ಮೊಸಳೆಯೂ ನಗುವ ಕಾಲ ಬಂದೇ ಬಿಡ್ತು: ನಂಬಿಕೆ ಇಲ್ಲಾ ಅಂದ್ರೆ ಈ ವೀಡಿಯೋ ನೋಡಿ!! ಮೊಸಳೆ ನಕ್ಕಿದ್ದಾದ್ರು ಏಕೆ??

Entertainment Featured-Articles News Viral Video

ಅಲ್ಬಿನೋ ಮೊಸಳೆಗಳು ಬಹಳ ವಿರಳವಾದ ಹಾಗೂ ಅಪರೂಪದ ಜೀವಿಗಳಾಗಿವೆ. ಇವು ಆಲ್ಬಿನಿಸಂ ಪುನರಾವರ್ತಿತ ಜೀನ್ ( Recessive Gene ) ಗಳಿಂದ ಗುರುತಿಸಲ್ಪಟ್ಟಿವೆ. ಬಹಳ ದುರ್ಲಭ ಜೀವಿಗಳಾಗಿರುವ ಈ ಮೊಸಳೆಗಳು ತಮ್ಮ ಚರ್ಮ ಹಾಗೂ ಕಣ್ಣುಗಳಿಗೆ ಬಣ್ಣವನ್ನು ನೀಡುವುದಕ್ಕೆ ಅಗತ್ಯವಿರುವ ಮೆಲನಿನ್ ತಯಾರಿಸುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಅವುಗಳಲ್ಲಿನ ಈ ಅನುವಂಶಿಕ ದೋಷದಿಂದಾಗಿ ಅವುಗಳ ಚರ್ಮವು ಬಿಳಿಯ ಬಣ್ಣದಲ್ಲಿ ಕಾಣುತ್ತದೆ. ಬಣ್ಣ ಹೀನ ವಾದ ಇವುಗಳ ರಕ್ತನಾಳಗಳ ಕಾರಣದಿಂದ ಈ ಮೊಸಳೆಗಳ ಕಣ್ಣು ಸಾಮಾನ್ಯವಾಗಿ ಗುಲಾಬಿ ಬಣ್ಣದಲ್ಲಿ ಇರುತ್ತದೆ.

ಈಗ ಒಂದು ವಿಡಿಯೋ ವೈರಲ್ ಆಗಿದ್ದು ಈ ವಿಡಿಯೋದಲ್ಲಿನ ದೃಶ್ಯವನ್ನು ನೋಡಿದಾಗ, ಆಲ್ಬಿನೋ ಮೊಸಳೆಗಳು ಬೇರೆ ಎಲ್ಲ ಮೊಸಳೆಗಳಿಗಿಂತ ಸಂಪೂರ್ಣವಾಗಿ ವಿಭಿನ್ನವಾದವು ಎನ್ನುವುದು ನಿಮಗೇ ಅರ್ಥವಾಗುತ್ತದೆ. ಅಮೇರಿಕಾದ ಯೂಟ್ಯೂಬರ್ ಜೇ ಬ್ರೀವರ್ ರೆಪ್ಟೈಲ್ಸ್ ಜೂ ಪ್ರಿ ಹಿಸ್ಟಾರಿಕ್ ಇಂಕ್ ನ ಸಂಸ್ಥಾಪಕರು ಆಗಿದ್ದಾರೆ. ಅವರು ಇತ್ತೀಚಿಗೆ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದು ಬಹಳ ಅಪರೂಪ ಎನಿಸುವಂತಹ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಈ ವಿಡಿಯೋವನ್ನು ನೋಡಿದಾಗ ಅವರು ತಮ್ಮ ಕೈಯಲ್ಲಿ ಹಿಡಿದುಕೊಂಡು ಕುಳಿತಿರುವ ಆಲ್ಬೀನೋ ಮೊಸಳೆಯ ಮರಿಯೊಂದರ ಕುತ್ತಿಗೆಯ ಭಾಗವನ್ನು ಒಂದು ಬ್ರಶ್ ಬಳಸಿ, ಅವರು ಸ್ವಚ್ಛ ಮಾಡುತ್ತಿರುವುದನ್ನು ನಾವು ನೋಡಬಹುದು. ಅವರು ಹೀಗೆ ಆ ಮೊಸಳೆಯ ಮರಿಯ ಕುತ್ತಿಗೆಯ ಭಾಗದಲ್ಲಿ ಬ್ರಷ್ ಉಜ್ಜುವಾಗ ಮೊಸಳೆ ಮರಿ ನೀಡಿದ ಪ್ರತಿಕ್ರಿಯೆ ಈಗ ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದೆ. ಹೌದು, ವಿಡಿಯೋವನ್ನು ಗಮನವಿಟ್ಟು ನೋಡಿದಾಗ ದೇವರು ಮೊಸಳೆ ಮರಿ ನಗುವುದು ಕಾಣುತ್ತದೆ.

