ಯಶ್ ಮುಂದಿನ ಸಿನಿಮಾ ಈ ಬ್ಯಾನರ್ ಅಡಿಯಲ್ಲಿ!! ಹೊರ ಬಿತ್ತು ರೋಚಕ ಮಾಹಿತಿ

Entertainment Featured-Articles News

ಕೆಜಿಎಫ್ 2 ಸಿನಿಮಾದ ನಂತರ ಚಿತ್ರರಂಗದಲ್ಲಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳಲ್ಲಿ ಇರುವ ಪ್ರಶ್ನೆಗಳು, ಯಶ್ ಅವರ ಮುಂದಿನ ಸಿನಿಮಾ ಯಾವುದು? ಈ ಸಿನಿಮಾವನ್ನು ಯಾರು ನಿರ್ದೇಶನ ಮಾಡಲಿದ್ದಾರೆ? ಯಾವ ನಿರ್ಮಾಣ ಸಂಸ್ಥೆಯು ಯಶ್ ಅವರ ಹೊಸ ಸಿನಿಮಾಕ್ಕೆ ಬಂಡವಾಳವನ್ನು ಹೂಡಲಿದೆ? ಎನ್ನುವುದು. ಇಂತಹ ಪ್ರಶ್ನೆಗಳು ಅನೇಕ ಸಂದರ್ಭಗಳಲ್ಲಿ ಯಶ್ ಅವರಿಗೂ ಕೂಡಾ ಎದುರಾಗಿದೆ. ಆ ಸಂದರ್ಭದಲ್ಲಿ ಅವರು ತಮ್ಮ ಹೊಸ ಸಿನಿಮಾದ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡದೆ ಹೋದರು ಕೆಲವೊಂದು ಸುಳಿವುಗಳನ್ನು ಕೊಟ್ಟಿದ್ದರು.

ಯಶ್ ಅವರು ಕಥೆ ಗಟ್ಟಿಯಾಗುತ್ತಿದೆ, ದೊಡ್ಡ ಕನಸನ್ನು ಕಾಣುತ್ತಿದ್ದೇವೆ, ಸಮಯ ಬಂದಾಗ ಹೇಳುವುದಾಗಿ ಪ್ರತಿಕ್ರಿಯೆಯನ್ನು ನೀಡಿದ್ದರು. ಆದರೆ ಈಗ ಯಶ್ ಅವರ ಮುಂದಿನ ಸಿನಿಮಾ ಯಾವುದು ? ಎನ್ನುವ ವಿಚಾರವಾಗಿ ಕೆಲವೊಂದು ಸುದ್ದಿಗಳು ಮಾಧ್ಯಮಗಳಲ್ಲಿ ಹರಡಿದೆ. ಮಾಧ್ಯಮ ವರದಿಗಳ ಪ್ರಕಾರ ಗಾಂಧಿನಗರದಲ್ಲಿ ದೊಡ್ಡ ಬಜೆಟ್ ಸಿನಿಮಾಗಳನ್ನು ಮಾಡುವ ಮತ್ತು ಆರ್ ಆರ್ ಆರ್ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಿಸಿರುವ ಕೆವಿಎನ್ ಪ್ರೊಡಕ್ಷನ್ಸ್ ಯಶ್ ಅವರ ಮುಂದಿನ ಸಿನಿಮಾ ನಿರ್ಮಾಣ ಮಾಡಲಿದೆ ಎಂದು ಹೇಳಲಾಗಿದೆ.

ಹೊಸ ಸಿನಿಮಾದ ವಿಚಾರವಾಗಿ ಮಾತುಕತೆಗಳು ಈಗಾಗಲೇ ಗೋವಾದಿಂದ ಪ್ರಾರಂಭವಾಗಿದೆ ಎನ್ನಲಾಗಿದ್ದು, ಕೆಲವೇ ದಿನಗಳ ಹಿಂದೆಯಷ್ಟೇ ನಟ ರಾಕಿಂಗ್ ಸ್ಟಾರ್ ಯಶ್ ಅವರು ಗೋವಾದ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದರು. ಅವರು ಗೋವಾ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಆ ಸಂದರ್ಭದಲ್ಲಿ ಯಶ್ ಅವರ ಜೊತೆಗೆ ಕೆವಿಎನ್ ಪ್ರೊಡಕ್ಷನ್ ವೆಂಕಟ್ ಕೊನಂಕ ಅವರೂ ಸಹ ಕಾಣಿಸಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಹೊಸ ಸಿನಿಮಾದ ಕುರಿತಾದ ಒಂದು ಹಂತದ ಮಾತುಕತೆ ಮುಗಿದಿದೆ ಎಂದು ಹೇಳಲಾಗುತ್ತಿದ್ದು, ಒಂದು ವೇಳೆ ಕೆವಿಎನ್ ಪ್ರೊಡಕ್ಷನ್ ಯಶ್ ಅವರ ಹೊಸ ಸಿನಿಮಾ ನಿರ್ಮಾಣ ಮಾಡುವುದಾದರೆ, ಈ ಸಿನಿಮಾವನ್ನು ನಿರ್ದೇಶಕ ನರ್ತನ ಅವರು ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಕುರಿತಾಗಿ ಕೆವಿಎನ್ ಪ್ರೊಡಕ್ಷನ್ ಆಗಲೀ ಅಥವಾ ನಟ ಯಶ್ ಅವರಾಗಲೀ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

Leave a Reply

Your email address will not be published.