ಪ್ರಸ್ತುತ ಇಡೀ ದೇಶದಲ್ಲಿ ಸದ್ದು ಮಾಡುತ್ತಿರುವ ಸಿನಿಮಾ ‘ದಿ ಕಶ್ಮೀರ್ ಫೈಲ್ಸ್’. ಕಾಶ್ಮೀರಿ ಪಂಡಿತರ ಮೇಲೆ ನಡೆದಂತಹ ಅ ಮಾ ನು ಷ ಕೃತ್ಯಗಳನ್ನು ತೆರೆಯ ಮೇಲೆ ಮೂಡಿಸಲಾಗಿದ್ದು, ಸಿನಿಮಾ ಕುರಿತಾಗಿ ಅಪಾರವಾದ ಮೆಚ್ಚುಗೆಗಳು ಹರಿದು ಬರುತ್ತಿವೆ. ಇದೇ ವೇಳೆ ಕೆಲವರು ಈ ಸಿನಿಮಾದಲ್ಲಿ ಸುಳ್ಳನ್ನು ಬಿಂಬಿಸಲಾಗಿದೆ, ಕಟ್ಟು ಕಥೆಯನ್ನು ತೋರಿಸಲಾಗಿದೆ ಎಂದು ತಮ್ಮ ಅಸಮಾಧಾನವನ್ನು ಹಾಗೂ ಸಿಟ್ಟನ್ನು ಹೊರ ಹಾಕಿದ್ದಾರೆ. ಯಾವುದೇ ದೊಡ್ಡ ಮಟ್ಟದ ಪ್ರಮೋಷನ್ ಇಲ್ಲದೇ ಹೋದರೂ ಜನರ ಮನಸ್ಸನ್ನು ಗೆದ್ದ ದಿ ಕಶ್ಮೀರ್ ಫೈಲ್ ಮೊದಲ ದಿನ 600 ಸ್ಕ್ರೀನ್ ಗಳಲ್ಲಿ ಬಿಡುಗಡೆ ಆಗಿ, ಇದೀಗ 4000 ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ಸಿನಿಮಾ ದೊಡ್ಡ ಯಶಸ್ಸನ್ನು ಪಡೆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಗುಜರಾತ್ ಹಿಂ ಸೆ ಯನ್ನು ಹೊರ ತೆಗೆಯಬಾರದೇಕೆ? ಕಾಶ್ಮೀರಿ ಪಂಡಿತರಿಗಿಂತ ಕ್ರೂ ರ ವಾದ ಸಸ್ಯಗಳು ಗುಜರಾತ್ ನಲ್ಲಿವೆ, ಅವುಗಳನ್ನು ಸಹಾ ಬಹಿರಂಗ ಮಾಡಿ ಎನ್ನುವ ಮಾತುಗಳು ಕೇಳಿ ಬಂದ ಬೆನ್ನಲ್ಲೇ ಲೇಖಕ ಹಾಗೂ ಚಿತ್ರ ನಿರ್ದೇಶಕ ವಿನೋದ್ ಕಪ್ರಿ ಈ ವಿಷಯವಾಗಿ ಪ್ರತಿಕ್ರಿಯೆಯನ್ನು ನೀಡಿರುವುದು ಮಾತ್ರವೇ ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಒಂದು ಸವಾಲನ್ನು ಸಹಾ ಹಾಕಿದ್ದಾರೆ.
ವಿನೋದ್ ಕಪ್ರಿ ಟ್ವಿಟರ್ ನಲ್ಲಿ ಸಾಲು ಸಾಲು ಟ್ವೀಟ್ ಗಳನ್ನು ಮಾಡಿದ್ದು, ನಾನು ಗುಜರಾತ್ ಫೈಲ್ಸ್ ಸಿನಿಮಾ ಮಾಡಲು ತಯಾರಾಗಿದ್ದೇನೆ. ಈ ವಿಚಾರವಾಗಿ ನಾನು ಈಗಾಗಲೇ ನಿರ್ಮಾಪಕರ ಜೊತೆಗೆ ಒಂದು ಸುತ್ತಿನ ಮಾತುಕತೆ ಸಹಾ ನಡೆಸಿದ್ದೇನೆ. ಈ ಸಿನಿಮಾದಲ್ಲಿ ಗುಜರಾತಿನಲ್ಲಿ ನಡೆದ ಹಿಂ ಸಾ ಚಾ ರವನ್ನು ನಾನು ಸ್ಪಷ್ಟವಾಗಿ ತೋರಿಸುವೆ, ಅಸಲಿ ಸತ್ಯಗಳನ್ನು ಜನರ ಮುಂದೆ ಇಡುವೆ. ಗುಜರಾತ್ ನಲ್ಲಿ ನಡೆದ ಘಟನೆಗಳ ಬಗ್ಗೆ ನಾನು ಸಾಕಷ್ಟು ವಿಚಾರಗಳನ್ನು ಸಂಗ್ರಹಿಸಿದ್ದೇನೆ, ಪರಿಶೋಧನೆ ನಡೆಸಿದ್ದೇನೆ ಎಂದಿದ್ದಾರೆ ವಿನೋದ್ ಕಪ್ರಿ.
ನಾನು ಸಿನಿಮಾ ಮಾಡಲು ಸಿದ್ಧನಾಗಿದ್ದೇನೆ ಆದರೆ ಪ್ರಧಾನಿ ಮೋದಿಯವರು ಈ ಸಿನಿಮಾವನ್ನು ಬಿಡುಗಡೆ ಮಾಡಲು ಒಪ್ಪಿಕೊಳ್ಳಬೇಕು, ಸಿನಿಮಾ ಬಿಡುಗಡೆಗೆ ತಡೆ ಹಾಕಬಾರದು. ಅವರು ತಾನು ಈ ಸಿನಿಮಾವನ್ನು ತಡೆಯುವುದಿಲ್ಲ ಎನ್ನುವ ಭರವಸೆಯನ್ನು ನೀಡಬೇಕು, ಅವರು ಒಪ್ಪಿಗೆ ನೀಡಬೇಕು ಎನ್ನುವ ಸವಾಲನ್ನು ಹಾಕಿದ್ದಾರೆ ವಿನೋದ್ ಕಪ್ರಿ. ಅವರ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕರು ಅವರ ಟ್ವೀಟ್ ಗೆ ಬೆಂಬಲ ನೀಡಿದ್ದಾರೆ. ಮತ್ತೆ ಕೆಲವರು ಟೀಕೆ ಗಳನ್ನು ಸಹಾ ಮಾಡಿದ್ದಾರೆ..