ಮೋಜು ಮಸ್ತಿಗಾಗಿ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ಅವಮಾನ ಮಾಡಿದ ಮದುಮಗ

Written by Soma Shekar

Published on:

---Join Our Channel---

ಇತ್ತೀಚಿನ ದಿನಗಳಲ್ಲಿ ಮೋಜು, ಮಸ್ತಿಯ ಹೆಸರಿನಲ್ಲಿ ಜನರು ಅನ್ಯ ಧರ್ಮಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನು ತರುವಂತಹ ಕೆಲಸಗಳನ್ನು ಮಾಡುತ್ತಾರೆ. ವಿದ್ಯಾವಂತರು, ಬುದ್ಧಿವಂತರೂ ಆಗಿರುವವರು ಸಮಾಜದಲ್ಲೊಂದು ಸಾಮರಸ್ಯವನ್ನು ಮೆರೆಯುವ ಕೆಲಸಗಳನ್ನು ಮಾಡುವ ಬದಲಾಗಿ ಹೀಗೆ ಸಾಮಾಜಿಕ ಶಾಂತಿಯನ್ನು ಕದಡುವ ಕೆಲಸಗಳನ್ನು ಮಾಡುವುದು ನೋಡಿದಾಗ ನಮ್ಮ‌ ಸಮಾಜವು ಯಾವ ಕಡೆಗೆ ಸಾಗುತ್ತಿದೆ ಎನ್ನುವ ಪ್ರಶ್ನೆಯೊಂದು ನಮ್ಮ ಮನಸ್ಸಿನಲ್ಲಿ ಮೂಡುತ್ತದೆ‌. ಇಂತಹ ಕೆಲಸಗಳನ್ನು ಮಾಡುವವರನ್ನು ಸರಿ ದಾರಿಗೆ ತರುವ ಕೆಲಸ ಆಗಬೇಕು ಎನಿಸುತ್ತದೆ.

ಈಗ ಇಂತಹುದೇ ಮತ್ತೊಂದು ಘಟನೆ ನಡೆದಿದೆ. ಹೌದು ತುಳು ನಾಡಿನ ಆರಾಧ್ಯ ದೈವ, ನಾಡಿನ ಬೇರೆ ಬೇರೆ ಭಾಗಗಳಿಂದಲೂ ಸಹಾ ಭಕ್ತರು ಬಂದು ಭಕ್ತಿ ಶ್ರದ್ಧೆಯಿಂದ ದರ್ಶನ ಮಾಡುವ ಕೊರಗಜ್ಜನಿಗೆ ಅವಮಾನ ಮಾಡಿರುವ ಘಟನೆಯೊಂದು ನಡೆದಿದ್ದು, ಈ ಘಟನೆಯ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಮಾತ್ರವೇ ಅಲ್ಲದೇ ಎಲ್ಲೆಡೆಯಿಂದ ಸಿಟ್ಟು, ಅಸಮಾಧಾನ ಹಾಗೂ ಆ ಕ್ರೋ ಶಗಳು ವ್ಯಕ್ತವಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದಲ್ಲಿ ಮದುವೆಯ ದಿನ ವರನು ಕೊರಗಜ್ಜನ ವೇಷವನ್ನು ಧರಿಸಿ ಕುಣಿದಿದ್ದು, ಇದು ಭಾರೀ ಆ ಕ್ರೋ ಶ ಕ್ಕೆ ಕಾರಣವಾಗಿದೆ. ಉಪ್ಪಳದ ಯುವಕನ ಜೊತೆಗೆ ಕೊಳ್ನಾಡು ಗ್ರಾಮದ ಅಜೀಜ್ ಎನ್ನುವವರ ಮಗಳ ಮದುವೆ ನಿಶ್ಚಯವಾಗಿತ್ತು. ಈ ನಿಮಿತ್ತ ವಧುವಿನ ಮನೆಗೆ ವರ ಹಾಗೂ ಆತನ ಸ್ನೇಹಿತರ ಬಳಗವು ಆಗಮಿಸಿತ್ತು ಎನ್ನಲಾಗಿದೆ.

ಈ ವೇಳೆ ಮದುವೆಯ ಗಂಡು ಕೊರಗಜ್ಜನ ವೇಷಭೂಷಣವನ್ನು ಧರಿಸಿ ಬಂದಿದ್ದನು. ಆತನ ತಲೆಗೆ ಅಡಿಕೆ ಹಾಳೆ ಟೋಪಿ, ಮುಖಕ್ಕೆ ಕಪ್ಪು ಬಣ್ಣವನ್ನು ಹಚ್ಚಿಕೊಂಡು ಬಂದಿದ್ದನು, ವರ ಹಾಗೂ ಆತನ ಗೆಳೆಯರ ತಂಡವು ವಧುವಿನ ಮನೆಯ ಮುಂದೆ ರಸ್ತೆಯಲ್ಲಿ ಹಾಡನ್ನು ಹೇಳಿ ಕುಣಿದಾಡಿದ್ದಾರೆ.‌ ಇವರ ಈ ಕೃತ್ಯದಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ತೀವ್ರವಾದ ಆ ಕ್ರೋ ಶ ವ್ಯಕ್ತವಾಗಿದೆ.

Leave a Comment