ಮೊಸಳೆಯನ್ನು ಮದುವೆ ಆಗಿ ಕಿಸ್ ಮಾಡಿದ ಮೇಯರ್: ಕಾರಣ ತಿಳಿದರೆ ಅಚ್ಚರಿ ಮತ್ತು ಶಾಕ್ ಎರಡೂ ಖಚಿತ!!

Entertainment Featured-Articles News Wonder

ಸಮಾಜವು ಆಧುನಿಕತೆಯ ಕಡೆಗೆ ಸಾಗಿದಂತೆ ಅದೇಕೋ ಮದುವೆ ಎನ್ನುವುದು ಕೂಡಾ ಬದಲಾಗುತ್ತಾ ಸಾಗಿದೆ‌.‌ ಮದುವೆಯ ಸಂಪ್ರದಾಯಗಳಲ್ಲಿ ಆಧುನಿಕತೆ ಮೂಡಿರುವುದು ಒಂದು ವಿಚಾರವಾದರೆ, ಮತ್ತೊಂದು ವಿಚಿತ್ರವಾದ ಆಚರಣೆಯಲ್ಲಿ ಮದುವೆಯ ಆಚರಣೆಯಲ್ಲಿ ಬಹುದೊಡ್ಡ ಬದಲಾವಣೆ ಕಂಡಿದೆ. ಹೌದು, ಮದುವೆ ಎಂದರೆ ಗಂಡು, ಹೆಣ್ಣಿನ ಜೋಡಿ ನವ ಜೀವನಕ್ಕೆ ಕಾಲಿರಿಸುವುದು ಎನ್ನುವ ಸಂಪ್ರದಾಯ ಇಂದು ಹಾಗೇ ಉಳಿದಿಲ್ಲ ಎಂದರೆ ಅದು ಖಂಡಿತ ಅಚ್ಚರಿಯೇನಿಲ್ಲ. ಮದುವೆಗಳು ಹಿಂದಿನಂತೆ ಖಂಡಿತ ಉಳಿದಿಲ್ಲ ಎನ್ನುವುದು ವಾಸ್ತವ.

ಏಕೆಂದರೆ ಇಂದಿನ ದಿನಗಳಲ್ಲಿ ಹೆಣ್ಣು ಹೆಣ್ಣನ್ನೇ, ಗಂಡು ಗಂಡನ್ನೇ ಮದುವೆಯಾಗುವುದು ಸಹಾ ಸಾಮಾನ್ಯವಾದ ವಿಚಾರವಾಗಿದೆ. ಇದಲ್ಲದೇ ಇನ್ನೂ ಒಂದೆರಡು ಹೆಜ್ಜೆ ಮುಂದೆ ಹೋಗಿರುವ ಕೆಲವರು ರೋಬೋಟ್ ಗಳೊಡನೆ ವಿವಾಹ, ಬೊಂಬೆಗಳೊಡನೆ ವಿವಾಹ ಮಾಡಿಕೊಂಡಿರುವ ಘಟನೆಗಳು ಸಹಾ ನಡೆದಿದ್ದು ಅಚ್ಚರಿಯನ್ನು ಮೂಡಿಸಿವೆ. ಎಲೆಕ್ಟ್ರಿಕ್ ರೈಸ್ ಕುಕ್ಕರ್ ಜೊತೆಗೆ ಮದುವೆ ಮಾಡಿಕೊಂಡ ವ್ಯಕ್ತಿಯೊಬ್ಬರ ಸುದ್ದಿ ಸಹಾ ವೈರಲ್ ಆಗಿ ನೆಟ್ಟಿಗರು ಇದೆಂತ ಹುಚ್ಚುತನ ಎಂದಿದ್ದು ಉಂಟು.

