ಯಶ್ ಫೋಟೋ ಶೇರ್ ಮಾಡಿದ ಕಂಗನಾ: ಬಾಲಿವುಡ್ ಇವರನ್ನು ಹಾಳು ಮಾಡದೇ ಇರಲಿ ಎಂದಿದ್ದೇಕೆ??

Written by Soma Shekar

Published on:

---Join Our Channel---

ಪ್ರತಿ ನಿತ್ಯ ಒಂದಲ್ಲಾ ಒಂದು ಕಾಂ ಟ್ರ ವರ್ಸಿ ಆಗುವ ಹೇಳಿಕೆಗಳನ್ನು ನೀಡುವ ಮೂಲಕ, ಸೋಶಿಯಲ್ ಮೀಡಿಯಾ ಪೋಸ್ಟ್ ಗಳನ್ನು ಹಾಕುವ ಮೂಲಕವೇ ಬಾಲಿವುಡ್ ನಟಿ ಕಂಗನಾ ರಣಾವತ್ ದೊಡ್ಡ ಸದ್ದು, ಸುದ್ದಿ ಮಾಡುವುದುಂಟು. ವಿ ವಾ ದಗಳ ಕಾರಣದಿಂದಾಗಿಯೇ ಕಾಂ ಟ್ರ ವರ್ಸಿಗಳಿಗೆ ಕೇರಾಫ್ ಆಫ್ ಅಡ್ರೆಸ್ ಆಗಿದ್ದಾರೆ ನಟಿ ಕಂಗನಾ. ಈ ಹಿಂದೆ ಬಾಲಿವುಡ್ ಮತ್ತು ಮಹಾರಾಷ್ಟ್ರ ಸರ್ಕಾರವನ್ನು ಎದುರು ಹಾಕಿಕೊಂಡಿದ್ದ ಕಂಗನಾ ಇದೀಗ ಹೊಸ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ದಕ್ಷಿಣದ ಸ್ಟಾರ್ ಹೀರೋ ಗಳನ್ನು ಹಾಡಿ ಹೊಗಳಿದ್ದಾರೆ.

ವಿವರಗಳಿಗೆ ಹೋದರೆ ಕಂಗನಾ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ದಕ್ಷಿಣದ ಸೆನ್ಸೇಷನಲ್ ಹೀರೋಗಳಾಗಿರುವ ಕನ್ನಡದ ನಟ ಯಶ್ ಮತ್ತು ತೆಲುಗಿನ ನಟ ಅಲ್ಲು ಅರ್ಜುನ್ ಇಬ್ಬರ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಪುಷ್ಪ ಸಿ‌ನಿಮಾದ ಸಮಂತಾ ಹೆಜ್ಜೆ ಹಾಕಿರುವ ಐಟಂ ಸಾಂಗ್ ನ ಹಾಡನ್ನು ಹಿನ್ನೆಲೆಯಲ್ಲಿ ಹಾಕಿದ್ದು, ದಕ್ಷಿಣದ ಹೀರೋಗಳ ಬಗ್ಗೆ ಕೆಲವೊಂದು ಅಂಶಗಳನ್ನು ಬರೆದು ಏಕೆ ಅವರು ದೊಡ್ಡ ಸ್ಟಾರ್ ಗಳು ಎಂದು ಕಂಗನಾ ಬರೆದಿದ್ದಾರೆ.

ಕಂಗನಾ ಮೂರು ಅಂಶಗಳನ್ನು ಬರೆದಿದ್ದಾರೆ. ಮೊದಲನೆಯದಾಗಿ, ದಕ್ಷಿಣದ ಈ ನಾಯಕರು ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದ್ದಾರೆ. ಎರಡನೆಯದಾಗಿ ಈ ಹೀರೋಗಳು ತಮ್ಮ ಕುಟುಂಬಗಳನ್ನು ಪ್ರೀತಿಸುತ್ತಾರೆ, ಸಂಬಂಧಗಳ ವಿಷಯದಲ್ಲಿ ಪಾಶ್ಚಿಮಾತ್ಯರನ್ನು ಅನಸರಿಸದೇ, ತಮ್ಮ ಸಂಬಂಧಗಳನ್ನು ಸದಾ ಕಾಪಾಡಿಕೊಳ್ಳುತ್ತಾರೆ. ಮೂರನೆಯದಾಗಿ ಅವರ ವೃತ್ತಿ ನೈಪುಣ್ಯತೆ ಮತ್ತು ಅಭಿರುಚಿ ಅಸಾಮಾನ್ಯವಾದುದಾಗಿದೆ.

ಹೀಗೆ ಮೇಲಿನ ಮೂರು ಅಂಶಗಳ ಮೂಲಕ ದಕ್ಷಿಣದ ನಾಯಕರನ್ನು ಹೊಗಳಿದ ಕಂಗನಾ, ಕೊನೆಯಲ್ಲಿ ಒಂದು ಕಾಂ ಟ್ರ ವರ್ಸಿ ಹೇಳಿಕೆ ನೀಡುತ್ತಾ ಬಾಲಿವುಡ್ ಈ ನಾಯಕ ನಟರನ್ನು ಹಾಳು ಮಾಡಲು ಅವಕಾಶವನ್ನು ನೀಡಬಾರದು ಎಂದು ಹೇಳಿದ್ದಾರೆ. ಕಂಗನಾ ಪರೋಕ್ಷವಾಗಿ ಬಾಲಿವುಡ್ ಗೆ ಟಾಂಗ್ ನೀಡಿರುವುದು ಈಗ ಚರ್ಚೆಗೆ ಕಾರಣವಾಗಿದೆ. ಇದೇ ವೇಳೆ ದಕ್ಷಿಣದ ಜನರು ಕಂಗನಾ ಪೋಸ್ಟ್ ನೋಡಿ ಖುಷಿಯಾಗಿದ್ದಾರೆ.

Leave a Comment