HomeEntertainmentಸಲ್ಮಾನ್ ಖಾನ್ ಜಾಗಕ್ಕೆ ಯಶ್: ಸಲ್ಮಾನ್ ಗೆ ಕೊಕ್ ಕೊಟ್ಟು KGF ಸ್ಟಾರ್ ಗೆ ಮಣೆ...

ಸಲ್ಮಾನ್ ಖಾನ್ ಜಾಗಕ್ಕೆ ಯಶ್: ಸಲ್ಮಾನ್ ಗೆ ಕೊಕ್ ಕೊಟ್ಟು KGF ಸ್ಟಾರ್ ಗೆ ಮಣೆ ಹಾಕಿದ ಪ್ರತಿಷ್ಠಿತ ಬ್ರಾಂಡ್

ಸಿನಿಮಾ ನಟರ ಜನಪ್ರಿಯತೆ ಹಾಗೂ ಸ್ಟಾರ್ ಡಂ ಹೆಚ್ಚಿದ ಹಾಗೆ ಅವರನ್ನು ಸುಪ್ರಸಿದ್ಧ ಕಂಪನಿಗಳು ತಮ್ಮ ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್ ಗಳಾಗಿ ಮಾಡುವುದು ಹಿಂದಿನಿಂದ ನಡೆದು ಬರುತ್ತಿದೆ. ಮೊದಲೆಲ್ಲಾ ಬಾಲಿವುಡ್(Bollywood) ಸ್ಟಾರ್ ಗಳಿಗೆ ಮಣೆ ಹಾಕುತ್ತಿದ್ದ ಜನಪ್ರಿಯ ಕಂಪನಿಗಳು ಈಗ ದಕ್ಷಿಣದ ಸ್ಟಾರ್ ಗಳ ಕಡೆಗೆ ತಮ್ಮ ಗಮನ ಹರಿಸಿದೆ. ಏಕೆಂದರೆ ಪ್ಯಾನ್ ಇಂಡಿಯಾ(Pan India cinema) ಸಿನಿಮಾಗಳ ನಂತರ ದಕ್ಷಿಣದ ನಟರು(South Stars) ಬಾಲಿವುಡ್ ಮಂದಿಗಿಂತ ಹೆಚ್ಚು ಜನಪ್ರಿಯತೆ ಪಡೆದ ಸ್ಟಾರ್ ಗಳಾಗಿ ಹೊರಹೊಮ್ಮುತ್ತಿರುವುದು ಮಾತ್ರವೇ ಅಲ್ಲದೇ ಅಭಿಮಾನಿಗಳಿಂದ ಪ್ರೀತಿ ಮತ್ತು ಅಪಾರ ಗೌರವಗಳನ್ನು ಸಹಾ ಪಡೆದು ಮಿಂಚುತ್ತಿದ್ದಾರೆ.

ಕೆಜಿಎಫ್(KGF series) ಸರಣಿ ಸಿನಿಮಾಗಳ ನಂತರ ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್(Yash) ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ದೊಡ್ಡ ಮಟ್ಟದ ಜನಪ್ರಿಯತೆ ಮತ್ತು ಸ್ಟಾರ್ ಡಂ ಪಡೆದುಕೊಂಡಿದ್ದಾರೆ. ಈಗ ಅದೇ ಜನಪ್ರಿಯತೆ ಹಾಗೂ ಸ್ಟಾರ್ ಡಂ ನ ಹಿನ್ನೆಲೆಯಲ್ಲಿ ಯಶ್ ಅವರು ಬಾಲಿವುಡ್ ನ ಸ್ಟಾರ್ ನಟನ ಜಾಗಕ್ಕೆ ಸುಪ್ರಸಿದ್ಧ ಪಾನೀಯ ಕಂಪನಿಯೊಂದರ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಹೌದು, ಯಶ್ ಅವರು ಬಾಲಿವುಡ್ ನ ಸಲ್ಮಾನ್ ಖಾನ್(Salman Khan) ಜಾಗಕ್ಕೆ ಈಗ ಎಂಟ್ರಿ ನೀಡಿದ್ದು, ವೀಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಾ ಸಾಗಿದೆ.