ಮೊಸಳೆ ಮರಿಯ ಕುತ್ತಿಗೆಯ ಭಾಗದಲ್ಲಿ ಬ್ರಷ್ ನಿಂದ ಉಜ್ಜಿದಾಗ ಅದು ಬಾಯಿ ತೆರೆದು ನಗುವುದನ್ನು ನೋಡಬಹುದು. ಜೇ ಬ್ರಿವರ್ ಅವರು ಕುತ್ತಿಗೆಯ ಭಾಗವನ್ನು ಶುಚಿಗೊಳಿಸುವಾಗ ಮೊಸಳೆಗೆ ಅದು ಹಿತವಾದ ಅನುಭವ ನೀಡಿದ. ಆ ಆನಂದವನ್ನು ಸವಿಯುತ್ತಾ ಅದು ಬಾಯಿ ತೆರೆದು ಸಂತೋಷ ವ್ಯಕ್ತಪಡಿಸುವುದು ಬಹಳ ಸ್ಪಷ್ಟವಾಗಿ ನಮಗೆ ಕಾಣುತ್ತದೆ. ಈ ದೃಶ್ಯವು ಬಹಳ ಮುದ್ದಾಗಿರುವುದು ಮಾತ್ರವೇ ಅಲ್ಲದೆ ವಿಶೇಷವೆನಿಸುತ್ತದೆ. ಜೇ ಬ್ರಿವರ ಅವರು ಶೇರ್ ಮಾಡಿಕೊಂಡು ಕ್ಯಾಪ್ಷನ್ ನಲ್ಲಿ, ಕೋಕನೆಟ್ ಗೆ ಸ್ಕ್ರಬಿಂಗ್ ಮಾಡಿದ್ದು ಬಹಳ ಇಷ್ಟ ಆಗಿದೆ ಎಂದು ಬರೆದುಕೊಂಡಿದ್ದಾರೆ.

ಅವರು ಆ ಮೊಸಳೆ ಮರಿಗೆ ಕೋಕೋನಟ್ ಎನ್ನುವ ಹೆಸರನ್ನು ಇಟ್ಟಿದ್ದು, ಪ್ರಾಣಿಸಂಗ್ರಹಾಲಯದಲ್ಲಿ ಅದರ ಜೊತೆಗೆ ಕುಳಿತುಕೊಂಡು ಅವರು ಬ್ರಶ್ ನಿಂದ ಒಂದೆರಡು ಬಾರಿ ಕುತ್ತಿಗೆ ಭಾಗವನ್ನು ಸ್ವಚ್ಛ ಮಾಡುವುದು ಕಾಣುತ್ತಿದೆ. ಆಗ ಮೊಸಳೆ ಎರಡೂ ಜಾರಿಯೂ ಸಹಾ ಅವರು ಬ್ರಶ್ ನಿಂದ ಉಜ್ಜವಾಗ ಬಾಯಿ ತೆರೆದು ನಗುತ್ತದೆ. ಇದನ್ನು ಕಂಡು ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ. ಈಗಾಗಲೇ ಲಕ್ಷಾಂತರ ಜನರು ಈ ವಿಡಿಯೋವನ್ನು ನೋಡಿ ಮೆಚ್ಚುಗೆ ನೀಡಿದ್ದಾರೆ.

Leave a Reply

Your email address will not be published. Required fields are marked *