ಮೊಮ್ಮಗ, ಮರಿ ಮೊಮ್ಮಗನನ್ನು ಎತ್ತಿ ಮುದ್ದಾಡಿದ ಕುಮಾರಸ್ವಾಮಿ ಅವರು ಹಾಗೂ ದೇವೇಗೌಡರು

0 1

ಸ್ಯಾಂಡಲ್ವುಡ್ ನಟ ಹಾಗೂ ಸಕ್ರಿಯ ರಾಜಕಾರಣಿಯಾಗಿರುವ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಗಂಡು ಮಗುವಿನ ತಂದೆಯಾಗಿದ್ದಾರೆ. ನಿಖಿಲ್ ಹಾಗೂ ರೇವತಿ ದಂಪತಿ ತಮ್ಮ ಮನೆಗೆ ಮಗುವಿನ ಆಗಮನದಿಂದ ಬಹಳ ಸಂಭ್ರಮ ಪಟ್ಟಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರ ಪತ್ನಿ ರೇವತಿ ಅವರು ಇಂದು ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಕುಟುಂಬದಲ್ಲಿ ಒಂದು ಸಂಭ್ರಮದ ವಾತಾವರಣ ಮೂಡಿದೆ. ಎಲ್ಲರ ಮುಖದಲ್ಲಿ ಕೂಡಾ ಸಂತೋಷ ಕಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಿಖಿಲ್-ರೇವತಿ ದಂಪತಿಗೆ ಅಭಿಮಾನಿಗಳು ಶುಭಾಶಯಗಳನ್ನು ಕೋರುತ್ತಿದ್ದಾರೆ.

ನಿಖಿಲ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಮುದ್ದು ಮಗುವಿನ ಹಾಗೂ ಮಗುವಿನ ಜೊತೆಗೆ ಕುಟುಂಬದವರು ಕಳೆದ ಸಂಭ್ರಮದ ಕ್ಷಣಗಳ ಸುಂದರ ಫೋಟೋಗಳನ್ನು ಹಾಕುವ ಮೂಲಕ ಸಂತೋಷವನ್ನು ಎಲ್ಲರೊಡನೆ ಹಂಚಿಕೊಂಡಿದ್ದಾರೆ. ಅತ್ತ ತಾತ ಹೆಚ್ ಡಿ ಕುಮಾರಸ್ವಾಮಿ ಅವರು, ಮತ್ತಾತ ಆಗಿರುವ ಹೆಚ್.ಡಿ ದೇವೇಗೌಡ ಅವರ ಮುಖದಲ್ಲಿ ಸಂಭ್ರಮ ಕಾಣುತ್ತಿರುವುದನ್ನು ನೋಡಬಹುದಾಗಿದೆ.

ಮಾಜಿ ಮುಖ್ಯಮಂತ್ರಿ, ನಿಖಿಲ್ ಅವರ ತಂದೆಯವರಾದ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಂಭ್ರಮದ ಈ ವಿಶೇಷ ದಿನದಂದು ತನಗಾಗಿರುವ ಸಂತೋಷದ ಬಗ್ಗೆ ಒಂದಷ್ಟು ಸಾಲುಗಳನ್ನು ಬರೆದುಕೊಂಡು, ತಮ್ಮ ಸಂತೋಷವನ್ನು ಎಲ್ಲರೊಂದಿಗೆ ಸಂಭ್ರಮಿಸುತ್ತಿದ್ದು, ಅವರ ಪೋಸ್ಟ್ ನೋಡಿದ ಅನೇಕರು ಅವರಿಗೆ ಕಾಮೆಂಟ್ ಮಾಡಿ ಶುಭ ಹಾರೈಸಿದ್ದಾರೆ.

ಕುಮಾರಸ್ವಾಮಿ ಅವರು ತಮ್ಮ ಪೋಸ್ಟ್ ನಲ್ಲಿ, ನನ್ನ ಜೀವನದಲ್ಲಿ ಇನ್ನೊಂದು ಶುಭ ಘಳಿಗೆ ಬಂದಿದೆ. ನಮ್ಮ ಪರಿವಾರಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ತಾತನಾದೆ ಎಂದು ಹೇಳಲು ಅತೀವ ಸಂತಸವಾಗುತ್ತಿದೆ. ಕಂದನಿಗೆ ನಿಮ್ಮೆಲ್ಲರ ಹಾರೈಕೆ ಮತ್ತು ಆಶೀರ್ವಾದ ಇರಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಬರೆದುಕೊಂಡು ಖುಷಿಯನ್ನು ಹಂಚಿಕೊಂಡಿದ್ದಾರೆ.

ಇನ್ನು ಅಪ್ಪನಾದ ಸಂಭ್ರಮವನ್ನು ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಗುವಿನ ಫೋಟೋ ಹಂಚಿಕೊಂಡು, ನಮ್ಮ ಜೀವನದ ಈ ವಿಶೇಷ ಕ್ಷಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತೋಷವಾಗುತ್ತಿದೆ. Love you my son 😘 ಎಂದು ಬರೆದುಕೊಂಡು ಖುಷಿಯನ್ನು ಹಂಚಿಕೊಂಡಿದ್ದಾರೆ.

Leave A Reply

Your email address will not be published.