ಮೋಸ ಮಾಡಿದ ಪ್ರೇಮಿಯ ಮೇಲೆ ಪ್ರಿಯತಮೆ ಸೇಡು: ಬಾಯ್ ಫ್ರೆಂಡ್ ತಂದೆ ಜೊತೆ ಆ ಕೆಲಸ ಮಾಡಿ ಬಿಟ್ಟಳು!!

Entertainment Featured-Articles Movies News

ವಿಚಿತ್ರ ಪ್ರೇಮಕಥೆಗಳು, ಅನಂತರ ಬ್ರೇಕಪ್‌ಗಳ ಬಗ್ಗೆ ಅನೇಕ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತದೆ. ಅದರಲ್ಲೂ ಪ್ರೀತಿಸಿ ಮೋಸ ಹೋದ ಹುಡುಗಿಯರ ಸುದ್ದಿಗಳು, ಇತ್ತೀಚಿಗೆ ಪ್ರೇ‌ಮ ವೈಫಲ್ಯದಿಂದ ಹತಾಶರಾದ ಯುವಕರ ಸುದ್ದಿಗಳು ಸರ್ವೇಸಾಮಾನ್ಯ ಎನ್ನುವ ಹಾಗೆ ಆಗಿದೆ. ಆದರೆ ಒಬ್ಬ ಯುವತಿ ತನ್ನ ಬಾಯ್ ಫ್ರೆಂಡ್ ನಿಂದ ಒಂದಲ್ಲ ಎರಡು ಸಲ ಮೋಸ ಹೋಗಿದ್ದು, ಹೀಗೆ ತನಗೆ ಮೋಸ ಮಾಡಿದ ಹುಡುಗನಿಗೆ ತಕ್ಕ ಪಾಠ ಕಲಿಸಲು ಈ ಹುಡುಗಿ ಮಾಡಿರುವ ಕೆಲಸವು ಈಗ ಎಲ್ಲರನ್ನು ಬೆಚ್ಚಿ ಬೀಳಿಸಿದೆ ಹಾಗೂ ಬಹಳ ದೊಡ್ಡ ಶಾ ಕ್ ಸಹಾ ನೀಡಿದೆ.

ಆ ಯುವತಿ ತನ್ನ ಬಾಯ್‌ಫ್ರೆಂಡ್‌ಗೆ ಬುದ್ಧಿ ಕಲಿಸಲು ತೆಗೆದುಕೊಂಡ ನಿರ್ಧಾರ ತಿಳಿದರೆ ನೀವು ಸಹಾ ಶಾ ಕ್ ಆಗುವುದು ಮಾತ್ರವಲ್ಲ, ಹೀಗೂ ಮಾಡುವರೇ ಎಂದು ಅಚ್ಚರಿ ಪಡಬಹುದು. ಆಗಸ್ಟಾ ಹಬಲ್ ಎಂಬ ಈ ಯುವತಿ ಅಮೆರಿಕದವರು. ಮಾಧ್ಯಮ ವರದಿಗಳ ಪ್ರಕಾರ ಈಕೆ 21 ನೇ ವಯಸ್ಸಿನಲ್ಲಿ 30 ವರ್ಷದ ಹುಡುಗನನ್ನು ಪ್ರೀತಿಸುತ್ತಿದ್ದಳು. ಇಬ್ಬರ ನಡುವೆ ಉತ್ತಮ ಬಾಂಧವ್ಯ ಮುಂದುವರೆದು, ತನ್ನ ಜೀವನದಲ್ಲಿ ಎಲ್ಲವೂ ಆತನೇ ಹಾಗೂ ತನಗೆ ಅವನು ಉತ್ತಮ ಸಂಗಾತಿ ಎಂದು ಯುವತಿ ಭಾವಿಸಿದ್ದಳು.

ಗೆಳೆಯನು ಯಾವಾಗಲೂ ಹೂವುಗಳು ಮತ್ತು ಉಡುಗೊರೆಗಳನ್ನು ನೀಡುತ್ತಾ, ಮದುವೆಯ ಬಗ್ಗೆ ಕೇಳುತ್ತಿದ್ದನು. ಆದರೆ ಹುಡುಗನ ಪ್ರೀತಿಯು ಚಂಡಮಾರುತದ ಮೊದಲಿನ ನಿಶ್ಯಬ್ಧ ಎಂದು ಆಕೆಗೆ ತಿಳಿದಿರಲಿಲ್ಲ. ಎರಡು ವರ್ಷಗಳ ಪ್ರೇಮ ಸಂಬಂಧದ ನಂತರ ತನ್ನ ಪ್ರಿಯಕರನ ನಿಜ ಸ್ವರೂಪ ಏನು ಎನ್ನುವುದು ಹೊರಬಂದಿತು ಎಂದು ಅವರು ಹೇಳಿದ್ದಾರೆ. ವೀಡಿಯೋ ಒಂದನ್ನು ಶೇರ್ ಮಾಡಿರುವ ಆಗಸ್ಟಾ ವಿಡಿಯೋ ಶೇರ್ ಮಾಡಿರುವ ಅಗಸ್ಟಾ.. ತಮ್ಮ ಪ್ರೀತಿಯ ದುರಂತವನ್ನು ಹಂಚಿಕೊಂಡಿದ್ದಾರೆ.

