ಮೌನ ಮುರಿದ ನಟಿ ಭಾವನಾ ಮೆನನ್: ಲೈಂಗಿಕ ಕಿರುಕುಳದ ಕರಾಳ ಅನುಭವ ತೆರೆದಿಟ್ಟ ನಟಿ

Written by Soma Shekar

Published on:

---Join Our Channel---

ದಕ್ಷಿಣ ಸಿನಿಮಾ ರಂಗದ ನಾಲ್ಕು ಭಾಷೆಗಳಲ್ಲಿ ನಟಿಸಿರುವ, ಸ್ಯಾಂಡಲ್ವುಡ್ ನಲ್ಲಿ ಹೆಚ್ಚು ಜನಪ್ರಿಯತೆಯನ್ನು ಹಾಗೂ ಬೇಡಿಕೆಯನ್ನು ಪಡೆದಿರುವ ನಟಿ ಭಾವನಾ ಮೆನನ್. ಈ ಜನಪ್ರಿಯ ನಟಿಗೆ 2017 ರಲ್ಲಿ ಲೈಂ ಗಿ ಕ ಕಿ‌ ರು ಕುಳವನ್ನು ನೀಡಲಾಗಿತ್ತು. ಆಗ ನಟಿಯು ಚಿತ್ರೀಕರಣವನ್ನು ಮುಗಿಸಿಕೊಂಡು ಬರುತ್ತಿದ್ದ ವೇಳೆ ಅಂದರೆ ಕೇರಳದ ತ್ರಿಶೂರ್ ನಿಂದ ಕೊಚ್ಚಿಗೆ ಪ್ರಯಾಣ ಮಾಡುತ್ತಿದ್ದ ವೇಳೆಯಲ್ಲಿ ನಟಿಯನ್ನು ಅಪಹರಣ ಮಾಡಲಾಗಿತ್ತು. ಅಲ್ಲದೇ ಸುಮಾರು ಎರಡು ಗಂಟೆಗಳ ಕಾಲ ಅವರಿಗೆ ಕಾರಿನಲ್ಲೇ ಕಿ ರು ಕು ಳವನ್ನು ನೀಡಲಾಗಿದ್ದ‌ ವಿಷಯ ದೊಡ್ಡ ಸುದ್ದಿಯಾಗಿತ್ರು.

ನಟಿಯ ಅಪಹರಣ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ಮಲೆಯಾಳಂ ನಟ ದಿಲೀಪ್ ಮೇಲೆ ಗಂಭೀರವಾದ ಆ ರೋ ಪವನ್ನು ಮಾಡಲಾಗಿತ್ತು. ಈ ಘಟನೆ ನಡೆದು ಐದು ವರ್ಷಗಳು ಕಳೆದಿವೆ. ಈ ವೇಳೆ ನಟಿ ಭಾವನಾ ಅವರು ಅಂದಿನ ಕರಾಳ ಅನುಭವದ ಬಗ್ಗೆ ಯಾರ ಹೆಸರನ್ನೂ ಹೇಳದೇ, ಯಾರ ಮೇಲೆ ಆ ರೋ ಪವನ್ನು ಸಹಾ ಮಾಡದೇ, ಆ ಘಟನೆಯ ಬಗ್ಗೆ ತಮ್ಮ ಮನಸ್ಸಿನಲ್ಲಿರುವ ಆಲೋಚನೆಗಳನ್ನು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.

ನಟಿ ತಮ್ಮ ಪೋಸ್ಟ್ ನಲ್ಲಿ, “ಇದು ಸುಲಭದ ಪ್ರಯಾಣವಲ್ಲ, ಬ ಲಿ ಪ ಶು ವಾಗಿ ಬದುಕುಳಿದ ಪ್ರಯಾಣ. ಈಗ 5 ವರ್ಷಗಳಿಂದ, ನನ್ನ ಮೇಲೆ ಮಾಡಿದ ಹ ಲ್ಲೆ ಯ ಭಾರದಲ್ಲಿ ನನ್ನ ಹೆಸರು ಮತ್ತು ನನ್ನ ಗುರುತನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗಿದೆ, ನಾನು ಅಪರಾಧ ಮಾಡಿಲ್ಲ, ಆದರೂ ನನ್ನನ್ನು ಅವಮಾನಿಸಲು, ಮೌನಗೊಳಿಸಲು ಮತ್ತು ದೂರವಿರಿಸುವ ಸಾಕಷ್ಟು ಪ್ರಯತ್ನಗಳು ನಡೆದಿವೆ. ಆದರೆ ಅಂತಹ ಸಮಯದಲ್ಲಿ ನನ್ನ ಧ್ವನಿಯನ್ನು ಜೀವಂತವಾಗಿಡಲು ಕೆಲವರು ಮುಂದಾದರು.

ಈಗ ಅನೇಕ ಧ್ವನಿಗಳು ನನ್ನ ಪರವಾಗಿ ಮಾತನಾಡುವುದನ್ನು ನಾನು ಕೇಳಿದಾಗ ನನಗೆ ನ್ಯಾಯಕ್ಕಾಗಿ ನಡೆಯುವ ಈ ಹೋರಾಟದಲ್ಲಿ ನಾನೊಬ್ಬಳೇ ಇಲ್ಲ ಎನ್ನುವುದು ತಿಳಿದಿದೆ. ನ್ಯಾಯ ಸಿಗಲಿ, ತಪ್ಪಿತಸ್ಥರಿಗೆ ಶಿ ಕ್ಷೆಯಾಗಲಿ, ಇನ್ನಾರಿಗೂ ಇಂತಹ ಅಗ್ನಿಪರೀಕ್ಷೆ ಎದುರಾಗದಂತೆ ನೋಡಿಕೊಳ್ಳಲು ಈ ಪ್ರಯಾಣವನ್ನು ಮುಂದುವರಿಸುತ್ತೇನೆ. ನನ್ನೊಂದಿಗೆ ನಿಂತಿರುವ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿಗಾಗಿ ಎಂದು ಬರೆದುಕೊಂಡಿದ್ದಾರೆ.

Leave a Comment