ಮೊಬೈಲ್ ಮುಟ್ಟಲು ಕೈ ಇಟ್ಟವರ ಮೇಲೆ ಧಾಳಿ ಇಟ್ಟ ಕಪ್ಪೆಗಳು: ವೀಡಿಯೋ ನೋಡಿ ದಂಗಾದ ನೆಟ್ಟಿಗರು!!

Written by Soma Shekar

Published on:

---Join Our Channel---

ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ಮನರಂಜನೆಯನ್ನು ನೀಡುವ, ಹಾಸ್ಯದ ಸವಿಯನ್ನು ಉಣ ಬಡಿಸುವ, ಜೀವನದ ಸಾರವನ್ನು ಅರ್ಥ ಮಾಡಿಸುವ ಹೀಗೆ ನಾನ ರೀತಿಯ ವೀಡಿಯೋಗಳು ನೋಡಲು ಸಿಗುತ್ತವೆ. ಒತ್ತಡದ ಈ ಜೀವನದಲ್ಲಿ ಅನೇಕ ಸಂದರ್ಭಗಳಲ್ಲಿ ಮುಖದ ಮೇಲೊಂದು ನಗುವನ್ನು ತರಿಸುವ, ಎಲ್ಲಾ ಒತ್ತಡವನ್ನು ಮರೆಸುವಂತಹ ವಿಶೇಷ ವೀಡಿಯೋಗಳನ್ನು ನಾವು ಮತ್ತೆ ಮತ್ತೆ ನೋಡಲು ಬಯಸುತ್ತೇನೆ ಹಾಗೂ ಅಂತಹ ವೀಡಿಯೋಗಳನ್ನು ಆಪ್ತರೊಂದಿಗೆ ಶೇರ್ ಸಹಾ ಮಾಡಿಕೊಳ್ಳುತ್ತೇವೆ.

ಇಂತಹ ಅಚ್ಚರಿ ಮೂಡಿಸಿ, ಮನಸ್ಸಿಗೆ ಮುದ ನೀಡುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಬೇಗ ವೈರಲ್ ಆಗುತ್ತದೆ. ಇನ್ನು ಅನೇಕರಿಗೆ ಇಂತಹ ವೀಡಿಯೋಗಳನ್ನು ನೋಡಲು ಪ್ರಮುಖವಾದ ಮೂಲ ಯಾವುದು ಎಂದರೆ ಅದು ಅವರ ಬಳಿ ಇರುವ ಸ್ಮಾರ್ಟ್ ಫೋನ್ ಗಳು. ಆದ್ದರಿಂದಲೇ ಫೋನ್ ಗಳು ಇಲ್ಲದೇ ಮನರಂಜನೆಯೇ ಇಲ್ಲ ಎನ್ನುವಂತೆ ಆಗಿದೆ. ಜನರು ಮೊಬೈಲ್ ಗಳ ಮೇಲೆ ವಿಪರೀತ ಅವಲಂಬಿತವಾಗಿದ್ದಾರೆ. ತಮ್ಮ ಮೊಬೈಲ್ ಯಾರಾದರೂ ಮುಟ್ಟಲು ಬಂದರೆ ಸಿಟ್ಟಾಗಿ ಬಿಡುತ್ತಾರೆ.

ಆದರೆ ಇಂತಹುದೇ ಒಂದು ಸಿಟ್ಟನ್ನು ಕಪ್ಪೆಗಳು ಸಹಾ ತೋರಿಸುತ್ತವೆ ಎಂದರೆ ನೀವು ನಂಬುತ್ತೀರಾ?? ಇಲ್ಲ ಅಲ್ಲವೇ?? ಹಾಗಾದರೆ ನೀವು ಈ ವಿಷಯವನ್ನು ತಿಳಿಯಲೇ ಬೇಕು. ಏಕೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದರಲ್ಲಿ ನಾಲ್ಕು ಕಪ್ಪೆಗಳು ಸ್ಮಾರ್ಟ್ ಫೋನ್ ಅನ್ನು ರಕ್ಷಣೆ ಮಾಡುವಂತೆ ಕುಳಿತಿದ್ದು, ಆ ಫೋನ್ ಮುಟ್ಟಲು ಬಂದ ವ್ಯಕ್ತಿಯ ಮೇಲೆ ಸಿಟ್ಟಾಗಿರುವುದನ್ನು ನೋಡಿ ನೆಟ್ಟಿಗರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.

ವೀಡಿಯೋದಲ್ಲಿ ನಾಲ್ಕು ಕಪ್ಪೆಗಳು ಮೊಬೈಲ್ ನ ಕಾವಲು ಕಾಯುತ್ತಿರುವಂತೆ ಕಂಡಿದ್ದು, ಅಲ್ಲಿಗೆ ಬಂದ ಮಹಿಳೆಯೊಬ್ಬರು ಮೊಬೈಲ್ ಎತ್ತಿ ಕೊಳ್ಳಲು ಅತ್ತ ತನ್ನ ಕೈಯನ್ನು ಇಟ್ಟ ಕೂಡಲೇ ನಾಲ್ಕು ಕಪ್ಪೆಗಳು ಸಿಟ್ಟಗುತ್ತವೆ. ಅವು ಸಿಟ್ಟಿನಿಂದ ಸದ್ದು ಮಾಡುತ್ತವೆ. ಆಗ ಆ ಮಹಿಳೆ ಭಯದಿಂದ ಕೈಯನ್ನು ಹಿಂದಕ್ಕೆ ತೆಗದುಕೊಳ್ಳುತ್ತಾರೆ. ಅನಂತರ ನಿಧಾನವಾಗಿ ಮೊಬೈಲ್ ಎತ್ತಿಕೊಳ್ಳಲು ಅದನ್ನು ಮಟ್ಟಿದ ಕೂಡಲೇ ಈ ಬಾರಿ ಕಪ್ಪೆಗಳು ಆಕೆಯ ಕೈಯನ್ನು ಕಚ್ಚಲು ಧಾ ಳಿ ಇಡಲು ಮುಂದಾಗುತ್ತವೆ.

26 ಸೆಕೆಂಡ್ ಗಳ ಈ ವೀಡಿಯೋವನ್ನು ಟ್ವಿಟರ್ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದು, ಈಗಾಗಲೇ ಈ ವೀಡಿಯೋವನ್ನು ಸಾವಿರಾರು ಜನರು ವೀಕ್ಷಣೆಯನ್ನು ಮಾಡಿದ್ದಾರೆ. ಬಹಳಷ್ಟು ಜನರು ಶೇರ್ ಮಾಡಿದ್ದಾರೆ, ಲೈಕ್ ಹಾಗೂ ಕಾಮೆಂಟ್ ಗಳನ್ನು ಮಾಡಿದ್ದಾರೆ. ಕಾಮೆಂಟ್ ಮಾಡಿದ ಮಂದಿ ಕಪ್ಪೆಗಳ ಈ ವರ್ತನೆಯನ್ನು ಕಂಡು ಅಚ್ಚರಿ ಯನ್ನು ವ್ಯಕ್ತಪಡಿಸಿದ್ದಾರೆ. ಕಪ್ಪೆಗಳ ಕೆಲಸಕ್ಕೆ ಮೆಚ್ಚುಗೆಯನ್ನು ನೀಡಿದ್ದಾರೆ.

Leave a Comment