ಈಗ ಇವೆಲ್ಲವುಗಳ ನಡುವೆ ಮತ್ತೊಂದು ವಿಚಿತ್ರವಾದ ವಿವಾಹ ನಡೆದಿದ್ದು‌ ಮೆಕ್ಸಿಕೊ ದಲ್ಲಿ ಮೇಯರ್ ಒಬ್ಬರು ಮೊಸಳೆಯ ಜೊತೆಗೆ ಮದುವೆಯನ್ನು ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಸದ್ದು ಮಾಡಿದೆ. ಮೇಯರ್ ಹೀಗೆ ಮೊಸಳೆಯ ಜೊತೆಗೆ ಮದುವೆಯಾಗಲು ಕಾರಣವೇನು ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಈ ಮದುವೆಯ ಹಿಂದೆ ಖಂಡಿತ ಒಂದು ಕಾರಣವಿದೆ ಎನ್ನಲಾಗಿದ್ದು, ಇದು ಅಲ್ಲಿನ ಒಂದು ಪ್ರಾಚೀನ ಆಚರಣೆಯ ಭಾಗವಾಗಿದೆ ಎನ್ನಲಾಗಿದೆ.

ಹೌದು, ಕಾಲಕ್ಕೆ ಸರಿಯಾಗಿ ಮಳೆಯಾಗದೇ ಹೋದಲ್ಲಿ, ಮಳೆಯು ಬಂದು, ನದಿಯಲ್ಲಿ ನೀರು ಹರಿದು,‌ ಮೀನು ಹಿಡಿಯಲು ಅನುಕೂಲವಾಗಲಿ, ಜನ ಜೀವನ ಸುಖವಾಗಿರಲಿ ಎಂದು ಮೇಯರ್ ಮೊಸಳೆಯನ್ನು ಮದುವೆಯಾಗುವ ಸಂಪ್ರದಾಯವಿದ್ದು, ಇದು ಅಲ್ಲಿನ ಪ್ರಾಚೀನ ಚೊಂಟಾಲ್ ಮತ್ತು ಹುವೆ ಬುಡಕಟ್ಟು ಸಮುದಾಯದಲ್ಲಿ ಪ್ರಕೃತಿಯ ಆರಾಧನೆಗೆ ಈ ಸಂಪ್ರದಾಯ ಇತ್ತು ಎನ್ನಲಾಗಿದೆ.

ಈಗ ಅದೇ ಆಚರಣೆಯನ್ನು ಮತ್ತೊಮ್ಮೆ ಅನುಷ್ಠಾನಕ್ಕೆ ತಂದಿದ್ದು, ಸ್ಯಾನ್ ಪೆಡ್ರೋ ಹ್ಯುವಾಮೆಲೂಲ ಎಂಬಲ್ಲಿನ ಮೇಯರ್ ವಿಕ್ಟರ್ ಹ್ಯೂಗೋ ಸೊಸಾ ಮೊಸಳೆಯ ಜೊತೆಗೆ ಮದುವೆಯಾಗಿದ್ದಾರೆ.. ಮೊಸಳೆ ಕಚ್ಚದಿರಲಿ ಎಂದು ಅದರ ಬಾಯಿಯನ್ನು ಕಟ್ಟಲಾಗಿತ್ತು. ಅದು ಪುಟ್ಟ ರಾಜಕುಮಾರಿಯನ್ನು ಪ್ರತಿನಿಧಿಸುತ್ತದೆ ಎನ್ನಲಾಗಿದ್ದು, ಭೂಮಿ ತಾಯಿಯ ಪ್ರತಿನಿಧಿಸುವ ದೇವತೆ ಮೊಸಳೆ ಎನ್ನಲಾಗಿದೆ. ಈ ಮದುವೆ ಮಾನವ ಮತ್ತು ದೈವಿಕ ಬಾಂಧವ್ಯದ ಸಂಕೇತ ಎನ್ನಲಾಗಿದೆ. ಈ ವಿಶೇಷ ಮದುವೆ ಈಗ ಎಲ್ಲರ ಗಮನ ಸೆಳೆದಿದೆ.

Leave a Reply

Your email address will not be published.