ಎರಡು ವರ್ಷಗಳ ಪ್ರೇಮ ಸಂಬಂಧದ ಮಾಧುರ್ಯ ಇದ್ದಕ್ಕಿದ್ದಂತೆ ಕಹಿಯಾಯಿತು. ತನ್ನ ಗೆಳೆಯ, ತನ್ನ ಗೆಳತಿಯೊಂದಿಗೆ ಸೇರಿ ನನಗೆ ಮೋಸ ಮಾಡಿದ್ದಾನೆ ಎಂದು ಆಗಸ್ಟಾ ಹೇಳಿದ್ದು, ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಹಿಡಿದೆ ಎಂದು ತಿಳಿಸಿದ್ದಾರೆ. ನಂತರ ತನ್ನ ಗೆಳೆಯನನ್ನು ವಿಚಾರಿಸಿದಾಗ, ಅವನು ಹೌದು ತನಗೆ ಮೋಸ ಮಾಡುತ್ತಿದ್ದಾನೆ ಎಂದು ಒಪ್ಪಿಕೊಳ್ಳುತ್ತಾನೆ. ಆದರೆ ಇನ್ನೂ ನಾನು ನನ್ನ ಬಾಯ್‌ಫ್ರೆಂಡ್‌ನನ್ನು ಬಿಟ್ಟಿಲ್ಲ.. ಏಕೆಂದರೆ.. ನಾನು ಅವನನ್ನು ತುಂಬಾ ಪ್ರೀತಿಸುತ್ತೇನೆ ಎಂದು ಆಗಸ್ಟಾ ಆ ವಿಡಿಯೋದಲ್ಲಿ ಹೇಳಿದ್ದಾರೆ.

ತನ್ನ ಬಾಯ್‌ಫ್ರೆಂಡ್‌ಗೆ ಮತ್ತೊಂದು ಅವಕಾಶ ನೀಡಿದಾಗ, ಅವನು ಮತ್ತೆ ಮೋಸ ಮಾಡಿದ್ದ, ಮತ್ತೊಮ್ಮೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದನು ಎಂದು ಆಗಸ್ಟಾ ಹೇಳಿದ್ದಾರೆ. ಪ್ರೀತಿಯ ಹೆಸರಿನಲ್ಲಿ ತನಗೆ ಎರಡು ಬಾರಿ ಮೋಸ ಮಾಡಿದ ತನ್ನ ಬಾಯ್‌ ಫ್ರೆಂಡ್‌ನೊಂದಿಗೆ ಆಗಸ್ಟಾ ಬ್ರೇಕಪ್ ಮಾಡಿಕೊಂಡಿದ್ದಾರೆ. ಆದರೆ ಕಥೆ ಅಷ್ಟಕ್ಕೇ ಮುಗಿದಿಲ್ಲ. ಏಕೆಂದರೆ ಬ್ರೇಕಪ್ ನಂತರ ಆಗಸ್ಟ್‌ ಏನು ಮಾಡಲಿದ್ದಾಳೆ ಎಂದು ಆಕೆಯ ಗೆಳೆಯ ಊಹೆ ಕೂಡಾ ಮಾಡಿರಲಿಲ್ಲ.

ಹೌದು, ಆಗಸ್ಟಾ ತನಗೆ ಮೋಸ ಮಾಡಿದ ತನ್ನ ಮಾಜಿ ಗೆಳೆಯನಿಗೆ ಸರಿಯಾಗಿ ಪಾಠ ಕಲಿಸಲೇಬೇಕೆಂದು ತೀರ್ಮಾನಿಸಿ, ಆತನ ತಂದೆಯನ್ನು ಪ್ರೀತಿಸಿ, ನಂತರ ಆತನನ್ನು ಮದುವೆಯಾಗಿದ್ದಾರೆ. ಇದು ಟಿಕ್ ಟಾಕ್ ವಿಡಿಯೋದಲ್ಲಿ ಬಹಿರಂಗವಾಗಿದೆ. ಆಗಸ್ಟಾ ತಾನು ಈಗ ಬಹಳ ಸಂತೋಷವಾಗಿರುವುದಾಗಿಯೂ ಹೇಳಿದ್ದಾರೆ. ನಾವಿಬ್ಬರೂ ನಮ್ಮ ಐದನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ಹೇಳಿರುವ ಆಗಸ್ಟಾ ತಮ್ಮ ಪ್ರೇಮಿಗೆ ಮರೆಯಲಾರದ ಪಾಠವನ್ನು ಕಲಿಸಿದ್ದಾರೆ.

Leave a Reply

Your email address will not be published.