ಹೌದು, ವಿಶ್ವ ಪ್ರಸಿದ್ಧ ಬ್ರಾಂಡ್ ಆಗಿರುವ ಪೆಪ್ಸಿ ಗೆ (Pepsi) ಇದೀಗ ರಾಕಿಂಗ್ ಸ್ಟಾರ್ ಯಶ್ ಅವರು ಬ್ರಾಂಡ್ ಅಂಬಾಸಿಡರ್(Yash Pepsi Ambassador) ಆಗಿ ಆಯ್ಕೆಯಾಗಿದ್ದಾರೆ. ಕೆಜಿಎಫ್-2(KGF 2) ಸಿನಿಮಾ ನಂತರ ನಟ ಯಶ್ ಮುಂದಿನ ಸಿನಿಮಾ ಯಾವಾಗ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಇದೀಗ ನಟ ಯಶ್ ಅವರು ಹೊಸದೊಂದು ಸರ್ಪ್ರೈಸ್ ನೀಡಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೆಪ್ಸಿ ಜಾಹೀರಾತಿನ ಒಂದು ಸಣ್ಣ ವೀಡಿಯೋ ತುಣುಕನ್ನು ಶೇರ್ ಮಾಡಿಕೊಂಡಿದ್ದು, ಅದನ್ನು ನೋಡಿ ಅವರ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ.

ಯಶ್ ತಮ್ಮ ಪೋಸ್ಟ್ ನಲ್ಲಿ, ನಾನು ಪೆಪ್ಸಿ ಬ್ರಾಂಡ್ ಜೊತೆಗೆ ತೊಡಗಿಕೊಂಡಿರುವುದು ಮತ್ತು ಪೆಪ್ಸಿ ಬ್ರಾಂಡ್ ನ ಫೇಸ್ ಆಗಿ ಅವರೊಟ್ಟಿಗೆ ಸೇರುವುದಕ್ಕೆ ಉತ್ಸುಕನಾಗಿದ್ದೇನೆ. ನಾನು ಜೀವನವನ್ನು ಪರಿಪೂರ್ಣವಾಗಿ ಜೀವಿಸುತ್ತೇನೆ ಮತ್ತು ಅದರ ಪ್ರತಿ ಕ್ಷಣವನ್ನು ಹೆಚ್ಚು ಬಳಸಿಕೊಳ್ಳುವೆನು. ಹೊಸ ವರ್ಷವನ್ನು ಪ್ರಾರಂಭಿಸಲು ಇದೊಂದು ಉತ್ತಮವಾದ ಮಾರ್ಗವಾಗಿದೆ ಮತ್ತು ನನ್ನ ಅಭಿಮಾನಿಗಳು ನನ್ನನ್ನು ಹೊಸ ಅವತಾರದಲ್ಲಿ ನೋಡುವವರೆಗೆ ನಾನು ಕಾಯಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.

ನಟ ಶೇರ್ ಮಾಡಿಕೊಂಡ ಪೋಸ್ಟ್ ಗೆ ಅಭಿಮಾನಿಗಳು ಬಹಳ ಸಂತೋಷದಿಂದ ಕಾಮೆಂಟ್ ಗಳನ್ನು ಮಾಡಿದ್ದಾರೆ. 2022 ರಲ್ಲಿ ಈ ಸುಪ್ರಸಿದ್ಧ ಪಾನೀಯ ಬ್ರಾಂಡ್ ಗೆ ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್(Salman Khan Pepsi) ರಾಯಭಾರಿಯಾಗಿದ್ದರು. ಆದರೆ ಈಗ 2023 ರಲ್ಲಿ ಯಶ್ ಪೆಪ್ಸಿಯ ರಾಯಭಾರಿ ಆಗಿರುವುದನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಸಲ್ಮಾನ್ ಕೈಯಿಂದ ಜಾರಿದ ಪೆಪ್ಸಿ ಈಗ ಯಶ್(Yash ) ಕೈ ಸೇರಿರುವುದು ಸಹಜವಾಗಿಯೇ ಅಭಿಮಾನಿಗಳಿಗೆ ಬಹಳ ಸಂತೋಷವನ್ನು ಉಂಟು ಮಾಡಿದೆ.

- Advertisment -