ಮೌನವಾಗಿದ್ದೇನೆ ಎಂದರೆ ಕೈಲಾಗದವಳು ಎಂದಲ್ಲ: ನಟಿ ಸಮಂತಾ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ??

Entertainment Featured-Articles News

ಪ್ರಸ್ತುತ ನಟಿ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಸದಾ ಒಂದಲ್ಲಾ ಒಂದು ವಿಷಯವಾಗಿ ಅವರು ಸುದ್ದಿಯಾಗುತ್ತಲೇ ಇರುತ್ತಾರೆ. ಕೈ ತುಂಬಾ ಸಿನಿಮಾಗಳನ್ನು ಇಟ್ಟುಕೊಂಡಿರುವ ನಟಿ ಸಮಂತಾ ಬ್ಯುಸಿ ಶೆಡ್ಯೂಲ್ ನಲ್ಲಿ ಸಿಕ್ಕಾಪಟ್ಟೆ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ಶಾಕುಂತಲಂ ಸಿನಿಮಾವನ್ನು ಮುಗಿಸಿರುವ ಸಮಂತಾ ಪ್ರಸ್ತುತ ಯಶೋಧ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಇದು ಮಾತ್ರವೇ ಅಲ್ಲದೇ ಬಾಲಿವುಡ್ ಮತ್ತು ಹಾಲಿವುಡ್ ಸಿನಿಮಾಗಳಲ್ಲೂ ತೊಡಗಿಕೊಳ್ಳಲು ಸಜ್ಜಾಗಿದ್ದಾರೆ ಸಮಂತಾ ಎನ್ನುವುದು ಸಹಾ ಸುದ್ದಿಯಾಗಿದೆ‌.

ಸಿನಿಮಾಗಳು ಮಾತ್ರವೇ ಅಲ್ಲದೇ ಜಾಹೀರಾತು ಗಳಲ್ಲಿ ಸಹಾ ತೊಡಗಿಕೊಂಡಿರುವ ಸಮಂತಾ, ಒಂದರ ನಂತರ ಮತ್ತೊಂದು ಎನ್ನುವಂತೆ ಹೊಸ ಹೊಸ ಜಾಹೀರಾತುಗಳಲ್ಲಿ ತೊಡಗಿಸಿಕೊಂಡಿದ್ದಾರೆ ಸಮಂತಾ. ಇವೆಲ್ಲವುಗಳ ಜೊತೆಗೆ‌ ಲೇಟೆಸ್ಟ್ ಫೋಟೋ ಶೂಟ್, ವೆಕೇಶನ್ ಎಂದು ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿಯನ್ನು ಎಬ್ಬಿಸುತ್ತಾರೆ ಸಮಂತಾ. ಇನ್ನು ಸಮಂತಾ ಶೇರ್ ಮಾಡುವ ಪ್ರತಿಯೊಂದು ಫೋಟೋಗೂ ನೆಟ್ಟಿಗರು ಕೂಡಾ ತುಂಬಾ ಗಮನವನ್ನು ನೀಡುತ್ತಾರೆ.

ಈ ಹಿಂದೆ ಸಮಂತಾ ಶೇರ್ ಮಾಡಿದ ಫೋಟೋಗಳನ್ನು ನೆಟ್ಟಿಗರು ಟ್ರೋಲ್ ಮಾಡಿದ್ದು, ಇದಕ್ಕೆ ಖಡಕ್ ಉತ್ತರವನ್ನು ನೀಡಿದ್ದಾರೆ ಸಮಂತಾ. ಹೌದು, ಸಮಂತಾ ತಮ್ಮ ಟ್ವಿಟರ್ ಖಾತೆಯಲ್ಲಿ ಹೊಸದೊಂದು ಟ್ವೀಟ್ ಮೂಲಕ ಸಂಚಲನ ಕಾಮೆಂಟ್ ಗಳನ್ನು ಮಾಡಿದ್ದು, ಸಮಂತಾ ಮಾಡಿದ ಟ್ವೀಟ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ, ಇದನ್ನು ನೋಡಿ ನೆಟ್ಟಿಗರು ಸಹಾ ಅಚ್ಚರಿ ಪಟ್ಟಿದ್ದಾರೆ. ಅಭಿಮಾನಿಗಳು ನಟಿಯ ಟ್ವೀಟ್ ಗೆ ಮೆಚ್ಚುಗೆಗಳನ್ನು ಸೂಚಿಸಿದ್ದಾರೆ.

ಸಮಂತಾ ತಮ್ಮ ಪೋಸ್ಟ್ ನಲ್ಲಿ, ನನ್ನ ಮೌನವನ್ನು ಅಜ್ಞಾನವೆಂದು ಅಪ್ಪಿ ತಪ್ಪಿಯೂ ಪರಿಗಣಿಸಬೇಡಿ. ನೆಮ್ಮದಿಗಾಗಿ ನಾನು ಹೀಗೆ ಇದನ್ನೆಲ್ಲಾ ಸ್ವೀಕರಿಸುತ್ತಿದ್ದೇ‌ನೆ ಎಂದುಕೊಳ್ಳಬೇಡಿ. ನನ್ನ ದಯಾಗುಣವನ್ನು ನನ್ನ ಅಸಮರ್ಥತೆ ಎಂದು ಪರಿಗಣಿಸಬೇಡಿ ಎಂದ ಬಹಳ ನಾಜೂಕಾಗಿಯೇ ಎಚ್ಚರಿಕೆಯನ್ನು ನೀಡಿದ್ದಾರೆ. ಸಮಂತಾ ಮಾಡಿರುವ ಈ ಟ್ವೀಟ್ ಯಾರಿಗೆ ಎಚ್ಚರಿಕೆಯಾಗಿದೆ ಎನ್ನುವುದು ಸದ್ಯಕ್ಕೆ ಎಲ್ಲರ ಅನುಮಾನವಾಗಿದೆ.

ನಂತರ, ದಯಾಗುಣ ಮತ್ತು ಒಳ್ಳೆಯತನ ಎನ್ನುವುದಕ್ಕೂ ಕೂಡಾ ಒಂದು ಮುಗಿಯುವ ದಿನಾಂಕ ಇರುತ್ತದೆ. ಜಸ್ಟ್ ಹೇಳ್ತಾ ಇದ್ದೇನೆ ಎನ್ನುವ ಹ್ಯಾಷ್ ಟ್ಯಾಗ್ ಅನ್ನು ಶೇರ್ ಮಾಡಿದ್ದಾರೆ ಸಮಂತಾ. ಸದ್ಯಕ್ಕಂತೂ ಸಾಮಾಜಿಕ ಜಾಲತಾಣಗಳಲ್ಲಿ ಸಮಂತಾ ಟ್ವೀಟ್ ಸಂಚಲನವನ್ನು ಸೃಷ್ಟಿಸಿದೆ. ಅದು ಮಾತ್ರವೇ ಅಲ್ಲದೇ ಸಮಂತಾ ಇಂತಹುದೊಂದು ವಾರ್ನಿಂಗ್ ನೀಡಿದ್ದಾದರೂ ಏಕೆ? ಅಂತಹ ಯಾವ ಘಟನೆ ನಡೆಯಿತು? ಎನ್ನುವುದು ನೆಟ್ಟಿಗರ ಪ್ರಶ್ನೆಗಳಾಗಿವೆ.

Leave a Reply

Your email address will not be published.