೆ ಜನರಲ್ಲಿ ನಾನ ಅಭಿಪ್ರಾಯಗಳು ಹುಟ್ಟಿಕೊಂಡಿರುತ್ತದೆ. ಇಂತಹ ಸಂದರ್ಭದಲ್ಲಿ ಅವರೊಡನೆ ಸಿನಿಮಾ ಮಾಡಿದರೆ ಜನರು ಅದನ್ನು ನೋಡದೆಯೂ ಇರಬಹುದು ಎನ್ನುವ ಅಭಿಪ್ರಾಯ ಕೆಲವು ನಿರ್ದೇಶಕರದ್ದಾಗಿದೆ ಎನ್ನಲಾಗಿದೆ. ಆದರೆ ಇದೇ ವೇಳೆ ಅಭಿಮಾನಿಗಳು ಮಾತ್ರ ಇದರ ಹಿಂದೆ ಕೆಲವರ ಕೈವಾಡ ಇದೆ ಎಂದು ಆರೋಪವನ್ನು ಮಾಡಿದ್ದಾರೆ.

Leave a Comment